ಕುಂಭಕರ್ಣಸಂಹಾರ 137 ನು ಹೋರುತ್ತಿರುವ ಕಪಿಪತಿಗಳನ್ನು ತನ್ನ ನೀಟಾದ ಗದಾದಂಡದಿಂದ ಹೊಯ್ಯು ರಕ್ತವನ್ನು ಕಾರಿಸಿದನು. ಬಿಸುಗದಿರನಟ್ಟಿ ದ ಕತ್ತಲೆಯ ಮೊತ್ತ: ೦ತೆ ಮತ್ತೆ ಕಪಿಕಟಕವು ಸುಗಿದು ಮುರಿ ಯಲು;ಕುಂಭಕರ್ಣನು ರಾಮನನ್ನು ಹುಡುಕುತ್ತ ಬರುತ್ತಿದ್ದನು. ಆಗ ಕಪಿಗಳ ಅರ ಸನಾದ ಸುಗ್ರೀವನು--ಎಲ್ಲಿಗೆ ಹೋಗುತ್ತಿರುವಿಯೋ? ಖಳನೇ, ಇತ್ತ ತಿರುಗೆಲೋ ! ಎಂದು ಹೇಳುತ್ತ ಹೋಗಿ ಅವನ ಮುಂದೆಸೆಯಲ್ಲಿ ನಿಲ್ಲಲು ; ಆಗ ಜಾಂಬವಂತನುಹೆದರದಿರಿ ! ಕಾಳೆಗದೊಳು ಮಡಿದವರಿಗೆ ಬಹು ಭೋಗ್ಯವನ್ನು ಸಮಗ್ರವಾದ ಸ್ವರ್ಗವು ಸಿಕ್ಕುವುದು, ಪ್ರಾಣಭೀತಿಯಿಂದ ಕೊಳುಗುಳವನ್ನು ಬಿಟ್ಟೋಡಿದರೆ ನಿಮ್ಮ ಪ್ರಾಣಗಳು ಬ್ರಹ್ಮ ಕಲ್ಪದ ಪರ್ಯ೦ತರವೂ ಇರುವುವೇ ? ಹುಚ್ಚುತನವನ್ನು ಬಿಟ್ಟು ಹಿಮ್ಮೆಟ್ಟದೆ ಕಾದಿರಿ. ಸ್ವಾಮಿ ಕಾರ್ಯಹತಪ್ರಾಣರಾಗಿ ಧರ್ಮಕೀರ್ತಿಗಳನ್ನು ಗಳಿಸಿ ಕೊಳ್ಳಿರಿ ಎಂದು ಹೇಳುತ್ತಿರುವ ಮಾತುಗಳನ್ನು ಕೇಳಿ ತಿರುಗಿ ಕಪಿಸ್ತೋಮವು ಕೂಡಿ ಬಂದು ವಿಲಯ ಕಾಲದಲ್ಲಿ ಕಡಲುಬ್ಬಿ ಅಂಬರವನ್ನ ತರುವಂತೆ ತರುಗಿರಿಗಳ ತಂಡದಿಂದ. ಕುಂಭಕರ್ಣನನ್ನು ಹೂಳಲು ; ಮಹಾದ್ರಿಯು ಗುಂಗುರಿನ ಊರಿಕೆಗೆ ಮೈಯ್ಯಳು ಕುವುದೇ ? ಮಂಜೇರಿದರೆ ನಡುವಗ ಮಾರ್ತಾಂಡ ಮಂಡಲವು ನಡುಗುವುದೇ ? ಖಳನು ಮುನಿದು ಕಪಿವಾಹಿನಿಯನ್ನು ತೂರಿದನು. ಕೆದರಿದನು. ಬೀರಿದನು, ಕಚಿ ದನು. ಕವರಿದನು. ಬಿಸುಟನು. ತುಳಿದನು, ಯಮಾಲಯಕ್ಕೆ ಹೊಗಿಸಿದನು. ಕಾಳಗ ಕಳುಕದೆ ಕವಿಯುವವರನ್ನು ಬಡಿದು ಕಳವಳಕ್ಕೆ ಗುರಿಮಾಡಿದನು. ಹೊಂಚಿ ಹಳ ಚುವ ಭಟರನ್ನು ಹಿಡಿದು ಹಿಡಿದು ಬಾಯೊಳಗಡಸಿದನು, ಆಗ ಕುಂಭಕರ್ಣನಿಂದ ಮಂಗಲ್ಪಟ್ಟ ಕಪಿಭಟರು ಅವನ ನವದ್ವಾರಮಾರ್ಗಗಳಿಂದಲೂ ಚಿಗಿಚಿಗಿದು ಹೊರಟು ಬರುತ್ತಿದ್ದರು. ಹಲ್ಲುಗಳಲ್ಲಿ ಸಿಕ್ಕಿ ಅಜಿಗಿಜಿಯಾದ ಸುಭಟರೂ ಹೆಜ್ಜೆ ಮೊಳಕಾಲ್ಮ ತಕ್ಕೆ ಮೊದಲಾದುವುಗಳ ಪೆಟ್ಟುಗಳಿಂದ ಮೃತರಾದ ವೀರರೂ ಇಪ್ಪಾದರೆಂಬ ಸಂಖ್ಯೆಯು ಗೊತ್ತಿಲ್ಲ. ಏನು ಹೇಳುವುದು ? ಕುರಿಹಿಂಡಿನೊಳಗೆ ಮುನಿದಾಡುವ ತೋಳನೋ ? ಕರಿ ಘಟೆಗಳೊಡನೆ ಕಾದಾಡುವ ಮೃಗರಾಜನೋ? ಹುಲ್ಲೆ ಗುಂಪಿನೊಳಗಣ ಹೆಬ್ಬುಲಿಯೋ? ಸರ್ಪಗಳ ಬಳಗದಲ್ಲಿ ನುಗ್ಗಿದ ಗರುಡನೋ ? ಎಂಬಂತೆ ಖಳನು ತೋರಿದ ಕಡೆಗೆ ನುಗ್ಗಿ ಕಪಿಗಳ ತಂಡವನ್ನು ಬಡಿದು ದಿಂಡುಗೆಡಹಿ ರಾಮನನ್ನು ಅರಸುತ್ತ ಮುಂದು ವರಿದು ಬಂದು--ಹೆಂಡತಿಯನ್ನು ಕಳೆದು ಕೊಂಡು ನಿರ್ಲಜ್ಜೆಯಿ೦ದ ಕಪಿಗಳನ್ನು ಕೊಲ್ಲಿಸುತ್ತಿರುವ ಮಾನಹೀನನಾದ ರಾಮನೆಂಬವನು ನೀನೆಯೋ ? ಎಂದು ರಾಮ ನನ್ನು ಹಿಡಿಯುವುದಕ್ಕೆ ಬರುತ್ತಿರಲು ; ಹಾ ! ಕೆಲಸಕೆಟ್ಟಿತು. ಗತಿಯೇನೆಂದು ಕಳ ಗಳದಿಂದ ಕೂಗುತ್ತಿರುವ ದೇವತೆಗಳ ಧ್ವನಿಯನ್ನು ಕೇಳಿ ಮಾರುತಿಯು ಕೋಪದಿಂದ ಕಿಡಿಗೆದರುತ್ತ ಓಡಿ ಬಂದು ಬೊಬ್ಬರಿದು ಖಳನು ತಿನುಕುವಂತೆ ತಿವಿದನು. ಕಲ್ಲಾಂತ ವಜಹತಿಯಿಂದ ತಲೆಗೊಡಹುವ ಕುಲಗಿರಿಯಂತೆ ಒಲಿದೊಲೆದು ಕಣ್ಣಿಗೆ ಕವಿಯುವ ಕತ್ತಲೆಯಿಂದ ಕಳವಳಿಸಿ ಕೋಪೋದ್ರಿಕ್ತನಾದ ಕುಂಭಕರ್ಣನು ತನ್ನ ಶೂಲಾಯುಧ
ಪುಟ:ಕಥಾ ಸಂಗ್ರಹ - ಭಾಗ ೨.djvu/೧೪೭
ಗೋಚರ