ಪುಟ:ಕಥಾ ಸಂಗ್ರಹ - ಭಾಗ ೨.djvu/೧೦೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


94 ಕಥಾಸಂಗ್ರಹ-೪ ನೆಯ ಭಾಗ ಈ ಕೋಡಗವನ್ನು ಹಿಡಿ, ಹಿಡಿ ! ಹೊಡಿ, ಹೊಡಿ ! ಕಡಿ, ಕಡಿ ! ತಿವಿ, ತಿವಿ ! ಕವಿ, ಕವಿ ! ಎಂದು ಆರ್ಭಟಿಸಿಕೊಂಡು ಬರುತ್ತಿರಲು ; ಆಂಜನೇಯನು ದೊಡ್ಡ ಮರಗ ಳನ್ನು ಕಿತ್ತೆತ್ತಿ ಬಡಿದು ಆ ರಾಕ್ಷಸರನ್ನೆಲ್ಲಾ ಕೊಂದು ನಿಮೇಷಮಾತ್ರದಲ್ಲಿ ಹೆಣಗ ಳನ್ನು ಬಣಬೆಗಳಂತೆ ಒಟ್ಟಿದನು, ಆ ಮೇಲೆ ಸುಮಾಲಿಯೆಂಬ ರಾಕ್ಷಸನನ್ನು ಕರೆದುಎಲೋ, ನೀನು ಹೆಣ್ಣಳ್ಳನಾದ ರಾಕ್ಷಸನ ಬಳಿಗೆ ಓಡಿ ಹೋಗಿ ರಾಮದೂತನು ಬಂದಿ ರುವನೆಂದು ತಿಳಿಸಿ ವೀರರಿದ್ದರೆ ಬರಹೇಳು. ಇದು ಉಪಚಾರದ ಮಾತಲ್ಲ. ಬಂದ ವರಿಗೆ ನಿಜವಾಗಿಯ ಕಾಲನ ಮನೆಯನ್ನು ತೋರಿಸುವೆನು ಎಂದು ಹೇಳಲು ; ಅವನು ಅಲ್ಲಿಂದ ಓಡಿಬಂದು ಒಡೋಲಗದಲ್ಲಿ ಕುಳಿತಿರುವ ರಾವಣನಿಗೆ ಕೈಮುಗಿದುಬುದ್ದೀ ! ಮೃತ್ಯುವೇ ಕಪಿರೂಪನ್ನು ಧರಿಸಿ ಬಂದು ರಾಕ್ಷಸರನ್ನೆಲ್ಲಾ ಕೊಂದುಹಾ ಕುತ್ತಿದೆ. ಅದರೊಡನೆ ಕಾದುವುದಕ್ಕೆ ನಮ್ಮಿಂದಾಗುವುದಿಲ್ಲ, ಅದರ ಬಾಧೆಯನ್ನು ತಪ್ಪಿಸಿ ನಮ್ಮನ್ನು ಕಾಪಾಡು ಎಂದು ಬಿನ್ನವಿಸಲು; ಎಲವೊ ! ಹರಿಹರಬ್ರಹ್ಮಾದಿಗಳು ನನಗೆ ಪಾಡಲ್ಲ: ಎಲೈ ಶ್ಯಾನವೇ, ಬಗುಳ ಬೇಡ ! ಕಸಿ ಬಂದು ವನವನ್ನು ವರಿದು ರಕ್ಕಸರನ್ನು ಕೊಂದಿತಂತೆ ! ಇಂಥ ಕಪಿಯನ್ನು ಹಿಡಿದು ದಂಡಿಸಲಾರದೆ ತನ್ನ ಹತ್ತಿರ ಬಂದು ಲಜ್ಜೆಯಿಲ್ಲದೆ ಬೊಗುಳುತ್ತಿರುವಿ. ನಿನ್ನಂಥ ಬಡನಾಯಿಗಳನ್ನು ಸೀಳಿಸಿಬಿಡ ಬೇಕು ಎಂದು ದಶಕಂಠನು ಹೇಳಿ ಮುಗಿಸುವಷ್ಟರಲ್ಲಿ ಆಂಜನೇಯನಿಂದ ಹತಶೇಷ ರಾದ ರಾಕ್ಷಸರು ಓಡಿಬಂದು--ನ್ಯಾವಿಾ, ನನ್ನೊಡೆಯನಾದ ನೀನು ಆಶ್ರಿತರಾದ ನಮ್ಮನ್ನು ಅನ್ಯಾಯವಾಗಿ ಕನಿಯಿಂದ ಕೊಲ್ಲಿ ಸಬೇಡ ! ನೀನು ರಕ್ಷಿಸಲಾರದಿ ದೃರೆ ಈಗಲೇ ನಿನ್ನ ಕತ್ತಿಯಿಂದ ನಮ್ಮೆಲ್ಲರ ತಲೆಗಳನ್ನೂ ಕಡಿದುಹಾಕು ಎಂದು ಮೊರೆಯಿಡಲು ; ಆಗ ಅಕ್ಷ ಕುಮಾರನೆದ್ದು ಕಪಿಯನ್ನು ಕೊಂದುಹಾಕುವೆನೆಂದು ತನ್ನ ತಂದೆ ಯಿಂದ ವೀಳಯವನ್ನು ತೆಗೆದು ಕೊಂಡು ವಿವಿಧಾಯುಧಧಾರಿಗಳಾದ ಏಳುನೂರು ಜನ ಸಹೋದರರನ್ನು ಕರೆದು ಕೊಂಡು ಖಡ್ಗವನ್ನು ಝಳುಪಿಸುತ್ತ ಸುಳಿಯುತ್ತಿರುವ ಸಿಡಿಲಮರಿಯಂತೆ ಹೊರಟು ಬರುತ್ತಿರಲು; ವೀರನಾದ ಆಂಜನೇಯನು ಗರ್ವಿತರಾ ಗಿಯ ಭಯ೦ಕರರಾಗಿಯ ಇರುವ ರಾವಣ ಪುತ್ರರನ್ನು ನೋಡಿ ಹಿಗ್ಗಿ ದವನಾಗಿ ಆರ್ಭಟಿಸಿ ವಿಕಾರರೂಪಿಗಳಾದ ಆ ರಾಕ್ಷಸರನ್ನು ನೋಡಿ ಹಲ್ಲಿ ರಿದು ಅಣಕಿಸುತ್ತಿ ರಲು ; ಆಗ ರಾಕ್ಷ ಸರೆಲ್ಲರೂ ನೋಡಿ ನಗುತ್ತ --ಬಾಯಿಯ ಮೇಲೆ ಹೊಡೆಯಿರಿ ಎಂದು ಸಾಣೆಹಿಡಿದ ಖಡ್ಗಗಳಿಂದಲೂ ಶೂಲಗಳಿಂದ ತಿವಿಯುವುದಕ್ಕೆ ಬರಲು ; ಆಗ ಹನುಮಂತನು ತಾನೇರಿಕೊಂಡಿದ್ದ ತೋರಣಸ್ತಂಭದಿಂದಿಳಿದು ಹೆದರಿ ಓಡುವವ ನಂತೆ ಸ್ವಲ್ಪ ದೂರ ಹೋಗಲು; ಆಗ ರಾಕ್ಷ ಸರು-ಎಲೋ, ಕಪಿಯು ಭಯದಿಂದೋ ಡುತ್ತಿದೆ, ಬೇಗ ಬನ್ನಿರಿ, ಹಿಡಿಯಿರಿ ! ಬಡಿಯಿರಿ ! ಕಡಿಯಿರಿ ! ಎನ್ನುತ್ತ ಮುತ್ತಿ ಕೊಳ್ಳುವುದಕ್ಕೆ ಬರಲು; ಹನುಮಂತನು ಹಿಂದಿರುಗಿ ಬಾಹುವನ್ನು ಅಪ್ಪಳಿಸಿ ತೋರಣ ಸ್ಥಂಭಗಳನ್ನು ಕಿತ್ತುಕೊಂಡು ಸಂಹಾರುದ್ರನಿಗಂಟುಮಡಿಯಾಗಿ ನಿಮೇಷಮಾತ್ರ ದಲ್ಲಿ ಎಂಭತ್ತು ಸಾವಿರ ಮಂದಿ ರಕ್ಕಸರನ್ನು ಬಡಿದುರುಳಿಸಿ ಭೂದೇವತೆಗೆ ಬಲಿಗೊಟ್ಟು