ಪುಟ:ಕಥಾ ಸಂಗ್ರಹ - ಭಾಗ ೨.djvu/೧೭೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ರಾವಣನ ಮರಣವು 167 ಜಾಂಬವನ್ನೀಲಾಂಜನೇಯಾದಿಗಳು ಶೀಘ್ರವಾಗಿ ಅವನ ಸಮಿಾಪಕ್ಕೆ ಬಂದು ಶೈತ್ಯ ಪಚಾರಗಳನ್ನು ಮಾಡಿ ಎಬ್ಬಿಸಿ ಅಸ್ಥಿರವಾದ ಭೌತಿಕ ವಸ್ತುಗಳಲ್ಲಿ ಮಮತೆಯನ್ನು ಸಂಪಾದಿಸಿಕೊಳ್ಳುವುದರಿಂದುಂಟಾಗುವ ಹಾನಿಯ ವಿಷಯವಾಗಿ ಬೋಧಿಸಿ ಸಮಾ ಧಾನಪಡಿಸಿ ಅಲ್ಲಿಂದ ಸರ್ವರೂ ಹೊರಟು ಶ್ರೀರಾಮನ ಬಳಿಗೆ ಬಂದು ವಿದ್ಯಮಾನವ ನ್ನೆಲ್ಲಾ ತಿಳಿಸಿದರು. ಆಗ ಶ್ರೀರಾಮನು ಸಂತುಷ್ಟಾಂತರಂಗನಾಗಿ ಲಕ್ಷ್ಮಣನನ್ನು ಆಲಿಂಗಿಸಿ ಮುದ್ದಿಸಿ ವಿಭೀಷಣನನ್ನೂ ಕಪಿವೀರರನ್ನೂ ವಿಶೇಷವಾಗಿ ಸನ್ಮಾನಿಸಿದನು. 9, THE BATTLE ON LANKA-DEATH OP RAYANA, ೯, ರಾವಣನ ಮರಣವು. ಇತ್ತ ಲಂಕಾ ರಾಜಧಾನಿಯಲ್ಲಿ ರಾವಣನು ತನ್ನ ಪ್ರೇಮಪುತ್ರನಾದ ಇಂದ್ರ ಜೆಕ್ಕಿನ ದಾರುಣವಾದ ಮರಣವಾರ್ತೆಯನ್ನು ಕೇಳಿ ತತ್‌ಕ್ಷಣದಲ್ಲೇ ಎದೆಯಲ್ಲಿ ನೆಟ್ಟಂಗು ಬೆನ್ನಿನಲ್ಲಿ ಹೊರಟಂತೆಯ ಕೆಂಪಗೆ ಕಾಯ್ತು ಕ್ರೀನ ಶಲಾಕೆಗಳಿಂದ ಕಿವಿ ಯಲ್ಲಿರಿಯಲ್ಪಟ್ಟಂತೆಯ ಆಗಿಹಾ ! ಯುವರಾಜರತ್ ವೇ ಎಂದು ಕಳವಳಿಸಿ ನೆಲದಲ್ಲಿ ಬಿದ್ದು ಮರ್ಲೆಹೊಂದಿದನು, ಆ ಮೇಲೆ ಪರಿಜನರು ಮಾಡಿದ ಶೈತ್ಯೋಪ ಚಾರಗಳಿಂದ ಚೇತರಿಸಿಕೊಂಡು ಮೆಲ್ಲನೆದ್ದು ಕುಳಿತು--ಓ ಮಗನೇ, ನಿನ್ನಿಂದ ಸುರನಗರವು ನನಗೆ ಸುಲಭವಾಗಿ ಕೈಸೇರಿತು. ದೇವತೆಗಳೆಲ್ಲಾ ಸೇವಕರಾದರು. ನೀನು ಬಾಲ್ಯದಲ್ಲೇ ಇಂದ್ರಾದ್ಯಾದಿತೇಯರ ಗಂಡನೆಂಬ ಅಸದೃಶವಾದ ಬಿರುದನ್ನು ಸಂಪಾ ದಿಸಿದಿ! ದುರ್ನಿವಾರ್ಯವಾದ ನಿನ್ನ ಭುಜವಿಕ್ರಮಾತಿಶಯದಿಂದ ನನ್ನ ಕೀರ್ತಿಪ್ರತಾ ಪಗಳ ಹೊಗಳಿಕೆಯೆಂಬ ಲತೆಯು ನಿರರ್ಗಳವಾಗಿ ಬೆಳೆದು ಮೂರು ಲೋಕಗಳಲ್ಲೂ ಹರಹಿಕೊಂಡಿತು, ನಿನ್ನ ವಿಕ್ರಮಾಗ್ನಿ ತಪ್ತರಾದ ಮುನಿಜನಗಳು ಬಂದು ಭಯಭಕ್ತಿ ಯಿಂದ ನನ್ನನ್ನು ಪೂಜಿಸುತ್ತಿದ್ದರು, ಆರಿರಾಜರೆಲ್ಲರೂ ಭಯಭರಿತ ಭಕ್ತಿಯು ಕ್ತರಾಗಿ ಅಹೋರಾತ್ರಿಗಳಲ್ಲೂ ನನ್ನ ಯಶಃಪ್ರತಾಪಗಳನ್ನು ಹೊಗಳಿ ನನ್ನನ್ನು ಮೆಚ್ಚಿಸುತ್ತಿ ದ್ದರು. ಹಾ ! ಕುಮಾರ ಕಂಠೀರವನೇ ! ನೀನು ಮಡಿದುದರಿಂದ ನನ್ನ ವಂಶವೃಕ್ಷದ ಬೇರು ಕೀಳಲ್ಪಟ್ಟಂತಾಯಿತು. ಲಂಕಾ ರಾಜ್ಯಲಕ್ಷ್ಮಿಯು ತಲೆಯಿಲ್ಲದ ಮುಂಡದಂ ತಾದಳು. ಲಂಕಾ ರಾಜಧಾನಿಯು ವಿಷವಿಲ್ಲದ ಘಟಸರ್ಪದಂತೆ ಅರಿತಿರಸ್ಕಾರಕ್ಕೆ ಗುರಿಯಾಯಿತು, ಅಸುರಕುಲ ವಿರೋಧಿಗಳಾದ ದೇವತೆಗಳ ಹರ್ಷಲತೆಯು ಬೆಳೆಯುವ ಕಾಲವು ಕಾಲಿಟ್ಟಿತು. ನೀನಿಲ್ಲದ ಮೇಲೆ ನನಗೆ ಜಯವೂ ಉಲ್ಲಾಸವೂ ಎತ್ತಣಿಂದ ಬರುವುವು ? ನನಗಿರುವ ಆಧಿಪತ್ಯವೂ ಅತುಲಸಂಪತ್ತೂ ನನಗೇ ವಿರೋಧವಾಗಿ ದುಷ್ಪಲಗಳನ್ನು ಕೊಡುವ ವಿಷಮ ಕಾಲವು ಬಂದೊದಗಿತು. ಒಲಹೀನನಾದ ನನಗೆ ಈ ಸರಿಯೇಕೆ ? ಇನ್ಸಿಲೋಕತ್ರಯದ ಅರಸುತನದ ದಂದುಗವೇಕೆ ? ಎಲ್ಲೆ ತಂದೆ ಯೇ, ಇಂದ್ರಜಿತೇ, ನೀನಿಲ್ಲದ ಮೇಲೆ ಈ ನನ್ನ ಪ್ರಾಣಗಳಿಂದ ಪ್ರಯೋಜನವೇನು ?