ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮನ ಪಟ್ಟಾಭಿಷೇಕವು 195 ದೂತನು. ಇನ್ನು ಮೇಲೆ ನಿನ್ನ ಮನಸ್ಸಿನ ಸಂಶಯವನ್ನು ಬಿಟ್ಟು ತೆಂಕಣದಿಕ್ಕಿನ ಕಡೆಗೆ ನೋಡು ಎನ್ನಲು ; ಆಗ ಭರತನು ನಡೆದುಬರುತ್ತಿರುವ ಬಲ್ಕು ಗಿಲೋ ಎಂಬಂತೆ ಕಂಗೊಳಿಸುತ್ತ ಬರುತ್ತಿರುವ ವಿಮಾನವನ್ನು ದಿಟ್ಟಿಸಿ ನೋಡುತ್ತಿರುವಷ್ಟರಲ್ಲಿಯೇ ಆ ವಿಮಾನವು ನಂದಿಗ್ರಾಮದ ಬಳಿಗೆ ಬಂದಿಳಿದಿತು. ಆಗ ಭರತನು ಬಹಳವಾಗಿ ಸಂತೋಷವೆಂಬ ಸಮುದ್ರದಲ್ಲಿ ಮುಳುಗಿ ತೇಲಾ ಡುತ್ತ ತಾನು ಆ ದಿನದ ವರೆಗೂ ಭಯಭಕ್ತಿ ಪರಸ್ವರವಾಗಿ ಆರಾಧಿಸುತ್ತಿದ್ದ ಶ್ರೀರಾ ಮನ ರತ್ನಖಚಿತಗಳಾದ ಹಾವುಗೆಗಳನ್ನು ಮಂಡೆಯ ಮೇಲಿರಿಸಿಕೊಂಡು ಹೊರಟನು. ಆಗ ಆ ಭರತನ ಎರಡು ಕಡೆಗಳಲ್ಲೂ ಚಿನ್ನದ ಹಿಡಿಗಳಿಂದ ಶೋಭಿಸುತ್ತಿರುವ ಶ್ರೇತ ಚಾಮರಗಳಿಂದ ಬೀಸುತ್ತಿದ್ದರು, ಮತ್ತು ಶರತ್ಸಮಯದ ಹುಣ್ಣಿಮೆಯ ಚಂದ್ರನಂತೆ ಬಿಳುಪಾಗಿಯ ಚಟುವಾಗಿಯೂ ಇರುವ ಕೊಡೆಗಳೂ ಬಾಲಸೂರ್ಯನಂತಿರುವ ಕೆಂಪು ಕೊಡೆಗಳೂ ಕಾರ್ಮುಗಿಲುಗಳಂತೆ ಕಪ್ಪಾಗಿರುವ ಕಪ್ಪ ಕೊಡೆಗಳೂ ಪಚ್ಚೆ ಯಂತೆ ಹೊಳೆಯುತ್ತಿರುವ ಹಸುರು ಕೊಡೆಗಳೂ ಒಪ್ಪುತ್ತಿದ್ದುವು. ಮುಂದುಗಡೆ ಯಲ್ಲಿ ನವರತ್ನ ಖಚಿತಗಳಾದ ತಡಿಗಳಿಂದಲೂ ವಿಚಿತ್ರ ಮಣಿಗಳಿಂದ ಅಲಂಕೃತಗಳಾಗಿ ಒಪ್ಪುತ್ತಿರುವ ಮೊಗವಾಡಗಳಿಂದಲೂ ಮುತ್ತಿನ ಕುಚ್ಚುಗಳ ಗೊಂಡೆಗಳಿಂದಲೂ ಕೆಂಪು ದಮಾಸಿನ ಎದೆಪಟ್ಟಿಗಳಿಂದಲೂ ನಾನಾ ಪ್ರಕಾರಗಳಾದ ಚಿನ್ನ ಬೆಳ್ಳಿಗಳ ಒಡವೆ ಗಳಿಂದಲೂ ಅಲಂಕೃತಗಳಾಗಿ ಪರಿಶೋಭಿಸುತ್ತಿರುವ ಹಿಡಿಗುದುರೆಗಳ ಸಾಲುಗಳು ಮೇಲಾಗಿ ಒಪ್ಪುತ್ತಿದ್ದುವು. ಮತ್ತು ದಿಗ್ಗಜಗಳು ತಾವು ನಿರಂತರವೂ ಭೂಮಿ ಯನ್ನು ಹೊರುವುದರಿಂದುಂಟಾಗುವ ಶ್ರಮವನ್ನು ಹೋಗಲಾಡಿಸಿಕೊಳ್ಳುವುದಕೆ. ಸ್ಕರ ಶ್ರೀರಾಮನ ಪಾದುಕೆಗಳ ಸೇವೆಯನ್ನು ಮಾಡುವುದಕ್ಕಾಗಿ ನಾನಾ ರೂಪಗ ಳನ್ನು ಧರಿಸಿ ಬಂದಿರುವುವೋ ಎಂಬಂತೆ ನೀರಾಜಿಯ ಗುಳಗಳಿಂದಲೂ ಚಿನ್ನದ ಕಿರು ಗಂಟೆಗಳಿಂದಲೂ ಸುವರ್ಣದ ಸರಪಣಿಗಳಿಂದಲೂ ಕಾಲುಕಡಗಗಳಿಂದಲೂ ನೋಡು. ವವರಿಗೆ ಚಂದವನ್ನು ಬೀರುತ್ತ ಕಿವಿಗಳ ಮುಂಗಡೆಯಲ್ಲಿ ಜೋಲುತ್ತಿರುವ ಬಿಳಿಯ ಚಾಮರಗಳಿಂದಲೂ ಶೃಂಗರಿಸಲ್ಪಟ್ಟು ವುಗಳಾಗಿ ನವರತ್ನ ಖಚಿತಗಳಾದ ಅಂಬಾರಿಗ ಳನ್ನು ಧರಿಸಿಕೊಂಡು ಮದಗಜಗಳು ಮುಂದೆ ನಡೆದುವು, ಅವುಗಳ ಮುಂದೆ ಹಸು ಬಲ್ಲೆಯದವರೂ ಅವರ ಮುಂದೆ ಬೆಳ್ಳಿ ಕಟ್ಟಿನ ಈಟಿಯವರೂ ಅವರ ಮುಂದೆ ಧನು ರ್ಬಾಣಗಳನ್ನು ಧರಿಸಿದವರೂ ಎರಡು ಕಡೆಗಳಲ್ಲೂ ಸಾಲುಸಾಲಾಗಿ ಹೋಗುತ್ತಿ ದ್ದರು ಅವರ ನಡುವೆ ಓಲಗದವರೂ ಕೊಳಲಿನವರೂ ಕಹಳೆಯವರೂ ತಂಬೂರಿ ಯನ್ನೂ ವೀಣೆಯನ್ನೂ ಸಾರಂಗವನ್ನೂ ಸ್ವರಮಂಡಲವನ್ನೂ ಕಿನ್ನರಿಯನ್ನೂ ನುಡಿ ಸುವವರೂ ಭೇರಿ ಮದ್ದಲೆ ನಗಾರಿ ಹುಯ್ತು ತಂಬಟೆ ಈ ಮೊದಲಾದುವುಗಳನ್ನು ಬಾರಿಸುವವರೂ ಹೋಗುತ್ತಿದ್ದರು, ಮತ್ತು ಭರತ ಶಾಸ್ವಾಧಿದೇವತೆಗಳೊ, ಅಪ್ಪರ ಸ್ತ್ರೀಯರ ಸಂಕುಲವೋ ? ಎಂಬ ಭ್ರಾಂತಿಯನ್ನು ಹುಟ್ಟಿಸುತ್ತಿರುವ ಪಾರವಿಲಾಸಿನಿ ಯರು ದಿವ್ಯ ವಿವಿಧ ವರ್ಣಪರಿಶೋಭಿಗಳಾದ ಸೀರೆಗಳನ್ನು ಟ್ಟು ಕಾಸೆಯನ್ನು ಕಟ್ಟಿ ಸೀರೆಯ ಸೆರಗನ್ನು ನಡುವಿನ ಪಟ್ಟಿ ಯಲ್ಲಿ ಸಿಕ್ಕಿಸಿ ನವರತ್ನಾಭರಣಗಳನ್ನು ಧರಿಸಿ