ಪುಟ:ಕಥಾ ಸಂಗ್ರಹ - ಭಾಗ ೨.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಂಜನೇಯನು ಸೀತೆಯನ್ನು ಕಂಡು ಲಲಕಾಪಟ್ಟಣವನ್ನು ಸುಟ್ಟುದು 93 ವನ್ನು ಕೊಟ್ಟು ಕೈಮುಗಿದು ನಿಂತು ಕೊಳ್ಳಲು ; ಆಗ ಸೀತೆಯು ಸಂಶಯವನ್ನು ಬಿಟ್ಟು ಆ ಮುದ್ರೆಯುಂಗುರವನ್ನು ರಾಮನೆಂದೇ ಭಾವಿಸಿ ಸಂತೋಷಸಮುದ್ರದಲ್ಲಿ ಮುಣುಗಿ-ಎಲೆ ತಂದೆಯೇ, ಹನುಮಂತನೇ, ನೀನು ಹೇಳಿದ ಮಾತುಗಳೆಲ್ಲಾ ಸತ್ಯ ವಾದುವುಗಳೇ, ಶ್ರೀರಾಮಲಕ್ಷ್ಮಣರು ಕುಶಲದಲ್ಲಿದ್ದಾರೆಯೇ? ರಾಘವನು ನನ್ನ ಎಷ ಯದಲ್ಲಿ ಬೇಸರಿಕೆಯುಳ್ಳವನಾಗಿದ್ದಾನೆಯೇ ? ಹೇಳಯ್ಯಾ ಎಂದು ಕೇಳಲು; ಆಂಜನೇ ಯನು--ಎಲೈ ತಾಯಿಯೇ, ರಾಮನೂ ಲಕ್ಷ್ಮಣನೂ ಕುಶಲಿಗಳಾಗಿದ್ದಾರೆ. ರಘು ವೀರನು ಯಾವಾಗಲೂ ನಿನ್ನ ಚಿಂತೆಯಲ್ಲೇ ಇದ್ದಾನೆ ನೀನು ಚಿಂತೆಯನ್ನು ಬಿಡು. ನಿನ್ನ ರಸನಾದ ಶ್ರೀರಾಮನನ್ನು ಇನ್ನೊಂದು ತಿಂಗಳಲ್ಲಿಯೇ ಇಲ್ಲಿಗೆ ಕರೆದುಕೊಂಡು ಬಂದು ಪಾಪಿಷ್ಟನಾದ ಈ ದಶಕಂಧರನನ್ನು ಕೊಲ್ಲಿಸಿ ನಿನ್ನನ್ನು ಬಿಡಿಸುವೆನು, ಈ ಭಾಗ ದಲ್ಲಿ ಸಂಶಯವನ್ನು ಬಿಡು. ಧೈರ್ಯವುಳ್ಳವಳಾಗಿರು, ಶ್ರೀರಾಮನಿಗೆ ನಿನ್ನ ಕುರುಹನ್ನು ಕೊಡು ಎಂದು ಹೇಳಲು; ಜಾನಕಿಯು ಸಂತುಷ್ಟಾ೦ತರ೦ಗಳಾಗಿ ತನ್ನ ಮಲಿನಾಂಬ ರಾಂಚಲದಲ್ಲಿ ಕಟ್ಟಿ ಕೊಂಡಿದ್ದ ನಿರುಪಮ ಚೂಡಾರತ್ನ ವನ್ನು ಬಿಚ್ಚಿ - ಎಲೈ ಗುಣನಿ ಧಿಯೇ, ನೀನು ಇದನ್ನು ತೆಗೆದು ಕೊಂಡು ಹೋಗಿ ದುಷ್ಟ ಶಿಕ್ಷಾಧ್ಯಕ್ಷನಾದ ರಾಮ ನಿಗೆ ಕೊಡು. ಮಗನೇ, ರಾಕ್ಷಸರು ಮಹಾ ಮಾಯಾವಿಗಳು, ಮತ್ತು ಮನುಷ್ಯ ಭಕ್ಷಕರು. ನೀನು ಇನ್ನಿರಬೇಡ, ಬೇಗ ಹೋಗೆಂದು ಹೇಳಿ ಅವನನ್ನು ಅಗಲಲಾರದೆ ಬಾರಿಬಾರಿಗೂ ಉಪಚರಿಸಿ ಅಪ್ಪಣೆಯನ್ನು ಕೊಟ್ಟಳು. ಆಗ ಆಂಜನೇಯನು ಈ ದಶ ಶಿರಸ್ಕನಾದ ರಾಕ್ಷಸನಿಗೆ ತನ್ನ ಪರಾಕ್ರಮವನ್ನು ತೋರ್ಪಡಿಸದಿದ್ದರೆ ತನ್ನ ವೀರತ್ವಕ್ಕೆ ಕುಂದು ಬರುತ್ತದೆಂದು ಯೋಚಿಸಿ-ತಾಯಿಯೇ, ನಾನು ಹೊರಟಂದಿನಿಂದ ಇಂದಿ ನ ವರೆಗೂ ಅಶನವಿಲ್ಲದವನಾಗಿದ್ದೇನೆ. ಅದು ಕಾರಣ ಈ ವನದಲ್ಲಿ ಹಣ್ಣುಗಳನ್ನು ತಿನ್ನ ಬೇಕೆಂದು ಆಶಿಸುತ್ತೇನೆ. ನನಗೆ ಅಪ್ಪಣೆಯನ್ನು ಕೊಡೆಂದು ಕೇಳಲು; ಸೀತೆಯು ಎಲೈ ಬಾಲಕನೇ, ಬಹು ಜನರಾಕ್ಷಸರು ಈ ವನವನ್ನು ಕಾದು ಕೊಂಡಿದ್ದಾರೆ. ಅವರು ಅರಿಯದಂತೆ ಭಕ್ಷಿಸಿಕೊಳ್ಳುವವನಾಗೆಂದು ಹೇಳಿ ಕಳುಹಿಸಿದಳು. ಆಗ ಮಹಾ ಪರಾಕ್ರಮಿಯಾದ ಹನುಮಂತನು ಪ್ರಳಯ ಕಾಲದ ಕುಲಿಶಕೋಟಿಯ ರಭಸದಂತೆಯ ಕಾಲಭೈರವನ ಆಟೋಪದಂತೆಯ ಸಕಲ ರಾಕ್ಷಸಜನರ ಹೃದಯಗಳು ತಲ್ಲಣಿಸು ವಂತೆಯ ಆರ್ಭಟಿಸಿ ಕಂಡ ಕಂಡ ಮರಗಳನ್ನು ಕಿತ್ತುರುಳಿಸಿ ಪಾದಘಾತದಿಂದ ವನಭೂಮಿಯನ್ನೆಲ್ಲಾ ವ್ಯತ್ಯಸ್ತವಳ್ಳುದನ್ನಾಗಿ ಮಾಡಿ ಸರಸ್ಸುಗಳ ಪಾವಟಿಗೆಗಳನ್ನೆಲ್ಲಾ ಕಿತ್ತಿಟ್ಟು ಚಿತ್ರಮಂಟಪಗಳಿಗೆ ಹಾರಿ ತೆನೆಗಳನ್ನೂ ಕಲಶಗಳನ್ನೂ ಕಂಬಗಳನ್ನೂ ಬೋದಿ ಗೆಗಳನ್ನೂ ವೇದಿಕೆಗಳನ್ನೂ ಮುರಿದುಹಾಕುತ್ತಿದ್ದನು. ಆಗ ಆ ವನವು ಮಗಿಲ್ಲದ ಮೊಗದಂತೆಯ ಚಂದ್ರನಕ್ಷತ್ರಗಳಿಲ್ಲದ ಇರುಳಂತೆಯ ಸೂರ್ಯನಿಲ್ಲದ ಹಗ ಅಂತೆಯ ಅಮಂಗಲಕರವಾಗಿಯ ಅಸಹ್ಯಕರವಾಗಿಯೂ ಇದ್ದಿತು. ಆಗ ಆ ವನ ದಲ್ಲಿದ್ದ ಪಕ್ಷಿಗಳೂ ಮೃಗಗಳೂ ಹನುಮಂತನ ರಭಸಕ್ಕೆ ಬೆದರಿ ಕೂಗಿಕೊಳ್ಳುತ್ತಾ ಓಡಿ ಹೋದುವು. ಆ ವನಪಾಲಕರಾದ ರಾಕ್ಷಸರು ಈ ಕಳವಳವನ್ನು ಕೇಳಿ ಎಚ್ಚೆತ್ತು ದಿಗ್ಲಮೆಯನ್ನು ಹೊಂದಿ ಆ ಮೇಲೆ ಖಡ್ಡಾ ದ್ಯಾಯುಧಗಳನ್ನು ತೆಗೆದು ಕೊಂಡು