ಪುಟ:ಕಥಾ ಸಂಗ್ರಹ - ಭಾಗ ೨.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೇತುಬಂಧನದ ಕಥೆ 117 ತಕ್ಕೆ ? ಬೆಟ್ಟಗಳು ಬೇಗ ಬೇಗ ಬರಲಿ ಎಂದು ಆರ್ಭಟಿಸುತ್ತಿರಲು ; ಅದನ್ನು ಕೇಳಿ ಸುಗ್ರೀವನು--ಸೇತುವ್ರ ಇಷ್ಟು ಮಾತ್ರದಿಂದ ಬೇಗ ಸಾಗುವುದಿಲ್ಲವೆಂದು ಕೋಪ ದಿಂದೆದ್ದು ಉದಯಪರ್ವತಕ್ಕೆ ಹಾರಿ ಅದರ ಶಿಖರವನ್ನು ಕಿತ್ತು ತನ್ನೆಡಗೈಯ ಲ್ಲಿಟ್ಟು ಕೊಂಡು ಅಲ್ಲಿಂದ ಅಸ್ತಾಚಲಕ್ಕೆ ಹಾರಿ ಅದರ ಶಿಖರವನ್ನು ಕಿತ್ತು ಬಲಗೈಯ ಲ್ಲಿಟ್ಟು ತೆಗೆದು ಕೊಂಡು ಬಂದು ನಳನ ಕೈಯಲ್ಲಿ ಕೊಟ್ಟನು. ಕೂಡಲೆ ವಿನತನು ಶತಕೋಟೆಯೆಂಬ ಪರ್ವತವನ್ನೂ ಸುಷೇಣನು ಸುದರ್ಶನಾದ್ರಿಯನ್ನೂ ಸನಸನು ಪಾರಿಯಾತ್ರಮಹೀಧರವನ್ನೂ ವೃಷಭನು ವೃಷಭಾಚಲವನ್ನೂ ಗವಯನು ಗೋವ ರ್ಧನ ಭೂಧರವನ್ನೂ ಗವಾಕ್ಷನು ಅ೦ಜನಶಿಖರಿಯನ್ನೂ ತೆಗೆದುಕೊಂಡು ಬಂದು ನಳನ ಕೈಗೆ ಕೊಟ್ಟರು. ಆರರೇ ! ಶಿವಶಿವಾ ! ಈ ಸಾಹಸವನ್ನು ಹೊಗಳುವುದಕ್ಕೆ ಎರಡು ಸಾವಿರ ನಾಲಿಗೆಗಳುಳ್ಳ ಶೇಷನಿಗಾದರೂ ಸಾಧ್ಯವೇ ? ಕುಲಗಿರಿಗಳೋ ? ಕಿಡಿ ಕಲ್ಲುಗಳೋ ? ವಾನರವೀರರೋ ? ಅದ್ಭುತವಜ್ರಶರೀರಿಗಳೋ ? ಸುಮುಖದುರ್ಮು ಖತಾರದಧಿಮುಖ ಕುಮುದ ಮೈಂಧ ದ್ವಿವಿಧ ಶತಒಲಿ ರುಮರುಮಣ್ಯಕ ಜ್ಯೋತಿ ರ್ಮುಖ ಗಜಗಂಧಮಾದನರೇ ಮೊದಲಾದ ಕಪಿನಾಯಕರು ಮೇರುಮಹೀಧರವನ್ನು ಬಳಸಿದ ಕಡಲ ನಡುವೆಯಿರುವ ಈ ವರೆಗೂ ಯಾರ ಹವಣ ಸ್ತೋತ್ರಾರ್ಹವಾದುದಲ್ಲ, ವಾಲಿಕುಮಾರನಾದ ಅಂಗದನ ಸಾಹಸವ್ರ ಎಲ್ಲರನ್ನೂ ಮೀರಿಸಿತು. ಮೂವತ್ತು ಮೂರು ಕೋಟಿ ದೇವತೆಗಳಿಗೆ ಅಧೀಶ್ವರನಾದ ಇಂದ್ರನ ಮೊಮ್ಮಗನಲ್ಲವೇ ? ಅಂಥವನ ಪರಾಕ್ರಮವನ್ನು ಹೇಳಬೇಕೆಂ ಬುದೇನು ? ಕೂಗಿ ಬೊಬ್ಬಿರಿದು ಕೈಲಾಸಪರ್ವತದ ಬಳಿಗೆ ಹಾರಿ ನೋಡಿ-ಆಹಾ ! ಇದೊಂದು ಗಿರಿಯಿಂದಲೇ ನಮ್ಮ ಸೇತುಬಂಧನಕಾರ್ಯವು ಮುಗಿದುಹೋಗುವುದು. ನಾನು ಇದನ್ನು ತೆಗೆದು ಕೊಂಡು ಹೋಗಿ ಕೊಡುವ್ರದರಿಂದ ನಳನ ಕೋಪವು ಅಡಗು ವದು, ಪೂರ್ವದಲ್ಲಿ ರಾವಣನು ಈ ಪರ್ವತವನ್ನು ಅಲ್ಲಾಡಿಸಿ ಸಿಕ್ಕಿ ನೊಂದು ಬಲಹೀ ನನಾಗಿ ಗೋಳಾಡಿದನು, ನಾನು ಇಂಥ ಪರ್ವತವನ್ನು ಕಿತ್ತು ಎತ್ತಿ ಕೊಂಡು, ಹೋಗಿ ಸಮುದ್ರದಲ್ಲಿ ಹಾಕಿದರೆ ರಾವಣನು ಆ ವರ್ತಮಾನವನ್ನು ಕೇಳಿ ನನಗೆ ಹೆದರಿ ಜಗಳವನ್ನ ಸೇಕ್ಷಿಸದೆ ಶರಣಾಗತನಾಗಿ ಬಂದು ರಾಮನಿಗೆ ಸೀತೆಯನ್ನೂ ಪ್ಪಿಸಿ ಓಡಿಹೋಗುವನು ಎಂದು ತನ್ನ ಮನಸ್ಸಿನಲ್ಲಿ ನಿಶ್ಚಯಿಸಿ ತನ್ನ ಮಹಾ ಬಾಹುಗಳಿಂದ ಆ ಕೈಲಾಸನಗವನ್ನು ಬಿಗಿಯಾಗಿ ತಬ್ಬಿ ಹಿಡಿದು ಜಡಿದು ಅಲ್ಲಾಡಿಸಲು ; ತಿರುಗಿ ಮೂರ್ಖನಾದ ರಾವಣನು ಬಂದನೆಂದು ಶಿವನ ಪಟ್ಟಣವು ಬೆದರಿತು. ಆಗ ಶಂಕರನು ಜ್ಞಾನದೃಷ್ಟಿಯಿಂದ ತಿಳಿದು ಅಂಗದನ ಬಳಿಗೆ ಬಂದು--ಎಲಾ, ನೀನು ಯಾರೋ ? ಈ ಗಿರಿಯನ್ನು ಕೀಳುವಂತೆ ನಿನಗೆ ಅಪ್ಪಣೆಯನ್ನಿತ್ತವರಾರು ? ಬಿಟ್ಟು ಆಚೆಗೆ ಹೋಗು ಎನ್ನಲು ; ಅಂಗದನು ಕಿರುನಗೆಯಿಂದ ಕೂಡಿ ಕೂಲಿಯನ್ನು ನೋಡಿ ಹೋಗೆಂದು ಹೇಳುವಷ್ಟು ಸಲಿಗೆಯು ನಿನಗೆ ಯಾರಿಂದುಂಟಾಯಿತು ? ಸುಮ್ಮನಿರು ಎಂದು ಹೇಳಿ ಮಹಾದೇವನನ್ನು ಗಣಿಸದೆ ಕೈಲಾಸಪರ್ವತವನ್ನು ಸಮಲವಾಗಿ ಕಿತ್ತು ಮೇಲೆತ್ತಿ ದನು. ಆಗ ಈಶ್ವರನು ಬೆರಗಾಗಿ ಅಂಗದನನ್ನು ಕುರಿತು--ಎಲೈ ಕಪಿವೀರನೇ, ಈ