ಪುಟ:ಕಥಾ ಸಂಗ್ರಹ - ಭಾಗ ೨.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೇತುಬಂಧನದ ಕಥೆ 121 ಳಿಗಳೆಂಬ ಮಹಾಲಯಗಳಿಗೆ ಆಧಾರಸ್ತಂಭವಾಗಿರುವುದೆಂದು ನೀನು ತಿಳಿಯೆಯಾ ? ನಿನ್ನೊಡೆಯನಾದ ರಾಮನ ವೃದ್ಧಿ ಯನ್ನೇ ನೀನು ವಿಚಾರಿಸದೆ ಹೋದೆಯಲ್ಲಾ ! ಈ ನಗವನ್ನು ಕಿತ್ತು ಹಾಕಿದ ಮೇಲೆ ಕಡಲೆಲ್ಲಿರುವುದು ? ನೀನೆಲ್ಲಿ ನಿಲ್ಲುವಿ ? ನಿನ್ನ ರಸ ನೆಲ್ಲಿರುವನು ? ಲಂಕೆಯಲ್ಲಿರುವುದು ? ಸೀತಾರಾವಣರ ಸ್ಥಿತಿಯಂತಿರುವುದು ? ಹಗೆ ಗಳೆಲ್ಲಿ ನಿಲ್ಲುವರು ? ಛೇ ! ಅವಿಚಾರಮತಿಯೇ, ಹೋಗೆಂದನು. ಆಗ ಅಂಜನಾತನಯನು ಆ ಮಾತುಗಳನ್ನು ಕೇಳಿ ನಾಲ್ಕೂ ಗನನ್ನು ಕುರಿತು-- ನೀವು ಅನಾದಿಸಂಸಿದ್ದವಾಗಿ ಲೋಕಗಳನ್ನು ನಿರ್ಮಾಣಮಾಡುವುದೆಂಬುದೊಂದೇ ಕಾರ್ಯದಲ್ಲಿ ಆಸಕ್ತರಾಗಿರುವುದರಿಂದ ಉನ್ನಿಷದ್ಭುದ್ಧಿಶಕ್ತಿಯಿಲ್ಲ ದವರಾಗಿದ್ದೀರಿ. ಮೇಲೆ ವೃದ್ದಾ ಪ್ಯವೊಂದೆಡೆಗೊಂಡಿದೆ. ಅದು ಕಾರಣ ನನ್ನ ಉದ್ದೇಶ ಶಕ್ತಿಗಳಿಗೆ ಫಲ ವಿಂಥದೆಂದು ಯೋಚಿಸಿ ತಿಳಿಯಲಾರದವರಾಗಿದ್ದೀರಿ. ಆದರೂ ಚಿಂತೆಯಿಲ್ಲ, ಅದನ್ನು ನಾನೇ ವಿವರಿಸಿ ಹೇಳುತ್ತೇನೆ ಕೇಳಿರಿ, ನೀವು ಈ ಸುರಾಚಲದ ವಿಚಾರವು ನನಗೆ ತಿಳಿ ಯದೆಂದು ಹೇಳುತ್ತೀರೋ ? ಹಾಗಲ್ಲ, ನಾನು ಇದರ ಸಂಗತಿಗಳನ್ನೆಲ್ಲಾ ಮೊದಲೇ ತಿಳಿದಿದ್ದೇನೆ. ಈಗ ನಾನು ಈ ರನ್ನ ದಪ್ಪಲನ್ನು ಕಿತ್ತು ಇದನ್ನು ಆಧಾರೀಕರಿಸಿಕೊಂಡಿ ರುವ ಸಮಸ್ತ ಲೋಕಗಳನ್ನೂ ನನ್ನ ಬಾಲದಿಂದ ಧರಿಸಿ ಕೈಕಾಲು ಮೊದಲಾದ ಅಂಗಗಳಿಂದ ರಾಮನ ಸೇವೆಯನ್ನು ಮಾಡಿ ವಿರೋಧಿಯಾದ ದಶಕಂಠನನ್ನು ಸಂಹರಿ ಸಿದ ಮೇಲೆ ಪುನಃ ಈ ರತ್ನ ಸಾನುವನ್ನು ಅಲ್ಲಿಂದ ತಂದು ಇಲ್ಲೇ ಇಟ್ಟು ನನ್ನ ಬಾಲ ವನ್ನು ಬಿಡಿಸಿಕೊಂಡು ನನ್ನೊಡೆಯನಾದ ರಘುವಂಶೋತ್ತಂಸನ ಸೇವಾರ್ಥವಾಗಿ ಅಯೋಧ್ಯಾನಗರವನ್ನು ಕುರಿತು ಹೋಗುವೆನು ಎಂದು ನಾನು ಮೊದಲೇ ನಿಶ್ಚಯಿಸಿ. ದ್ದೇನೆ. ಅದು ಕಾರಣ ನೀವು ನಿಮ್ಮ ದಾರಿಯನ್ನು ಹಿಡಿದು ಕೊಂಡು ಹೋಗಿರಿ ಎನ್ನಲು; ಅಂಚೆದೇರನು ಆ ಮಾತುಗಳಿಗೆ ಪ್ರತಿಯಾಗಿ ಉತ್ತರವನ್ನು ಹೇಳುವುದಕ್ಕೆ ಉಪಾಯವಿ ಲ್ಲದವನಾಗಿ ಪೊಂಬೆಟ್ಟವನ್ನು ಕೀಳುತ್ತಿರುವ ಹನುಮಂತನ ಹೊಟ್ಟೆಯಲ್ಲಿ ತನ್ನ ನಾಲ್ಕು ಮೊಗಗಳನ್ನೂ ಚಾಚಿ ತನ್ನ ಕೈಗಳಿಂದ ಅವನ ಕೈಗಳನ್ನು ಹಿಡಿದುಕೊಂಡು ದೈನ್ಯ ದಿಂದ-ಎಲೈ ವಾಯುಪುತ್ರನೇ, ಕೇಳು ! ನಿನ್ನರಸನಾದ ರಾಮನು ನನ್ನನ್ನು ಈ ಕಲ್ಪ ಕೊಡೆಯನನ್ನಾಗಿ ನೇಮಿಸಿರುವನು. ಮುಂದಣ ಕಲ್ಪಕ್ಕೆ ನಿನ್ನನ್ನು ಒಡೆಯ ನನ್ನಾಗಿ ತೀರ್ಪುಮಾಡಿರುವನು. ಮುಂದುಂಟಾಗುವ ನಿನ್ನ ಪ್ರಭುತ್ವದಲ್ಲಿ ನಿನ್ನ ಮನಸ್ಸು ಬಂದಂತೆ ಮಾಡಿಕೊಳ್ಳುವವನಾಗು, ನಮ್ಮ ಅಧಿಕಾರಕಾಲವಾಗಿರುವ ಈಗ ನೀನು ಸರ್ವರಂತೆ ನಮ್ಮ ಮಾತನ್ನು ಮನ್ನಿಸು ಎಂದು ಹೇಳಿ ತಬ್ಬಿಕೊಂಡನು. ಆಗ ಮರುತ್ತನುಜನು ಮೊದಲು ನೀವೇ ರಾವಣಾದಿಗಳಿಗೆಲ್ಲಾ ವರವನ್ನು ಕೊಟ್ಟು ಅಧರ್ಮವನ್ನು ಹೆಚ್ಚಿಸಿದಿರಿ, ಈಗ ಅಂಥ ದುಷ್ಟರನ್ನು ಕೊಲ್ಲುವವರ ಪ್ರಯತ್ನ ಕೂ ತಡೆಮಾಡುತ್ತೀರಿ, ಇದಾವಧರ್ಮಸಾರವೋ ನನಗೆ ತಿಳಿಯದು. ಆಗಲಿ, ಹೇಗಾ ದರೂ ನೀವು ಜಗತ್ತಿನ ಪ್ರಭುತ್ವವನ್ನು ಹೊಂದಿದವರಾಗಿದ್ದೀರಿ. ಆದುದರಿಂದ ಇದೊಂದು ಸಾರಿ ನಿಮ್ಮ ಪ್ಪಣೆಯನ್ನು ಮನ್ನಿ ಸುವೆನು, ನಿಮ್ಮೊಡನೆ ನನಗೆ ವಾದವೇಕೆ ? ಬಿಜಯಮಾಡಿರಿ ಎಂದು ಕೊಳ್ಳುತ್ತ ಓಸರಬಾರದಂತೆ ಸುರಗಿರಿಯನ್ನು ಯಥಾಸ್ಥಾನ