ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

122 ಕಥಾಸಂಗ್ರಹ -೪ ನೆಯ ಭಾಗ. ದಲ್ಲಿಟ್ಟು ಅದರ ಸುವರ್ಣ ಶಿಖರವೊಂದನ್ನು ಮಾತ್ರ ಕಿತ್ತು ತೆಗೆದುಕೊಂಡು ಹೊರಟು ನಡೆಯುವ ಗಿರಿಯೋಪಾದಿಯಲ್ಲಿ ಬಂದು ನಳನ ಕೈಗೆ ಕೊಡಲು; ಅದರಿಂದ ಉಳಿದಿದ್ದ ನಾಲ್ವತ್ತು ಯೋಜನಗಳ ಸೇತು ಕಾರ್ಯವು ನಡೆದು ಸಂಪೂರ್ಣವಾಗಿ ಶತಯೋಜನ ಗಳ ವರೆಗೂ ಸೇತುವು ಕಟ್ಟಲ್ಪಟ್ಟು ಸಿದ್ಧವಾಯಿತು. ಆಗ ನಳನು ಶ್ರೀರಾಮನ ಸನ್ನಿಧಿಗೆ ಬಂದು--ಎಲೈ ಕರುಣಾಜಲನಿಧಿಯೇ, ಸೇತು ಕಾರ್ಯವೆಲ್ಲಾ ಮುಗಿಯಿತು. ಪರೀ ಕ್ಷಾರ್ಥವಾಗಿ ದಯೆಮಾಡಿಸಬಹುದೆಂದು ಭಯಭರಿತ ಭಕ್ತಿಯಿಂದ ಬಿನ್ನವಿಸಿದನು.

  • ಆಗ ಶ್ರೀರಾಮನು ಸಂತುಷ್ಟಾಂತರಂಗನಾಗಿ ವಾನರ ಚಕ್ರೇಶ್ವರನಾದ ಸುಗ್ರೀ ವನ ಹಸ್ತವನ್ನು ಹಿಡಿದು ಸಿಂಹಪೀಠದಿಂದಿಳಿದು ಸುರರು ಜಯ ಜಯ ಎನ್ನುತ್ತಿರಲು ; ಸುರಮುನಿಗಳು ಸ್ತುತಿಸುತ್ತಿರಲು, ವಿದ್ಯಾಧರರು ಹೊಗಳುತ್ತಿರಲು; ಸೂತಮಾಗಧರು ಬಿರು ದನ್ನು ಹೇಳುತ್ತಿರಲು ; ಹನುಮಂತನು ಧೀರು ರೇ ! ಪಾಯವಧಾರು ! ಎಂದು ಆರ್ಭಟಿಸುತ್ತಿರಲು ; ಸೇತುವಿನ ಬಳಿಗೆ ಬಂದು ನಿಂತು-ಮೃತ್ಯುವು ದುಷ್ಟ ನಾದ ರಾವಣನನ್ನು ಎಳೆದು ಕೊಂಡು ಹೋಗುವುದಕ್ಕೋಸ್ಕರ ನೀಡಿದ ಹಸ್ತವೋ, ವಾನರ ಮಹಾವೀರರ ಅತುಲಸರಾಕ್ರಮ ವರ್ಣನೆಯಿಂದ ಕೂಡಿದ ಮಹಾಶಿಲಾಶಾಸನವೋ, ರಾಘವನ ಕೀರ್ತಿನಿತಂಬಿನಿಯ ಬೈತಲೆಯೋ, ರಾವಣ ರಾತ್ರಿಂಚರನ ವಿಜಯಾರ್ಥವಾಗಿ ಹೊರಟಿರುವ ಶ್ರೀರಾಮನಿಗೆ ಕಾಲವೆಂಬ ಅಗಸನು ಒಪ್ಪದಿಂದ ಹಾಸಿದ ನಿರ್ಮಲವಾದ ನಡೆಮಡಿಯೋ, ದುರಹಂಕಾರ ದೂಷಿತರಾದ ನಕ್ಕ೦ಚರರನ್ನು ನಿರ್ಮೂಲಮಾಡುವುದ ಕೊಸ್ಪರ ತ್ರಿಜಗತಿಯಾದ ಭಗವಂತನು ಶ್ರೀರಾಮನಿಗೆ ಕೊಟ, ಮಹಾಖಡ ಫಲ ಕವೋ ಎಂಬ ಹಾಗೆ ಪರಿಶೋಭಿಸುತ್ತಿರುವ ನಳನಿರ್ಮಿತವಾದ ಮಹಾಸೇತುವನ್ನು ನೋಡಿ ಆಶ್ಚರ್ಯಪಟ್ಟು ನಳನನ್ನು ಆಲಿಂಗಿಸಿಕೊಂಡು ಬಹಳವಾಗಿ ಮೆಚ್ಚಿ ಆ ನಳನಿಗೆ ಮುಂದಣ ಇಂದ್ರ ಪದವಿಯನ್ನಿತ್ತು ಮನ್ನಿಸಿದನು. ಆ ಮೇಲೆ ರಘುಕುಲತಿಲಕನು ಲಂಕಾಪ್ರಯಾಣಕ್ಕೆ ಸನ್ನದ್ಧನಾಗಲು ; ಆಗ ಕಪಿಬಲದ ಮುಂದಣಾರೈಕೆಯು ನೀಲ ನಿಗೂ ಹಿಂಗಡೆಯ ರಕ್ಷಣೆಯು ಸುಷೇಣನಿಗೂ ಮೇಲಾರೈಕೆಯು ನಳಶತಬಲಿಗವಾ ಕ್ಷರಿಗೂ ಹಗೆಗಳು ಬಾರದಂತೆ ಎಚ್ಚರದಿಂದ ನೋಡುತ್ತಿರುವಿಕೆಯು ವಿಭೀಷಣನಿಗೂ ಶೂರಕ ಪಿಪರಿವಾರಪರೀತನಾದ ಶ್ರೀರಾಮನು ಗೋಧೂಳೀಲಗ್ನ ದಲ್ಲಿ ಲಂಕಾನಗರದ ಬಳಿಗೆ ಬಂದು ಪಾಳಯವನ್ನು ಬಿಡಿಸಿದನು.

7, THE SLAUGHTER OF KUMBHAKARNA, ೭, ಕುಂಭಕರ್ಣಸಂಹಾರ. ಇತ್ತ ಲಂಕಾನಗರದಲ್ಲಿ ನಿಶಾಚರ ಚಕ್ರೇಶ್ವರನಾದ ರಾವಣನು ಲೋಕೋತ್ತರ ವಾದ ತನ್ನ ಓಲಗದ ಚಾವಡಿಯಲ್ಲಿ, ರತ್ನ ಸಿಂಹಾಸನದ ಮೇಲೆ ಕುಳಿತು ಒಡೋಲಗ ವನ್ನು ಕೊಡುತ್ತಿರಲು ; ಆ ಸಮಯದಲ್ಲಿ ಬೇಹಿನವರು ಬಂದು ಅಡ್ಡ ಬಿದ್ದು -ಜೀಯಾ,