ವಿಷಯಕ್ಕೆ ಹೋಗು

ಪುಟ:ಕಥಾವಳಿ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೧ ಹೀಗಿರುವಲ್ಲಿ ಆ ಗುಡಿಯ ಹಳೆಯ ಉಗ್ರಾಣದಲ್ಲಿ ಸೇರಿಕೊಂಡಿದ್ದ ಒಂದು ಇಲಿಯು ಹಾವಿನ ಬುಟ್ಟಿಯನ್ನು ನೋಡಿ ಕಾಳು ತುಂಬಿಟ್ಟಿರುವ ಬುಟ್ಟಿಯೆಂದು ಮೆಲ್ಲನೆ ಬಂದು, ಸ್ವಲ್ಪ ಸ್ವಲ್ಪವಾಗಿ ಆ ಬುಟ್ಟಿಯನ್ನು ಕೊರೆದು, ಬಹಳ ಆಶೆಯಿಂದ ಬುಟ್ಟಿಯೊಳಗೆ ನುಗ್ಗಿತು. ಹಸಿದಿದ್ದ ಹಾವಿಗೆ ಇಳಿಯನ್ನು ನೋಡಿ ಬಹುಸಂತೋಷವಾಯಿತು' ಅದು ಒಳಗೆ ಬಂದೊಡನೆ ಹಾವು ಫಕ್ಕನೆ ನುಂಗಿ, ಇಲಿಯು ಮಾಡಿದ ಕನ್ನದಿಂದ ಸರಸರನೆ ಹರಿದು ಹೋಗಿ, ಹತ್ತಿರವಿದ್ದ ಒಂದು ಹುತ್ತವನ್ನು ಸೇರಿತು. ಇತ್ತಲಾಗಿ ಹಾವಾಡಿಗನು ಸ್ವಲ್ಪ ಚೇತರಿಸಿಕೊಂಡು ಎದ್ದು ನೋ ಡುವಲ್ಲಿ, ಬುಟ್ಟಿಯು ಬರಿದಾಗಿದ್ದಿತು. ಹಾವೇ ಬುಟ್ಟಿಯನ್ನು ಕೊರೆದು ಕೊಂಡು ಹೋಯಿತೆಂದು ಆಶ್ಚರ ಪಡುತ್ತಿದ್ದನು. ೨೮, ಕಣಜ ಮತ್ತು ಜೇನುಹುಳು. ಒಂದು ಪಾಳು ಗುಡಿಯ ಗೋಡೆಯ ಮೂಲೆಯಲ್ಲಿ ಒಂದು ಕಣ ಜವು ಗೂಡು ಕಟ್ಟಿ ಕೊಂಡು ಇದ್ದಿತು, ಒಂದು ಜೇನು ಹುಳುವ ಗೂಡು ಕಟ್ಟುವುದಕ್ಕೆ ಅನುಕೂಲವಾದ ಸ್ಥಳವನ್ನು ಹುಡುಕುತ್ತಾ ಹುಡುಕುತ್ತಾ, ಆ ಕಣಜದ ಗೂಡಿನ ಹತ್ತಿರಕ್ಕೆ ಬಂದಿತು. ಕಣಜವ ಜೇನು ಹುಳುವನ್ನು, ಕರೆದು, ಉಪಚರಿಸಿ, “ ಅಣ್ಯ ! ನಿನ್ನನ್ನು ಒಂದು ಮಾತು ಕೇಳಬೇಕೆಂದು ಇದ್ದೇನೆ ' ಎಂದಿತು, ಜೇನುಹುಳುವು ಅದಕ್ಕೆ “ ಅದೇನು ಕೇಳು, ತಿಳಿದಿ ದ್ದರೆ ಅಗತ್ಯವಾಗಿ ಹೇಳುತ್ತೇನೆ' ಎಂದಿತು. ಆಗ ಕಣಜವು “ ಜನರು ನಿನ್ನ ನ್ನು ಕಂಡರೆ ಆದರಿಸುವುದೇಕೆ ? ನನ್ನ ನ್ನು ಹಿಂಸಿಸುವುದೇಕೆ ? ನಾವಿಬ್ಬರೂ ಒಂದೇ ರೀತಿಯಲ್ಲಿಲ್ಲವೆ ? ನಮ್ಮಿಬ್ಬರಿಗೂ ಚೆನ್ನಾದ ರೆಕ್ಕೆಗಳಿಲ್ಲವೆ ? ನಮ್ಮಿಬ್ಬರಿಗೂ ಸಿಹಿಯಾದ ಪದಾ ರ್ಥದಲ್ಲಿ ಪ್ರೀತಿಯಿಲ್ಲವೆ ? ನಮ್ಮ ಗೋಜಿಗೆ ಜನಗಳು ಬಂದರೆ ನಾವಿಬ್ಬರೂ ಕಚ್ಚು ವವಲ್ಲವೆ ? ಹೀಗಿರುವಾಗ, ನೀನು ಬಂದರೆ ನಿನಗೆ ಎಲ್ಲಾ ಅನುಕೂಲ