ಪುಟ:ಕಥಾ ಸಂಗ್ರಹ - ಭಾಗ ೨.djvu/೧೪೬

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

136 ಕಥಾಸಂಗ್ರಹ-೪ ನೆಯ ಭಾಗ ಬೇಕು ಎಂದು ಹೇಳುತ್ತಿರುವಲ್ಲಿ ಸುಗ್ರೀವನು ಹೋಗಿ ಕುಂಭಕರ್ಣನ ಎದುರಿನಲ್ಲಿ ನಿಂತನು. ಅವನ ಬೆಂಬಲಕ್ಕಾಗಿ ಹನುಮಂತ ನೀಲ ಅಂಗದ ಜಾಂಬವಂತ ಇವರೇ ಮುಖ್ಯರಾದ ಪ್ರಬಲ ಕಪಿನಾಯಕರು ಗಿರಿತರುಗಳನ್ನು ಸಂವರಿಸಿಕೊಂಡು ಬಂದು ನಿಂತರು. ಅನಂತರದಲ್ಲಿ ಕಪಿವೀರರು ಮೃತ್ಯುದೇವತೆಯನ್ನು ಕೆಣಕುವಂತೆ ಗಿರಿತರುಗ ಳನ್ನು ಕಿತ್ತು ತಂದು ಆ ಕುಂಭಕರ್ಣನ ನೆತ್ತಿಯ ಮೇಲೊಟ್ಟುತ್ತಿದ್ದರು, ಕುಂಭಕರ್ಣ ನು ಮಂದಹಾಸದಿಂದ ಕೂಡಿ ತನ್ನು ಸಿರ್ಗಾಳಿಯಿಂದ ಆ ಕಪಿವೀರರನ್ನೂ ಅವರೆಸೆ ಯುವ ಗಿರಿತರುಗಳನ್ನು ಊದಿ ದಿಗಂತಕ್ಕೆ ಹಾರಿಸಿಬಿಟ್ಟನು. ನುಗ್ಗಿ ದಕಡೆಯಲ್ಲಿ ಕೋಟಿ ಸಂಖ್ಯೆಯ ವಾನರಗಳನ್ನು ಇಕ್ಕಿದನು, ನಾಲಿಗೆಯನ್ನು ಚಾಚಿ ಶತಕೋಟಿಸಂ ಬೈಯ ವಾನರರನ್ನು ನೆಕ್ಕಿದನು. ಕೈಗಳಿಂದ ಬಾಚಿ ಬಾಚಿ ವ್ಯರ್ಬುದಸಂಖ್ಯೆಯ ಕೋತಿಗಳನ್ನು ಮುಕ್ತಿದನು. ಮಹಾರ್ಬದಸಂಖ್ಯೆಯ ಕೋಡಗಗಳನ್ನು ನುಂಗಿದನು. ಹೇಳತಕ್ಕುದೇನು ? ಇದು ರಣರಂಗವಲ್ಲ, ಕುಂಭಕರ್ಣನ ಭೋಜನ ಶಾಲೆಯು, ಬಡಗೋತಿಗಳ ಬಾಳನ್ನು ಕೇಳುವವರಿಲ್ಲ, ಗಒನ ಮೋಹರವು ಮುಗಿ ದಿತು. ನೀಲನ ಬಲವು ನುಗಾಯಿತು, ಜಾಂಬವಂತನ ಒಡ್ಡು ಒಡೆದಿತು. ಅಂಗದನ ಪಡೆಯು ಕೆಡದಿತು. ಹನುಮಂತನ ಸೇನೆಯು ಮಾಯವಾಯಿತು. ನಳನ ದಂಡು ಬಂಡಾಯಿತು. ಪೊಣರ್ಕೆಗಂಬೆ ಗಿಜಿಬಿಜಿಗುಟ್ಟುತ್ತಿರುವ ಉಳಿದ ಕೊಡಗಗಳ ಬಗೆಯುಬ್ಬಸವನ್ನು ಏನು ಹೇಳಲಿ ! ಕ್ರುದ್ದ ನಾದ ಯಮನ ಕೊಲೆಗೆಲಸವೋ ? ಕಾಲಾಂತಕಪರ್ದಿಯ ಕವರುವಿಕೆಯೋ ? ಮಹಾ ಭೈರವನ ಕಾಲಾಟವೋ ? ಕಲಿಕುಂ ಭಕರ್ಣನ ರಣಕೇಳಿಯೋ ? ದೇವೇಂದ್ರನ ಪಟ್ಟಣದ ಸೂಳೆಗೇರಿಯು ಕಿಕ್ಕಿರಿದಿತು. ಯಮನ ಹೊಳಲಲ್ಲಿ ಹೊರಕೇರಿಯು ಕಟ್ಟಲ್ಪಟ್ಟಿತು, ಸಂಯಮನೀನಗರದ ಮಾರ್ಗಗ ಳೆರಡಾದುವು. ಸತ್ಯಲೋಕದ ಮಾರ್ಗವು ನುಗ್ಗಾ ದಿತು. ಈ ಲೋಭಿಯಾದ ಸುಗ್ರೀವನು ಸಾಯಲಿ! ತನ್ನಣ್ಣನನ್ನು ಕೊಂದು ಕೊಟ್ಟ ರಾಜ್ಯಶ್ರೀಯ ಬಿಡಯಕ್ಕೆ ಆಶೆಪಟ್ಟು ನಮ್ಮೆಲ್ಲರನ್ನೂ ಕೆಡಿಸಿದನು. ಈ ರಾಮನು ಹೆಂಡಿರ ಮೋಹದಲ್ಲಿ ಮಣ್ಣು ಕೂಡಿಹೋ ಗಲಿ ! ಈ ಕೃಪಣರ ಹಂಗು ನಮಗೇಕೆ ಬೇಕು ? ನಮಗೇನು ಸಂಬಳವೋ ಸನ್ಮಾನ ವೋ ? ಕಾಡಿನಲ್ಲಿರುವ ಹಣ್ಣಿಗುರೆಲೆಗಳನ್ನು ತಿಂದು ತೊರೆಕೆರೆಕಟ್ಟೆಗಳಲ್ಲಿರುವ ನೀರನ್ನು ಕುಡಿದು ಗಿರಿತರುಗುಹೆಗಳಲ್ಲಿ ವಾಸಮಾಡಿಕೊಂಡಿರುವ ನಾವು ಈ ಲೋಭಿಗಳಾದ ರಾಮಸುಗ್ರೀವರಿಗೋಸ್ಕರ ಈ ರಕ್ಕಸದೆವ್ವದ ಕೈಯಲ್ಲಿ ಸಿಕ್ಕಿ ಅನ್ಯಾಯವಾಗಿ ಪ್ರಾಣ ವನ್ನು ಬಿಡಬೇಕೆಂಬ ತವುಲೇನು ? ಎಂದು ಕೊಳ್ಳುತ್ತ ಕಪಿಜಾಲವೆಲ್ಲಾ ಕಂಡಕಂಡೆ ಡೆಗಳಿಗೆ ಸರಿದಿತು. ಆಗ ಹನುಮಲಾಂಗದನಳ ಸುಷೇಣಗವಾಕ್ಷಾದಿ ಸೇನಾಪತಿ ಗಳು ತಾವು ಭಯಕಂಪಿತರಾದಾಗ ಸುಗ್ರೀವನ ಮೇಲಣ ಅಭಿಮಾನದಿಂದ ಮತ್ತೆ ಗಿರಿತರುಗಳನ್ನು ಹೊತ್ತು ಕೊಂಡು ಬಂದು ದೂರದಲ್ಲಿ ನಿಂತು ಕುಂಭಕರ್ಣನ ಮೇಲೆ ಸೆದರು. ಮಂಜಿಗೆ ಮಲೆಯಂಜುವುದೇ ? ಅವುಗಳೆಲ್ಲಾ ಕುಂಭಕರ್ಣನ ಮೈಗೂದಲು ಗಳಿಗೆ ತಗುಲಿ ಪುಡಿಪುಡಿಯಾಗಿ ನೆಲದಲ್ಲಿ ಬೀಳುತ್ತಿದ್ದುವು, ಸಿಡಿಲುಹೊಯ್ದರೆ ಸಿಗುರೇ ಭದ ಮಹಾಗಿರಿಯು ನುಗ್ಗೆ ಯ ದಡಿಯೇಟಿಗೆ ನಗ್ಗುವುದೇ ? ಎನ್ನುತ್ತ ಕುಂಭಕರ್ಣ