ಪುಟ:ಕಂಬನಿ-ಗೌರಮ್ಮ.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

'ನನ್ಹುಚ್ಚು ಯಾಕಪ್ಪಾ ಈ ಸನ್ಯಾಸಿಗೆ ಹಿಡಿಯಿತು' ಎಂದು ಹೇಳಿಕೊಂಡು ರಾಜ ರತ್ನನಿಗೆ ಕಾಗದ ಬರೆದುಕೊಟ್ಟ. ಪೋಸ್ಟು ಮಾಡಿದರು. ಮರುದಿನವೇ ಪ್ರತ್ಯುತ್ತರ ಬಂತು ವಾಣಿಯದು. ವಾಣಿಯ ಒಪ್ಪಿಗೆ ಓದಿ ರತ್ನ ಕುಣಿದಾಡಿದೆ. ರಾಜ ಸನ್ಯಾಸಿಯ ಬೇಳೇಕಾಳು ಗೊತ್ತಾಯ್ತು' ಎಂದು ನಗುತ್ತಾ ತಾನೂ ಅವನೊಡನೆ ಕುಣಿಯತೊಡಗಿದ.

ರಾಜ-ರತ್ನ ಊಹಿಸಿದಷ್ಟು ತೊಂದರೆಯಾಗಲ್ಲ-ರತ್ನನ ತಂದೆ- ತಾಯಿಯರ ಅನುಮತಿಗೆ. ಸನ್ಯಾಸಿ ಸಂಸಾರಿಯಾಗುವುದಕ್ಕೆ ಒಪ್ಪಿದ್ದೇ ಸಾಕೆಂದು ಅವರು ಅದೇ ವರ್ಷ ರತ್ನನಿಗೆ ವಾಣಿಯನ್ನು ಮದುವೆ ಮಾಡಿಸಿದರು. ಮದುವೆಯ ದಿನ ರತ್ನ ನಬೆರಳಿನಲ್ಲಿದ್ದ ವಜ್ರದ ಉಂಗುರಕ್ಕೆ ರಾಜನ ಬೆರಳಿಗೆ ವರ್ಗವಾಯಿತು. 'ಸನ್ಯಾಸಿಗೆ ಮೋಕ್ಷವಾಯಿತು' ಎಂದ ರಾಜ. ಮರುವರ್ಷವೇ ಸೀತೆ ರಾಜನವಳಾದಳು. ಈಗ ಎಲ್ಲಾ ವಿಷಯದಲ್ಲಿ ರಾಜ-ರತ್ನರು ಒಂದು. ಅನುವು ದೊರೆತಾಗಲೆಲ್ಲಾ ರಾಜ ರತ್ನನನ್ನು ಪೀಡಿಸಿ ಹಾಸ್ಯವಾಡುತ್ತಿದ್ದ. ಸುಮ್ಮನಿರೆಂದರೆ-ಇದು ಸೊಸೆ ಕಾಲ, ಅತ್ತೆ ಕಾಲ ಕಳೆದುಹೋಯ್ತು ಎಂದು ಪ್ರತ್ಯುತ್ತರವಿತ್ತು ರತ್ನನ ಬಾಯಿಗೆ ಬೀಗ ಹಾಕುತ್ತಿದ್ದ.

ಜೂನ ೧೯೩೪

೩೧