ವಿಷಯಕ್ಕೆ ಹೋಗು

ಪುಟ:ಕಥಾವಳಿ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೮ ಕುಶರು ಕುದುರೆ, ವಸ್ತ್ರಾಭರಣಗಳೊಡನೆ ತಾಯಿಯಾದ ಸೀತಾದೇವಿಯ ಲ್ಲಿಗೆ ಬಂದು ಬಹು ಸಂಭ್ರಮದಿಂದ ತಾವು ತಂದುದನ್ನೆಲ್ಲಾ ಒಪ್ಪಿಸಿ,ನಡೆದು ದನ್ನೆಲ್ಲಾ ಹೇಳಿದರು, ಮಕ್ಕಳನ್ನು ನೋಡಿ ಸಂತೋಷವುಂಟಾದರೂ ಅವ ಭು ಶ್ರೀರಾಮನನ್ನು ನೆನಸಿಕೊಂಡು ಅಳಲು ಮೊದಲುಮಾಡಿದಳು. ಮಕ್ಕ ಳು ಕಾರಣ ತಿಳಿಯದೆ ಮಂಕಾಗಿ ನಿಂತರು. ಅಷ್ಟರಲ್ಲಿ ವಾಲ್ಮೀಕಿ ಏರುಷಿ ಗಳು ಬಂದು, ಎಲ್ಲರನ್ನೂ ಸಮಾಧಾನಪಡಿಸಿ, ಶ್ರೀರಾಮ ಸೀತಾದೇವಿಯ ರನ್ನು ಒಟ್ಟುಗೂಡಿಸಿ, ಲವಕುಶರನ್ನು ಒಪ್ಪಿಸಿ, ಅವರಿಗೆ ತಾಯಿತಂದೆಗೆ ೪ಾದ ಸೀತಾರಾಮರನ್ನು ತೋರಿಸಿ, ಸುಖಿಗಳನ್ನಾಗಿ ಮಾಡಿದರು. ೩೯, ಪಿಂಡಾರಿಯವರು. ಆ8 1 ಈಗಿನಕಾಲ ಎಷ್ಟು ಸುಖವಾಗಿದೆಯೆಂದು ಹೇಳಬೇಕು, ಹಿಂದೆ ನಮ್ಮ ಜನರು ಪಡುತಿದ್ದ ಕಷ್ಟವನ್ನು ನೆನಸಿಕೊಂಡರೆ ಈಗಲೂ ನಮ್ಮ ಮೈ ನಡುಕ ಹಿಡಿವುದು, ಅದೇನಂಬಿರೋ ? ಹೇಳುವೆನು ಕೇಳಿ, ಈಗ ನಾವು ಬೇಕಾದಷ್ಟು ಹಣವನ್ನು ಕೂಡಿಹಾಕಬಹುದು, ಬೇಕಾದ ಒಡವೆ ಗಳನ್ನು ಇಟ್ಟು ಕೊಂಡು ತಿರುಗಾಡಬಹುದು, ಬೇಕಾದ ಪೈರನ್ನು ಮಾಡ ಬಹುದು, ಬೇಕಾದಷ್ಟು ಬೆಳೆಯನ್ನು ಬೆಳೆಯಬಹುದು. ಮನಸ್ಸು ಬಂದೆ ಡೆಗೆ ಹೋಗಬಹುದು, ನಮ್ಮಲ್ಲಿ ಎಷ್ಟು ಹಣಕಾಸು ಇದ್ದರೂ, ನಮ್ಮ ಗದ್ದೆಯಲ್ಲಿ ಎಷ್ಟು ಚೆನ್ನಾದ ಬೆಳೆ ಬೆಳೆದಿದ್ದರೂ, ನಮ್ಮ ತೋಟದಲ್ಲಿ ಎಂತಹ ಹಣ್ಣುಗಳು ಬಿಟ್ಟಿದ್ದರೂ, ರಾತ್ರಿಯ ವೇಳೆ ನಾವು ಒಂದೇ ಮನಸ್ಸಿನಲ್ಲಿ ಮಲ ಗಿಕೊಂಡು, ಸುಖವಾಗಿ ನಿದ್ರೆ ಮಾಡಬಹುದು. ಧರ್ಮರಾಜ್ಯವೆಂದರೆ ಇದೇ ಧರ್ಮರಾಜ್ಯವೆಂದು ಹೇಳಬಹುದು. ಹಿಂದಿನ ಕಾಲದಲ್ಲಿ ಹೀಗೆ ಸ್ವಸ್ಥಚಿತ್ತರಾಗಿಲು ಅವಕಾಶವಂಟೆ ? ಈಹೊತ್ತೇನು ? ಮಗ್ಗುಲ ದುರ್ಗದ ಪಾಳೆಯಗಾರ ಬಂದು ಪೈರನ್ನು ಹಾ ಇುಮಾಡಿದ ; ನಾಳೇ ಏನು ? ತುರುಕರ ದಂಡು ಬಂದು, ಕೊಂದವರನ್ನು ಕೊಂದು, ಸಿಕ್ಕಿದುದನ್ನೆಲ್ಲಾ ಎತ್ತಿಕೊಂಡು ಹೋಯಿತು, ಮತ್ತೇನು ! ಓಹೋ ! ಮರಾಟಿಯವರು ಬರುತಿದ್ದಾರೆ ! ಪಿಂಡಾರಿಯವರು ಬರುತಿ ದ್ರಾರೆ ! ಜಾಗ್ರತೆ!ಜಾಗ್ರತೆ ಅಗೋ! ಮಗ್ಗುಲ ಹಳ್ಳಿಗೆ ಬೆಂಕಿಯನ್ನಿಕ್ಕಿದರು;