ವಿಷಯಕ್ಕೆ ಹೋಗು

ಪುಟ:ಕಥಾವಳಿ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨ ಇವೇ ಮುಂತಾದ ಒಳ್ಳೆಯ ಹೂವಿನ ಬಳ್ಳಿಗಳೂ, ಗಿಡಗಳೂ; ತೆಂಗು, ಮಾವು, ಹಲಸು, ಕಿತ್ತಿಳೆ, ನಿಂಬೆ, ಬಾಳೆ ಇವೇ ಮುಂತಾದ ಹಣ್ಣಿನ ಗಿಡ ಗಳೂ; ಗಿಳಿ, ನಲು, ಪಾರಿವಾಳ ಇವೇ ಮೊದಲಾದ ಪಕ್ಷಿಗಳೂ ತುಂಬಿ ದ್ದುವು. ಇ೦ತಹ ಮನೋಹರವಾದ ಉದ್ಯಾನವನದಲ್ಲಿ ಒಂದು ಮಾವಿನ ಮರದ ಬಳಿ ಒಂದೇ ಒಂದು ಗೊಬ್ಬಳಿಯ ಗಿಡವಿತ್ತು, ಆ ಮಾವಿನಮರ ದಲ್ಲಾದರೂ ಬೇಕಾದಷ್ಟು ಹಣ್ಣುಗಳು ಇದ್ದುವ, ಆ ಹಣ್ಣುಗಳನ್ನು ತೆಗೆದು ತಿನ್ನ ಬೇಕೆಂದು ಬಂದವರ ಕಾಲಿಗೆ, ಆ ಗೊಬ್ಬಳಿಯ ಮರದ ಸುತ್ತ ಲೂ ಉದಿರಿದ್ದ ಮುಳ್ಳು ಚುಚ್ಚಿಕೊಳ್ಳುತ್ತಿತ್ತು. ಹಣ್ಣು ಸಿಕ್ಕದೆ ಮುಳ್ಳು ಚುಚ್ಚಿದ ವ್ಯಥೆಯಿಂದ ಎಲ್ಲರೂ ಹಿಂದಿರುಗುತ್ತಿದ್ದರು. ಇದನ್ನು ಕಂಡು, ಮಾವಿನ ಮರಕ್ಕೆ ಬಹು ಕೋಪವ್ರಂಟಾಗಿ, ಅದು ಗೊಬ್ಬಳಿಯ ಮರವನ್ನು ಕುರಿತು- ಛೇ ! ಪಾಪಿ! ನೀನಂತೂ ಹಣ್ಣು ಬಿಡುವುದಿಲ್ಲ, ನನ್ನಲ್ಲಿರುವ ಸವಿಯಾದ ಹಣ್ಣನ್ನು ತಿಂದು ಆನಂದಪಡಲು ಬರುವವರನೂ, ನೀನು ಸೇರ ಗೋಡೆಯಲ್ಲ ! ನೀನು, ನನಗೂ ಜನರಿಗೂ ಎಂತಹ ಕಂಟಕನಾಗಿರುವೆ ! ನಿನಗಿಂತಲೂ ಕಂಟಕರಾದವರು ಯಾರಾದರೂ ಉಂಟೆ ? ಈ ಪ್ರಣ್ಯಭೂಮಿ ಯಲ್ಲಿ ನಿನಗೇನು ಕೆಲಸ ? ನೀನು ಏಕೆ ಬೇಗ ಸಾಯಬಾರದು !- ಎಂದು ಬಹು ಕಠಿನವಾಗಿ ಜರಿಯಿತು. ಅದಕ್ಕೆ ಗೊಬ್ಬಳಯು ಕೋಪಗೊಂಡು 'ಎಲೆ ಮಾವಿನಮರವೇ ! ನಿನಗೇಕೆ ಇಷ್ಟು ಅಹಂಕಾರ ! ನಿನ್ನ ಹಣ್ಣು ಇರುವುದೆಲ್ಲ ಇನ್ನೆಷ್ಟು ದಿನ ! ನಿನ್ನಲ್ಲಿ ಒಂದುವರ್ಷ ಹೆಚ್ಚಾಗಿ ಹಣ್ಣು ಬಿಟ್ಟರೆ ಇನ್ನೊಂದುವರ್ಷ ಎಲೆಯ ಕೊಂಬೆಯ ಹೆಚ್ಚಾಗಿ ಬಿಡುತ್ತವೆ ! ನೀನೇ ಟೊಳ್ಳು ! ನೀನು ಜನರಿಗೆ ಮಾಡುವ ಅಂತಹ ದೊಡ್ಡ ಉಪಕಾರವೇನು ? 'ನನ್ನ ನೆರಳಲ್ಲಿ ಜನರು ಕೂಡುವರೆಂಬೆಯೋ ?' ಆಗಬಹುದು ಆಗಬಹುದು ! ನಿನ್ನ ಮೇಲೆ ಹರಿ ದಾಡುವ ಕೆಂಜಿಗದ ಕಡಿತವನ್ನು ಕಾಣದ ಬೆಪ್ಪರು ಹಾಗೆ ಕೊಡಬೇಕು ! 'ಗಿಣಿಗಳು! ಕೋಗಿಲೆಗಳು ! ಬಂದು ನನ್ನ ಮೇಲೆ ಕೂಡುವುವ ಎಂಬೆಯೋ?' ಅಹುದು ಅಹುದು ! ನಿನ್ನ ಅಹಂಕಾರವನ್ನು ನೋಡಿ ನಿನ್ನ ಹಣ್ಣನ್ನು ಕಡಿದು ಭಿನ್ನ ಭಿನ್ನ ಮಾಡಲು ಗಿಳಿಗಳು ಬರುವವು. ಸಾಕಿದವನನ್ನು ಕಚ್ಚಿ ಅಟ್ಟುವ ಕೆಲಸದಲ್ಲಿ ನಿಪ್ಪಣತೆಯುಳ್ಳ ಕೋಗಿಲೆಗಳು ನಿನ್ನ ಮರೆ