ವಿಷಯಕ್ಕೆ ಹೋಗು

ಪುಟ:ಕಥಾವಳಿ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೮ ನಿಗೇ ನನ್ನನ್ನು ಕೊಟ್ಟು ವಿವಾಹ ಮಾಡಬೇಕು' ಎಂದು ತಂದೆಯನ್ನು ಬೇಡಿ ಕೊಂಡಳು. ಕೊನೆಗೆ ಸಾವಿತ್ರಿಗೂ ಸತ್ಯವಾನನಿಗೂ ಮದುವೆಯಾಯಿತು. ಸಾವಿತ್ರಿಯು ಗಂಡನೊಡನೆ ಹೊರಟು ದು ಮತ್ತೇನನಿದ್ದ 'ಆಶ್ರಮಕ್ಕೆ ಹೋದಳು, ಅಲ್ಲಿ ಅತ್ತೆ ಮಾವಂದಿರನ್ನೂ, ಸತ್ಯವಾನನನ್ನೂ ಸೇವಿಸುತ್ತಾ ಆಶ್ರಮಕ್ಕೆ ಬಂದವರನ್ನೂ ಆದರಿಸುತ್ತಾ ಮಹಾ ಪತಿವ್ರತೆಯೆಂದು ಹೆಸರಾ ಗಿದ್ದಳು, ಒಂದು ವರ್ಷವು ಆಗುತ ಬಂದಿತು, ನಾರದರ ಮಾತು ಸುಳ್ಳಾ ಗದು ಎಂದು, ಗಂಡನು ಸಾಯುವುದಕ್ಕೆ ಮರು ದಿವಸ ಮುಂಚಿನಿಂ ದಲೂ ಸಾವಿತ್ರಿಯು ಬಹು ಕಠಿನವಾದ ವ್ರತವನ್ನು ಹಿಡಿದಿದ್ದಳು, ಪತಿಯು ಸಾಯುವನೆಂದು ತಾನೊಬ್ಬಳು ತಿಳಿದು ಇದ್ದಳೇ ಹೊರತು, ಇತರ ಯಾರಿಗೂ ಅವಳು ಹೇಳಿರಲಿಲ್ಲ. ಆ ಕೊನೆಯ ದಿವಸ ಮಧ್ಯಾಹ್ನ ಸತ್ಯವಾನನು ಕೊಡಲಿಯನ್ನು ಹೆಗಲಿಗೆ ಹಾಕಿಕೊಂಡು ಸವ್ರದೆಯನ್ನು ತರುವುದಕ್ಕೆ ಕಾಡಿಗೆ ಹೊರಟನು. ಸಾವಿತ್ರಿ ಯ ಆದಿನ ಗಂಡನ ಜತೆಯಲ್ಲಿಯೇ ಹೊರಟಳು. ಬರಬೇಡವೆಂದು ಪತಿಯು ಎಷ್ಟು ಹೇಳಿದರೂ ಅಂದು ಕೇಳಲಿಲ್ಲ. ಇಬ್ಬರೂ ಹೊರಟರು. ಸತ್ಯವಾನನು ಬಹಳ ಹೊತ್ತು ಕಟ್ಟಿಗೆಯನ್ನು ಕಡಿದು ಆಯಾಸದಿಂದ ಕುಳಿತುಕೊಂಡನು. ಆಗ ಅವನಿಗೆ ತಲೆನೋಂದಹಾಗೆ ಆಯಿತು, ಹತ್ತಿರದಲ್ಲಿದ್ದ ಸಾವಿತ್ರಿಯನ್ನು ಕರೆದು, ಪ್ರಿಯಳೆ! ನನಗೆ ತಲೆನೋವು ಹೆಚ್ಚಾಗುತ ಇದೆ, ಏಕೋ ಬಹು ಸಂ ಕಟವಾಗುತ್ತಿದೆ; ಕುಳಿತುಕೊಳ್ಳಲಾರೆ' ಎಂದನು. ತನ ಪತಿಗೆ ಮರಣಕಾಲವು ಸವಿಾಪವಾಯಿತೆಂದು ತಿಳಿದು, ಸಾವಿತ್ರಿಯು, ಪತಿಯನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಸತ್ಯವಾನನ ಮುಖವನ್ನೇ ನೋಡುತಿದ್ದಳು. ೪೬, ಸಾವಿತ್ರಿಯ ಕಥೆ-೨ ನೆಯ ಭಾಗ. ಒಂದು ಕ್ಷಣದಲ್ಲಿಯೇ ಯಮನು ಬಂದು ನಿಂತು, ಸತ್ಯವಾನನನ್ನು ದೃಷ್ಟಿಸಿ ನೋಡುತ್ತಿದ್ದನು. ಆಗ ಸಾವಿತ್ರಿಯು ಕತ್ತೆತ್ತಿ, ಯಮನನ್ನು ನೋಡಿ, “ ನಿಮ್ಮನ್ನು ನೋಡಿದರೆ ನೀವು ಮನುಷ್ಯರಂತೆ ಇಲ್ಲ. ಅಯ್ಯಾ! ನೀವು ಯಾರು ?” ಎಂದು ಕೇಳಿದಳು. ಯಮನು ಅದಕ್ಕೆ, ಅಮ್ಮಾ !