ವಿಷಯಕ್ಕೆ ಹೋಗು

ಪುಟ:ಕಥಾವಳಿ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೧ ಬೇಕಾದುದನ್ನು ಅಣಿಮಾಡಿದನು. ಸದಾ ನಿರ್ಮಲಚಿತ್ತಳಾದ ಆ ಚಾರು ಮತಿಯು ಆ ದಿನ ವರಲಕ್ಷ್ಮಿಯನ್ನು ಮನಸ್ಸಿನಿಂದ ಪೂಜೆಮಾಡಿದಳು' ಲಕ್ಷ್ಮಿಯು ಬೇಕಾದ ವರವನ್ನಿತಳು. ಚಾರುಮತಿಯ ಮನೆಯಲ್ಲಿ ಧನ ವೂ ಧಾನ್ಯವೂ ಉಕ್ಕಿದುವ, ಚಾರುನುತಿಯು ಆ ಸಂಪತ್ತಿನಿಂದ ಬಡಬಗ್ಯ ರಿಗೆ ಅನ್ನ ದಾನ ಮಾಡುತ್ತಾ, ಐಶ್ವರ್ಯ ಬಂದಿತೆಂದು ಗಂಡನನ್ನು ತಿರಸ್ಕ ರಿಸದೆ, ಎಂದಿನಂತೆ ಸ್ವಲ್ಪವೂ ಬೇಸರವಿಲ್ಲದೆ ಗಂಡನನ್ನು ಉಪಚರಿಸುತ್ತಾ ವರಲಕ್ಷ್ಮೀಯನು ಪೂಜಿಸುತ್ತಾ ಸೌಖ್ಯವಾಗಿದ್ದಳು. ೩೪, ಕಡುಬಿನ ಕಥೆ. ಒಂದಾನೊಂದು ಪಟ್ಟಣವಿದ್ದಿತು. ಆ ಪಟ್ಟಣದಲ್ಲಿ ಶಾಸ್ತ್ರಿಗಳೆಬ್ಬ ರಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು, ಅವರಿಬ್ಬರಿಗೂ ಚೆನ್ನಾ ಗಿ ವಿದ್ಯೆಯನು ಕಲಿಸಿ, ದೊಡ್ಡವಳನ್ನು ತಮ್ಮ ಸೋದರದ ಕಡೆಯ ಒಬ್ಬ ಹುಡುಗನಿಗೆ ಮದುವೆ ಮಾಡಿಕೊಟ್ಟಿದ್ದರು. ಆ ಹುಡುಗನು ಒಂದು ಹಳ್ಳ ಯಲ್ಲಿ ವಾಸವಾಗಿದ್ದನು. ಮದುವೆಯಾದ ಕೆಲವು ವರ್ಷಗಳಲ್ಲಿ ಆ ಹುಡು ಗನ ತಂದೆತಾಯಿಗಳು ತಿರಿಹೋಗಲು, ಆ ಹುಡುಗನು ಮಾವನ ಮನೆಗೆ ಹೋಗಿ, ಕೆಲವು ದಿನಗಳು ಅಲ್ಲಿಯೇ ಇದ್ದು ತರುವಾಯ ತನ್ನ ಹೆಂಡತಿ ಯೊಡನೆ ಹಳ್ಳಿಗೆ ಹೋಗಬೇಕೆಂದು ಹೇಳಿದನು. ಆಗ ಶಾಸ್ತ್ರಿಗಳು ಅಳಿಯ ನಿಗೂ ಮಗಳಿಗೂ ಒಳ್ಳೆಯ ಔತಣವನ್ನು ಮಾಡಿ ಉಡುಗೊರೆಗಳನ್ನು ಕೋ ಟ್ಟು ಕಳುಹಿಸಿದರು. ದಾರಿಯಲ್ಲಿ ಬರುತ್ತಾ, ಮಧ್ಯಾಹ್ನದ ಊಟವನ್ನು ಜ್ಞಾಪಿಸಿಕೊಂ ಡು, 'ಎಲೆ, ಎಲೆ, ನಾವು ಊರಿಗೆ ಹೋದೊಡನೆ ನೀನು ಅದನ್ನು ಮಾಡಿ ಹಾಕಬೇಕು, ನೋಡು. ಅದು ಬಹು ರುಚಿಯಾಗಿದ್ದಿತು' ಎಂದು ಗಂ ಡನು ಹೆಂಡತಿಗೆ ಹೇಳಿದನು. “ ಅದು' ಎಂದರೆ ಯಾವುದೋ ತಿಳಿಯದೆ, ಅದು ಯಾವದು? ಎಂದು ಕೇಳಿದಳು. ಅದಕ್ಕೆ ಗಂಡನು, “ಅದುಕಾಣೆ ಎಂದರೆ, ಅದು ಬಹು ಚೆನ್ನಾಗಿದ್ದಿತಲ್ಲೇ! ಅದು!” ಎಂದನು. ಜಾಣೆ