ಪುಟ:ಕಂಬನಿ-ಗೌರಮ್ಮ.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦

'ಇಷ್ಟರ ಮಟ್ಟಿಗೂ ಸನ್ಯಾಸ ಈಗ್ಬಂತೇ ? ಅವಳು ನಿನ್ನ ಮದ್ವೆ ಆದ್ರೆ ನೀನು ತಾಳ ಹೊಡಿಯೋಕೆ ಕಲ್ತ್ಕೊ, ಸರಿಯಾಗುತ್ತೆ ಆಗ-

ಲೋ, Don't joke. I am really serious about this matter.

'I am sorry -ಆದ್ರೆ ನಿನ್ತಂದೆತಾಯಿ ಒಪ್ತಾರೇನೋ ?'

ಅವರನ್ನೊಪ್ಸೋದು ನನ್ನ ಕೆಲ್ಸ-ವಾಣಿ ಒಪ್ಪಬೇಕಲ್ಲ.'

'ಅಯ್ಯೋ ಸನ್ಯಾಸೀ-ಸಂಸಾರದೆ ಹಳ್ಳಕ್ಕೆ ಬೀಳೋ ಕಾಲ ಬಂತೆ ನಿನ್ಗೆ? ನಿನ್ನ ಸ್ಥಿತಿ ನೋಡಿ ಅಳಬರುತ್ತೆ ನನ್ಗೆ.'

'ಮುಚ್ಕೋಳೋ ಬಾಯಿನ.'

'ಇದು ಸೊಸೆಕಾಲ ಕಣೋ-ಅತ್ತೇಕಾಲ ಕಳೆದು ಹೋಯ್ತು-'

'ರಾಜ-'

ಓದುತ್ತಾ ಕೂತಿದ್ದ ರಾಜ ತಲೆ ಎತ್ತಿ 'ಏನ್ರತ್ನ' ಎಂದ.

'ಸ್ವಲ್ಪ ಬಾ ಇಲ್ಲಿ.'

'ಏನೋ ಬರೀತಿದೀಯ-ಹೇಳ್ಕೊಡ್ಬೇಕ ನಾನೇನಾದ್ರೂ?'

'ಅದೇ ಕೂಗೋದು ಬಾ ಅಂತ.'

'ಅಯ್ಯೋ ಸನ್ಯಾಸೀ, ಲವ್ ಲೆಟರ್ ಬರೀಲಿಕ್ಕೂ ನಿನಗೆ ಅಭ್ಯಾಸವಾಗಿ ಬಿಟ್ಟಿದೆಯೇ ?'

'ಹಾಸ್ಯ ಕೊನೆಗ್ಮಾಡು-ಸ್ವಲ್ಪ ನೋಡು ಸಾಕೋ ಹಿಗಿದ್ರ್ಲೆ ಓದಿನೋಡಿ ರಾಜ ಬಿದ್ದು ಬಿದ್ದು ನಗತೊಡಗಿದೆ.

'ಇದೇನ್ರತ್ನ, ಸಿನಿಮಾ ನೋಡಿ ಬರೆದ ಹಾಗಿದೆ-ಓದಿದ್ಕೂಡೆ' ವಾಣಿ ನಕ್ಕು ನಕ್ಕು ಸತ್ತೋದಾಳು.'

'ಮತ್ಹೇಗೋ ಬರಿಯೋದು-ಅನುಭವಸ್ಥ ನೀನಾದ್ರೂ ಸ್ವಲ್ಪ ಹೇಳ್ಕೊಡ್ಬಾರ್ದೇನೋ ? '