ಪುಟ:ಕಥಾವಳಿ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ನಾಗವಲ್ಲಿಯ ಸಾಹಸಕ್ಕೆ ಮೆಚ್ಚಿ ಆಶೀರ್ವದಿಸಿ, ಅವರಿಬ್ಬರನ್ನೂ ನಕುಲ ರಾಯನಲ್ಲಿಗೆ ಕಳುಹಿಸಿಕೊಟ್ಟನು. ಅಲ್ಲಿ ನಾಗರಾಜಕುಮಾರ ನಾಗವಲ್ಲಿ ಯರಿಗೆ ಮದುವೆಯು ಬಹು ಸಂಭ್ರಮದಿಂದ ನೆರವೇರಿತು. ೧೦. ಕಾಗೆಯೂ ಗುಬ್ಬಿ ಯೂ. ಒಂದು ದಿನ ಬೆಳಿಗ್ಗೆ ಒಂದು ಬಾವಿಯ ಕಟ್ಟೆಯ ಮೇಲೆ ಒಂದು ಗುಬ್ಬಿಯು ಕುಳಿತುಕೊಂಡು ತನ್ನ ಗರಿಯನ್ನು ಸರಿಮಾಡಿಕೊಳ್ಳುತಿದ್ದಿತು. ಆಗ ಒಂದು ಕಾಗೆಯು ಎಲ್ಲಿಂದಲೋ ಹಾರಿ ಬಂದು ಅಲ್ಲಿಯೇ ಕುಳಿತು, ತನ್ನ ಕೊಕ್ಕನ್ನು ಮಸೆಯುತ್ತಾ ಹಾಗೆಯೇ ಸ್ವಲ್ಪ ತನ್ನ ಕತ್ತನ್ನು ಕೊಟ್ಟ ಮಾಡಿಕೊಂಡು, ರೆಕ್ಕೆಯನ್ನು ನೋಡಿಕೊಳ್ಳುತಿದ್ದಿತು. ಆಗ ಗುಬ್ಬಿ ಯು ಕಾಗೆಯನ್ನು ನೋಡಿ- ಏನೇ, ಕಾಗಕ್ಕ ! ನಿನ್ನ ಗರಿ ಏನು ಚೆನ್ನಾಗಿದೆ ಎಂದು ನೋಡಿಕೊಳ್ಳುತ್ತೀಯೆ ? ಹೇಳು - ಎಂದಿತು. ಇದನ್ನು ಕೇಳಿ ಕಾಗೆಯು- ನಿನ್ನದೇನು ಚೆನ್ನಾಗಿದೆ ಹೇಳು?ಎಂದಿತು. ಗುಬ್ಬಿಯು-ನನ್ನ ಗರಿಯೆ ! ನಿನ್ನ ಗರಿಯ ಬಣ್ಯ ಸೊಗಸಾಗಿದೆ~ ಎಂದಿತು. ಕಾಗೆಯು-ನನ್ನ ಗರಿಯ ಬಣ್ಯವೇ ಸೊಗಸು-ಎಂದಿತು. ಹೀಗೆ ಕಾಗೆಯೂ ಗುಬ್ಬಿಯ ಬಹಳ ಹೊತ್ತು ಜಗಳವಾಡುತ್ತಿದ್ದುವು. ಕೊನೆಗೆ ಕಾಗೆಯು-ಎಲೆ, ಗುಬ್ಬ ಕ್ಯಾ ! ನೀನು ಸಾವಿರ ಹೇಳಿಕೆ ; ನನಗೇನು ! ಇರುವುದನ್ನು ಹೇಳುತ್ತೇನೆ, ಕೇಳು, ಬಿಸಿಲು ಕಾಲಕ್ಕೆ ನಿನ್ನ ಗರಿ ತಡೆದರೂ ತಡೆಯಬಹುದು. ಚಳಿಗಾಲಬಂದರೆ, ನೀನು ನಡುಗುತ್ತ ಕೂತಿರುವುದೇ, ನಾನು ಹಾರಾಡುತಿರುವುದೇ ? ಎ೦ದು ಭರನೆ ಹಾರಿ ಹೆಯಿತು.