ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

114 ಕಥಾಸಂಗ್ರಹ-೪ ನೆಯ ಭಾಗ ನಿನ್ನಲ್ಲಿ ರಕ್ಷಣಾರ್ಥಿಯಾಗಿ ಬಂದಿರುವನೋ? ವಿರೋಧಿಸುವುದಕ್ಕಾಗಿ ಬಂದಿರುವನೋ ? ಪರೀಕ್ಷಿಸಿನೋಡು, ಇವನನ್ನು ಸ್ವೀಕರಿಸಿ ರಕ್ಷಿಸುವವನಾಗು, ಅನ್ಯಾಯವಾಗಿ ನನ್ನ ಮಾಂಗಲ್ಯ ಸೂತ್ರವನ್ನು ಹರಿದುಹಾಕಬೇಡ ಎಂದು ನಾನಾ ವಿಧವಾಗಿ ಹೇಳಿಕೊಂಡು ನಿಜಪತಿಯಾದ ಸಮುದ್ರರಾಜನನ್ನು ಕರೆದು ಕೊಂಡು ಬಂದು ಶ್ರೀರಾಮನ ಪಾದಗಳ ಮೇಲೆ ಕೆಡಹಲು ; ಆಗ ಶ್ರೀರಾಮನು ಪ್ರೀತಿಯಿಂದ ಆತನನ್ನು ಆಲಂಗಿಸಿಕೊಂಡು ಆತನ ಅಪರಾಧಗಳನ್ನು ಕ್ಷಮಿಸಿ-ಎಲೈ ಸಮುದ್ರರಾಜನೇ, ನೀನು ದೇವಪುರುಷನು. ನಾನು ಮನುಜನು, ಅದು ಕಾರಣ ನಿನಗೂ ನನಗೂ ಆಶ್ರಯಾಶ್ರಯಿಭಾವವು ಸ್ವಭಾವ ವಾಗಿ ಉಂಟಾಗಿದೆ. ಅದು ಕಾರಣ ಈಗ ನಾನು ನಿನ್ನ ಸಹಾಯವನ್ನು ಅಪೇಕ್ಷಿಸು ವವನಾಗಿದ್ದೇನೆ. ಕಾರಣವೇನೆಂದರೆ-ದುಷ್ಟನಾದ ರಾವಣನು ನಾನು ಕಾಣದಂತೆ ಬಂದು ನನ್ನ ಪತ್ನಿ ಯಾದ ಸೀತೆಯನ್ನು ಅಪಹರಿಸಿಕೊಂಡು ಹೋಗಿ ನನ್ನನ್ನು ಅಪಾರ ವ್ಯಸನಕ್ಕೂ ಕಷ್ಟ ಕ್ಕೂ ಗುರಿಮಾಡಿರುವನು. ಅದು ಕಾರಣ ಧೂರ್ತನಾದ ಅವನ ಸಂಹಾರಾರ್ಥವಾಗಿ ಸೇನೆಯೊಡನೆ ಹೊರಟಿರುವ ನನ್ನಲ್ಲಿ ನೀನು ಕನಿಕರವನ್ನಿಟ್ಟು ಮಾರ್ಗವನ್ನು ಕೊಡಬೇಕು, ಅದರಿಂದ ರಾವಣನನ್ನು ಸಂಹರಿಸಿ ನನ್ನ ಪತ್ನಿಯೊಡನೆ ಸೇರಿ ಸಂತೋಷಿಸುವೆನು ಎಂದು ಕೇಳಿಕೊಳ್ಳಲು; ಆಗ ಸಮುದ್ರರಾಜನು ರಾಮನನ್ನು ನೋಡಿ-ಎಲೈ ರಘುಪತಿಯೇ, ಕೇಳು, ದೇವತೆಗಳ ಬಡಗಿಯಾದ ವಿಶ್ವಕರ್ಮನಿಗೆ ಪುತ್ರನಾಗಿರುವ ಈ ನಳನೆಂಬ ಕಪಿನಾಯಕನಿಂದ ಸೇತುವನ್ನು ಕಟ್ಟಿಸು, ಪೂರ್ವದಲ್ಲಿ ಈ ನಳನ ತಂದೆಯಾದ ವಿಶ್ವಕರ್ಮನು ಈತನಿಗೆ--ನಿನ್ನ ಹಸ್ತಸ್ಪರ್ಶವಾದ ವಸ್ತು ಗಳೆಲ್ಲಾ ನೀರಿನ ಮೇಲೆ ತೇಲಲಿ ಎಂದು ವರವನ್ನು ಕೊಟ್ಟಿರುವನು. ಈ ನಳನ ಹಸ್ತ ಸ್ಪರ್ಶದಿಂದ ಹಾಕಲ್ಪಡುವ ಗಿರಿತರು ಶಿಲಾದಿ ಸಮಸ್ತ ವಸ್ತುಗಳೂ ನನ್ನಲ್ಲಿ ತೇಲವುವಾ ದುದರಿಂದ ನಿನ್ನ ಸೇತುಬಂಧನಕಾರ್ಯವು ಸುಲಭವಾಗಿ ಮುಗಿದು ನಿನ್ನ ಮನೋರಥ ಗಳೆಲ್ಲಾ ಕೈಸೇರುವುವು ಎಂದು ಹೇಳಿ ಅನಂತರದಲ್ಲಿ-ಇದೋ, ಈಗ ನೀನು ನನ್ನ ಮೇಲೆ ಪ್ರಯೋಗಿಸುವುದಕ್ಕಾಗಿ ತೊಟ್ಟ ಆಸ್ಟ್ರೇಯಾಸ್ತ್ರವು ಅಮೋಘವಾದುದಷ್ಟೆ. ಈಗ ನನ್ನ ದ್ವೀಪದಲ್ಲಿ ಬಹು ಜನ ಕಿರಾತರು ಇದ್ದು ಕೊಂಡು ನನಗೆ ಬಹಳವಾಗಿ ತೊಂದರೆಯನ್ನು ಕೊಡುತ್ತಿರುವರು. ಅದನ್ನು ಅವರ ಮೇಲೆ ಪ್ರಯೋಗಿಸಿ ಅವರನ್ನೆಲ್ಲಾ ನಿರ್ಮಲಮಾಡು ಎಂದು ಕೇಳಿಕೊಳ್ಳಲು ; ಶ್ರೀರಾಮನು ಆ ಮಾತಿಗೆ ಸಮ್ಮತಿಸಿ ಕೂಡಲೆ ಆ ಮಹಾಸ್ತ್ರವನ್ನು ಅವರ ಮೇಲೆ ಪ್ರಯೋಗಿಸಿ ಅವರನ್ನೆಲ್ಲಾ ಕೊಂದು ಸಮುದ್ರರಾಜನಿಗೂ ಸಕಲ ನದೀನಾರಿಯರಿಗೂ ಅಪ್ಪಣೆಯನ್ನಿತ್ತು ಕಳುಹಿಸಿಬಿಟ್ಟನು. ಆ ಬಳಿಕ ಶ್ರೀರಾಮನು ಕಪಿರಾಜನಾದ ಸುಗ್ರೀವನನ್ನು ಕುರಿತು ಎಲೈ ಕಪಿವಲ್ಲಭನೇ, ಸಮುದ್ರ ರಾಜನ ವೃತ್ತಾಂತವೆಲ್ಲಾ ತಿಳಿದಂತಾಯಿತಷ್ಟೆ, ನೀನು ಇನ್ನು ಮುಂದೆ ಏನು ಯೋಚನೆಯನ್ನು ಮಾಡಿರುವಿ ? ಎನ್ನಲು ಸುಗ್ರೀವನು--ಎಲೈ ದಿನೇಶಕುಲದೀಪಕನೇ, ನಾನು ಮಾಡತಕ್ಕ ಯೋಚನೆಯು ಇನ್ನಾವುದಿರುವುದು ? ಭೂಮಿಯ ಮೇಲೆ ಅಪಾರವಾಗಿ ಗಿರಿತರುಗಳಿವೆ. ಅಮೋಘವಾದ ಬಾಹುಬಲವುಳ್ಳವ ರಾದ ವಾನರನಾಯಕರು ನಿನ್ನ ಆಜ್ಞಾಧಾರಕರಾಗಿದ್ದಾರೆ, ಅಪ್ಪಣೆಯಾದರೆ ಅತಿಶೀಘ್ರ