ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

128 ಕಥಾಸಂಗ್ರಹು-೪ ನೆಯ ಭಾಗ ಯುದ್ದ ಕಟ್ಟಲು ; ಆಗ ಸುಗ್ರೀವನು ತನ್ನ ಸರ್ವಸೇನಾಪತಿಯಾದ ನೀಲನನ್ನು ಕಳು ಹಿಸಿದನು. ಅನಂತರದಲ್ಲಿ ಆ ದಳಪತಿಗಳಿಬ್ಬರೂ ಯುದ ಕ್ಕೆ ಉಪಕ್ರಮಿಸಿ ದೀರ್ಘಕಾ ಲದ ವರೆಗೂ ಕಾದಾಡಿದರು. ಆ ಮೇಲೆ ಕಪಿನಾಯಕನು ರಾಕ್ಷ ಸವೀರನನ್ನು ಹಿಡಿ ದೆತ್ತಿ ಕುಕ್ಕುತ್ತ ಚೆನ್ನಾಗಿ ತದುಕಿ ಕೊಂದು ಕಾಲನಪುರಿಗೋಡಿಸಿದನು. ಆ ಮೇಲೆ ಅಧರ್ಮವೆಂಬ ರಥದ ಗಾಲಿಯು ಮುರಿದು ಬಿದ್ದಂತೆ ಅವನೊಡನೆ ಬಂದಿದ್ದ ರಾಕ್ಷ ಸಚತುರ್ಬಲವು ಕಣ್ಣಿಟ್ಟು ನಿಂತಿತು. ನೀಲನ ಲೀಲೆಯನ್ನು ಬಣ್ಣಿಪರಾರು ?” ಗಿಂತರು ಗಳನ್ನು ತರುವುದರಿಂದ ಸಾವಕಾಶವಾಗುವುದೆಂದು ರಥದಿಂದ ರಥವನ್ನೂ ಆನೆಯಿಂದ ಆನೆಯನ್ನೂ ರಕ್ಕಸರಿಂದ ರಕ್ಕಸರನ್ನೂ ಬಡಿದೊರಗಿಸಿ ಆ ರಣರಂಗದಲ್ಲಿ ಸಂಹಾರರುದ್ರ ನಂತೆ ಆರ್ಭಟಿಸುತ್ತ ವಿರೋಧಿಗಳನ್ನು ಹುಡುಕಿಕೊಂಡು ತಿರುಗಿದನು. ಆನಂತರದಲ್ಲಿ ರಾವಣನು ಮಹಾಕೊಪಸಂತಾಪಾವಿಷನಾಗಿ ದೇವಾಂತಕ ನರಾ೦ತಕ ತ್ರಿಶಿರ ಅಸಿಕಾಯರೆಂಬವರೇ ಮೊದಲಾದ ತನ್ನ ಮಕ್ಕಳೊಡನೆಯ ಶೌರ್ಯಧುರಂಧರರಾದ ಅನೇಕ ಸೇನಾಪತಿಗಳೊಡನೆಯ ಬಹು ಭಯಂಕರಾಕಾರಧರ ರಾದ ಕುಂಭನಿಕುಂಭರೆಂಬ ಕುಂಭಕರ್ಣನ ಪುತ್ರರೊಡನೆಯೂ ಕೂಡಿ ರಥಾರೂಢನಾಗಿ ಹೊರಟು ಯುದ್ಧ ಭೂಮಿಗೆ ಬರಲು ; ಆಗ ರಾಮಲಕ್ಷ್ಮಣರು ಸುಗ್ರೀವಾಂಗದರೊ ಡನೆಯ ನಳನೀಲಾದ್ಯನೇಕ ವಾನರ ಸೇನಾಪತಿಗಳೊಡನೆಯ ಸಮಸ್ತ ಕಪಿಬಲ ದೊಡನೆಯೂ ಕೂಡಿ ಬಂದು ಯುದ್ಧಕ್ಕೆ ಆರಂಭಿಸಿ ರಾವಣನೊಡನೆ ಬಂದಿದ್ದ ಸರ್ವ ರಾಕ್ಷಸ ಬಲವನ್ನೂ ಸಂಹರಿಸಿ ರಾಮನು ರಾವಣನೆದುರಿಗೆ ಬಂದು ಅವನು ಪ್ರಯೋ ಗಿಸಿದ ಬಾಣಗಳನ್ನೆಲ್ಲಾ ಇಕ್ಕಡಿಗೆಯು ಅವನ ರಥವನ್ನು ಕಡಿದು ಕವಚ ಕಿರೀಟ ಬಿಲ್ಲು ಇವುಗಳನ್ನು ಕತ್ತರಿಸಿ ಬಲಹೀನನಾಗಿರುವ ರಾವಣನನ್ನು ನೋಡಿ.-ಎಲೈ ಚೋರನೇ, ಈ ವರೆಗೂ ನೀನು ನಮ್ಮೊಡನೆ ಹೆಣಗಿ ಬಹಳವಾಗಿ ನೊಂದಿರುವಿ, ಅದು ಕಾರಣ ಈಗ ಹಿಂದಿರುಗಿ ಲಂಕೆಗೆ ಹೋಗು, ಆಯಾಸವಿಶ್ರಾಂತಿಯನ್ನು ಮಾಡಿ ಕೊಂಡು ಭೂಲೋಕದ ಆಶೆಯನ್ನೆಲ್ಲಾ ಮುಗಿಸಿಕೊಂಡು ಬರುವವನಾಗು. ಈಗ ನಿನ್ನನ್ನು ಕೊಲ್ಲುವುದಿಲ್ಲ, ಹೆದರಬೇಡ ಎಂದು ಹೇಳಲು ; ಆಗ ರಾವಣನು ಘೋರ ಕೋಪಕಂಪಿತಾಧರನಾದರೂ ಕಾರ್ಯಶೇಷವಿರುವುದೆಂದು ಹಿಂದಿರುಗಿ ಲಂಕೆಗೆ ಬಂದು ತನ್ನ ಮನಸ್ಸಿನಲ್ಲಿ ನನ್ನ ತಮ್ಮನಾದ ಕುಂಭಕರ್ಣನನ್ನು ಎಬ್ಬಿಸಿ ಈ ಅಲ್ಪ ಮನುಜ ರಾದ ರಾಮಲಕ್ಷ್ಮಣರಿಬ್ಬರನ್ನೂ ತುಳಿಸಿ ಉಳಿದ ಮರ್ಕಟಸಂಕುಲವನ್ನು ಕೊಲ್ಲಿಸಿ ಭೂತ ಪ್ರೇತಾದಿಗಳಿಗೆ ಹಬ್ಬವನ್ನು ಮಾಡಿಸುವೆನೆಂದು ಯೋಚಿಸಿ ಕೂಡಲೆ ಶೂರರಾದ ರಕ್ಕಸರನ್ನು ಕರಿಸಿ ನಿದ್ರಿಸುತ್ತಿರುವ ಕುಂಭಕರ್ಣನನ್ನು ತ್ವರಿತವಾಗಿ ಎಬ್ಬಿಸತಕ್ಕುದೆಂದು ಅಪ್ಪಣೆಯನ್ನಿತ್ತನು. ಆಗ ಅನೇಕ ಸಹಸ್ರಜನ ರಾಕ್ಷಸರನ್ನು ಕೂಡಿಸಿಕೊಂಡು ಮಹಾ ಪ್ರಧಾನಿಗಳು ಕುಂಭಕರ್ಣನ ನಿದ್ರಾಲಯಕ್ಕೆ ಬಂದು ಮುರಜ ಡಿಂಡಿಮ ಪಟಹ ಕಂಸಲೆ ಕರಡೆ ಕೊಂಬು ರಣಮೌರಿ ಭೇರಿ ಕಹಳೆ ಇವು ಮೊದಲಾದ ನಾನಾ ಮಹಾವಾದ್ಯಗಳನ್ನು ಏಕಕಾಲದಲ್ಲಿ ಬಾರಿಸಲು ; ಆ ಶಬ್ದದಿಂದ ವಿಧ್ಯಂಡಮಂಡಲವು ಬೆಚ್ಚಿತು. ಕಡಲುಗಳು