ಸೇತುಬಂಧನದ ಕಥೆ 111 ತನಾದ ಸುಗ್ರೀವನು ರಾಮನನ್ನು ಕುರಿತು-ದೇವಾ, ನಿನ್ನ ಮಹಿಮೆಯ ಸೊಬಗು ಯಾರಿಗುಂಟು ? ನೀನು ದೇವದೇವನಲ್ಲವೇ ? ನೀನು ಲೋಕದವರಂತೆ ಪ್ರಾಕೃತಪುರು ಷನೇ ? ನೀನು ಸರ್ವಜ್ಞನು, ನಾವು ಅಲ್ಪಜ್ಞರು, ನಮಗೇನು ತಿಳಿಯುವುದು ? ತೋರಿದ ಸಂಗತಿಯನ್ನು ಸನ್ನಿಧಾನದಲ್ಲಿ ವಿಜ್ಞಾಪಿಸದಿರುವುದು ಅಪರಾಧವೆಂದು ತಿಳಿದು ನಾನು ಅರಿಕೆಮಾಡಿ ಕೊಂಡೆನಲ್ಲದೆ ಅನ್ಯಥಾ ಅಲ್ಲವು. ದೇವರ ಅಪ್ಪಣೆಗೆ ಬೇಕು ಬೇಡ ಎಂಬವರು ಯಾರೂ ಇಲ್ಲವ, ಚಿತ್ರಕ್ಕೆ ಸರಿಬಂದ ರೀತಿಯಿಂದ ಆಜ್ಞಾಪಿಸಬಹುದು ಎಂದು ವಿಜ್ಞಾಪನೆಮಾಡಿದನು. ಆ ಮಾತುಗಳನ್ನು ಕೇಳಿ ಲಕ್ಷ್ಮಣನೂ ಜಾಂಬವಂತ ಹನುಮಂತ ನೀಲಾದಿ ಸಕಲ ಕಪಿ ಸೇನಾನಾಯ ಕರೂ ಸಂತೋಷದಿಂದ ಒಡಂಬಡಲು ; ರಾಮಚಂದ್ರನು ಸುಗ್ರೀವನನ್ನು ನೋಡಿ--ಎಲೈ ಪ್ರಿಯ ಸ್ನೇಹಿತನೇ, ರಾಜನಾದ ನೀನೇ ಹೋಗಿ ವಿಧೇಯನಾಗಿ ಬಂದಿರುವ ವಿಭೀಷಣನನ್ನು ಕರೆದು ಕೊಂಡು ಬಾ ಎಂದು ಅಪ್ಪಣೆ ಯನ್ನು ಕೊಡಲು ; ಕೂಡಲೆ ಸುಗ್ರೀವನು ತನ್ನ ಪರಿವಾರದೊಡನೆ ಕೂಡಿ ವಿಭೀಷಣನ ಬಳಿಗೆ ಬಂದು ಬಹಳ ಸಂತೋಷದಿಂದ ಆತನನ್ನು ಆಲಿಂಗಿಸಿ--ಶ್ರೀರಾಮನ ಕೃಪಾ ಕಟಾಕ್ಷವು ನಿನ್ನಲ್ಲಿ ಸಂಪೂರ್ಣವಾಗಿದೆ. ಅದು ಕಾರಣ ಲೋಕದಲ್ಲಿ ನೀನೇ ಧನ್ಯನು. ರಾಮನ ಅಡಿದಾವರೆಗಳ ದರ್ಶನಾರ್ಥವಾಗಿ ಒರುವವನಾಗು ಎನ್ನಲು ; ವಿಭೀಷ ಣನು ಆಯುಧಗಳನ್ನು ತನ್ನ ಮಂತ್ರಿಗಳ ವಶಕ್ಕೆ ಕೊಟ್ಟು ರಥದಿಂದ ಭೂಮಿಗಿಳಿದು ಬಂದು ನವರತ್ನ ಖಚಿತವಾದ ತನ್ನ ಸಿಂಗಾಡಿಯನ್ನೂ ವಜ್ರ ದಲಗುಳ್ಳ ಬಾಣವನ್ನೂ ರಾಮನ ಪಾದಸದ್ಯ ಗಳಿಗೆ ಸಮರ್ಪಿಸಿ ದೀರ್ಘದಂಡ ನಮಸ್ಕಾರವನ್ನು ಮಾಡಿ ಬಹು ವಿಧವಾಗಿ ಸ್ತುತಿಸಿ-ಅನಾಥನಾದ ನನ್ನನ್ನು ಕಾಪಾಡಬೇಕೆಂದು ಬಾರಿಬಾರಿಗೂ ಬೇಡಿಕೊಳ್ಳುತ್ತ ನಮಸ್ಕರಿಸುತ್ತ ಇದ್ದನು. ಆಗ ಶ್ರೀರಾಮಚಂದ್ರನು ಶರಣಾಗತ ನಾದ ವಿಭೀಷಣನನ್ನು ಕೃಪಾದೃಷ್ಟಿಯಿಂದ ನೋಡಿ--ಏಳು, ಸುಗುಣಮಣಿಗಣ ಭೂಷಿತನೇ, ಭಯ ಪಡಬೇಡ, ಇಲ್ಲಿಗೆ ನಿನ್ನ ಸರ್ವಪಾಪವೂ ಕಷ್ಟಗಳೂ ಪರಿಹಾರವಾ ದುವೆಂದು ತಿಳಿಯುವವನಾಗು. ಎಲೈ ವಿಭೀಷಣನೇ, ಕೇಳು, ನನ್ನ ತಂದೆಯಾದ ದಶರಥರಾಜನಾಣೆ, ಲಕ್ಷ್ಮಣನನ್ನು ಹೇಗೋ ಹಾಗೆ ನಿನ್ನನ್ನೂ ಕಾಪಾಡು ವೆನು. ಚಿಂತೆಯನ್ನು ಬಿಡು ಎಂದು ಹೇಳಿ ಆತನ ಮಂಡೆಯನ್ನು ಹಿಡಿದೆತ್ತಿ ಪ್ರಿಯೆಯಾದ ಸೀತೆಯನ್ನು ಆಲಿಂಗಿಸುವ ತೋಳುಗಳಿಂದ ಆಲಿಂಗಿಸಿಕೊಂಡು ಲಕ್ಷ್ಮಣ ಸುಗ್ರೀವ ರನ್ನು ಕುರಿತು-ಈ ಪ್ರಿಯನಾದ ವಿಭೀಷಣನಿಗೆ ಈಗಲೇ ಲಂಕಾರಾಜ್ಯಾಭೀಷೇಕ ವನ್ನು ಮಾಡಿರಿ ಎಂದು ಅಪ್ಪಣೆಯನ್ನು ಕೊಡಲು ; ಆಗ ಅವರು ಸಕಲ ಸಾಮಗ್ರಿ ಗಳನ್ನು ಸಿದ್ದ ಮಾಡಿಕೊಂಡು ಸುಮುಹೂರ್ತದಲ್ಲಿ ವಿಭೀಷಣನನ್ನು ದಿವ್ಯವಾದ ರತ್ನ ಪೀಠದಲ್ಲಿ ಕುಳ್ಳಿರಿಸಿ ಪಟ್ಟಾಭಿಷೇಕವನ್ನು ಮಾಡಿದರು. ಆಗ ದೇವತೆಗಳು ವಿಭೀಷ ಣನ ತಲೆಯ ಮೇಲೆ ದೇವಗಂಗೋದಕಗಳನ್ನು ಸುರಿದರು, ನಾರದನು ಸಂತೋಷ ದಿಂದ ದಿವ್ಯ ವೀಣಾಗಾನವನ್ನು ಮಾಡಿದನು. ಅಪ್ಪರಸ್ತ್ರೀಯರು ಮನೋಲ್ಲಾಸದಿಂದ ನರ್ತನವನ್ನು ಮಾಡಿದರು. ಅನಂತರದಲ್ಲಿ ವಿಭೀಷಣನು ಶರತ್ಕಾಲದ ಪೂರ್ಣಿಮಾ
ಪುಟ:ಕಥಾ ಸಂಗ್ರಹ - ಭಾಗ ೨.djvu/೧೨೧
ಗೋಚರ