ಪುಟ:ಕಥಾ ಸಂಗ್ರಹ - ಭಾಗ ೨.djvu/೧೪೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


138 ಕಥಾಸಂಗ್ರಹ-೪ ನೆಯ ಭಾಗ ದಿಂದ ಚಟುಲವಿಕ್ರಮನಾದ ವಾಯುಪುತ್ರನನ್ನು ತಿವಿಯಲು ; ಆಗ ಸಮರ ಸಮರ್ಥ ನಾದ ಅನಿಲಸಂಭವನು ಶೂಲವನ್ನು ಕೆಡನೂಕಿ ಬಾಯಿಯಲ್ಲಿ ಕೆತ್ತುರಿಯುವಂತೆ ಖಳನೆದೆಯನ್ನು ತಿವಿದನು ಘೋರನಿಶಾಚರನು ಕಪಿಯ ಕೈ ಪೆಟ್ಟನ್ನು ಗಣಿಸುವನೇ ? ಆ ಕ್ಷಣದಲ್ಲಿಯೇ ಭೀಕರಪರಿಘಾಯುಧದಿಂದ ಅಂಜನೆಯ ಮಗನನ್ನು ಅಪ್ಪಳಿಸಿ ದನು, ಆಗ ಮರುನ್ನಂದನನು ಕ್ಷಣಮಾತ್ರ ಬಗೆಗುಂದಿ ಎದ್ದು ಕೋಪದಿಂದ ಆರ್ಭ ಟಿಸಿ ತನ್ನ ವಜೋಪಊಾಯ ವಾದ ಮುಷ್ಟಿಯಿಂದ ಕುಂಭಕರ್ಣನ ಅಳ್ಳೆಯನ್ನು ತಿವಿ . ಯಲು ; ಮೊದಲು ತುಪ್ಪದಲ್ಲಿ ಅದ್ದಿಯದ್ದಿ ನುಂಗಿದ್ದ ಕೂಳಿನ ಮುದ್ದೆಗಳು ಖಳನ ಬಾಯಿಯಿಂದ ಹೊರಟು ನೆಲದಲ್ಲಿ ಬಿದ್ದು ವು. ಆಗ ಕುಂಭಕರ್ಣನು ನೋಡಿ ಅಹುದೋ ? ಕಪಿಗಳ ಗುಂಪಿನಲ್ಲಿ ನೀನೇ ಗಟ್ಟಿಗನು. ಪರಾಕ್ರಮ ದಲ್ಲಿ ನಮ್ಮ ಇಂದ್ರ ಜಿತನ್ನು ಹೋಲುತ್ತಿರುವಿ. ಅನ್ನೊಂದು ಸಾರಿ ನನ್ನೊಡನೆ ಯುದ್ಧಕ್ಕೆ ನಿಂತರೆ ನೀನೇ ಶೂರನು ಎಂದು ಅರಿಭಯಂಕರನನ್ನು ಆಯುಧದ ಬುಡದಿಂದ ತಿವಿದು ಹಾರಿ ಸಲು ; ಆಂಜನೇಯನು ಆ ಸ್ಥಳಕ್ಕೆ ಐನೂರು ಕೋಲಳತೆಯಲ್ಲಿ ಬಿದ್ದನು. ಹನುಮಂತನನ್ನು ಹೊಯ್ಕ ಬಿರುಸಿಂದ ಕಾಲುಜಾರಿ ಭೂಮಿಯಲ್ಲಿ ಬಿದ್ದ ಕುಂಭಕರ್ಣನು ಮೆಲ್ಲಗೆ ಕೈಯರಿಕೊಂಡಿದ್ದು ಮಾರುತಿಯ ಬಳಿಗೆ ಹೋಗುತ್ತಿ ರಲು ; ಸುಗ್ರೀವನು ಅದನ್ನು ನೋಡಿ ಆ ಕುಂಭಕರ್ಣನ ಬಳಿಗೆ ಬಂದು ನಿಂತು ಕಿಸು ಗಣಿ ಅವನಂತೆಯೇ ಬೆಳೆದು ವಿಮಾನಸ್ಥರಾದ ದೇವತೆಗಳು ಹೊಗಳುವಂತೆ ಗಿರಿ ತರುಗಳಿಂದ ಹೊಮ್ಮು ಬೊಬ್ಬಿರಿದನು, ಆಗ ನಿಶಾಚರನುರಣ ಕೇಳಿಯಲ್ಲಿ ವಾಲಿ ಯೇ ಸಮರ್ಥನು, ಅವನ ತರುವಾಯ ನೀನೇ ಸುಭಟನು, ಸಿಶ ಯವೆಂದು ಬೆರಳನಾಡಿ ಸುತ್ತ ತಲೆಯನ್ನು ತೂಗುತ್ತ ಹೊಗಳುತ್ತಿರಲು ; ಸುಗ್ರೀವನು--ಎಲಾ ಖಳನೇ, ಕೇಳು, ನಾನು ಕಪಿರಾಜನೆಂಬುದನ್ನು ನೀನು ಕೇಳಲಿಲ್ಲವೇ ? ನಾನು ರಣಕೇಳಿಯಲ್ಲಿ ಸೋತು ಹಿಮ್ಮೆಟ್ಟುವ ಭಟನೇ ? ಎನ್ನುತ್ತ ಸಿಡಿಲಿನಂತೆ ಗರ್ಜಿಸಿ ಬೀಳೆಂದು ಮುಷ್ಟಿ ಯಿಂದ ತಿವಿಯಲು ; ಕುಂಭಕರ್ಣನು ತಲ್ಲಣಿಸಿ ತಲೆಕೆಳಗಾಗಿ ನೆಲಕ್ಕೆ ಬೀಳಲು ; ಭೂಮಿಯು ನೂರು ಪುರುಷಪ್ರಮಾಣ ರಸಾತಳಕ್ಕಿಳಿದು ಹಳ್ಳವಾದಿತು, ಆಗ ರಾವ ಣಾನು ಜನು ಚೇತರಿಸಿಕೊಂಡದ್ದು ಕೋಪದಿಂದ ಮೊರೆದು--ಎಲವೋ ಕಪಿಯೇ, ಕೇಳು, ನೀನು ನಮ್ಮ ಸಮರದಲ್ಲಿ ಈ ಮಹಾಯುಧದ ಆನಿಂದ ಸಾಯದೆ ಉಳಿದೆ ಯಾದರೆ ನಾನು ಮೂಗುಹೋದವನು, ಅದು ಕಾರಣ ಮೈಮರೆಯದೆ ಎಚ್ಚರಿಕೆ ಯಿಂದಿರು ಎಂದು ಕ್ರೂರವಾಗಿ ನುಡಿದು ಅತಿವಿಷಮವಾದ ಮಹಾಶಕ್ತಿಯಿಂದ ಹೊಡೆಯಲು ; ಆಗ ಕಪಿಕಟಕವು ತಲ್ಲಣಿಸಿ ಮುಂಗಟ್ಟು ಬಗೆಗುಂದಿತು. ವಾನರವೀರ ರಲ್ಲಿ ಬಲ್ಲಿದನಾದ ಆಂಜನೇಯನ ಎಚ್ಚರಿಕೆಯೆಷ್ಟೋ ? ಮುಂದಣ ಆಲೋಚನೆಯ ಹವಣಿಂತಿರುವುದೆಂದು ತಿಳಿದಿದ್ದವರಾರು ? ಭೂಮ್ಯಾಕಾಶಗಳನ್ನು ಒಂದೇ ಬಾರಿಗೆ ನುಂಗಿಬಿಡುವಂತೆ ಸುಗ್ರೀವನ ಮೇಲೆ ಬರುತ್ತಿರುವ ಮಹಾಶಕ್ತಿಯನ್ನು ನೋಡಿ ನಿಮೇ ಷಮಾತ್ರದಲ್ಲಿ ಪುಟನೆಗೆದು ಹಾರಿ ಮಧ್ಯಮಾರ್ಗದಲ್ಲಿಯೇ ಅದನ್ನು ಹಿಡಿದುಕೊಂಡು ತಿರಿಗಿ ಅದನ್ನೇ ಕುಂಭಕರ್ಣನ ಮೇಲೆ ಹಾಕುವುದಕ್ಕೆ ಉದ್ಯುಕ್ತನಾಗುತ್ತಿರಲು ; ಆಗ