ಪುಟ:ಕಥಾ ಸಂಗ್ರಹ - ಭಾಗ ೨.djvu/೨೫೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


242 ಕಥಾಸಂಗ್ರಹ-೫ ನೆಯ ಭಾಗ ಹರಿಯು ಎಲ್ಲಿದ್ದಾನೆ ? ತೋರಿಸು ಎನ್ನಲು ; ಆಗ ಪ್ರಹ್ಲಾದನು--ಎಲೈ ತಂದೆಯೇ, ಸರ್ವಾಂತರ್ಯಾಮಿಯಾದ ಹರಿಯು ಸಕಲಸ್ಥಳಗಳಲ್ಲಿಯ ಅಣುರೇಣುತೃಣಕಾಷ್ಠ ಗಳಲ್ಲಿಯ ಪರಿಪೂರ್ಣನಾಗಿದ್ದಾನೆ. ಸಮಸ್ತಲೋಕಗಳಲ್ಲಿಯೂ ಅವನಿಲ್ಲದ ಸ್ಥಳವು ಎಲ್ಲೂ ಇಲ್ಲ ಎನ್ನಲು ; ಆಗ ಹಿರಣ್ಯಕಶಿಪುವು-ಹಾಗಾದರೆ ನಿನ್ನ ಹರಿಯನ್ನು ಈ ನನ್ನ ಚಾವಡಿಯ ಉಕ್ಕಿನ ಕಂಬದಲ್ಲಿ ತೋರಿಸಿದರೆ ಸರಿ, ಇಲ್ಲದಿದ್ದರೆ ಅಜ್ಞಾನಿ ಯಾದ ನಿನ್ನನ್ನು ಈ ಕ್ಷಣದಲ್ಲೇ ತುಂಡುತುಂಡಾಗಿ ಕತ್ತರಿಸಿ ನಿನ್ನ ಶರೀರವನ್ನು ನಾಯ್ಕ ರಿಗಳಿಗೆ ಆಹಾರವನ್ನಾಗಿ ಮಾಡುವೆನು ಎಂದು ಹೇಳುತ್ತ ನಾನಾ ಪ್ರಕಾ ರವಾಗಿ ಪ್ರಹ್ಲಾದನನ್ನು ಬಾಧಿಸುತ್ತಿದ್ದನು, ಆಗ ಮಹಾವಿಷ್ಣುವು ನಿಜಭಕ್ತನಾದ ಪ್ರಹ್ಲಾದನಿಗಾಗುತ್ತಿರುವ ಹಿಂಸೆಯನ್ನು ನೋಡಿ ಸಹಿಸಲಾರದೆ ಆ ಹಿರಣ್ಯಕಶಿಪುವಿಗೆ ಮೊದಲು ಚತುರ್ಮುಖನು ಕೊಟ್ಟಿದ್ದ ವರವು ವ್ಯರ್ಥವಾಗದ ಹಾಗೆ ಈ ದುಷ್ಟನನ್ನು ಹೇಗೆ ಕೊಂದುಹಾಕಬೇಕೆಂದು ಯೋಚಿಸಿ ಆಗ ಕಂಠದಿಂದ ಮೇಲಕ್ಕೆ ಸಿಂಹಾಕಾ ರವೂ ಅಲ್ಲಿಂದ ಕೆಳಗೆ ಮನುಷ್ಯಾಕಾರವೂ ಉಳ್ಳ ತ್ರಿಲೋಕಭಯಂಕರವಾದ ನರಸಿಂಹ ರೂಪವನ್ನು ಧರಿಸಿ ಆ ಚಾವಡಿಯ ಉಕ್ಕಿನ ಕಂಬವನ್ನು ಕೊಟಿ ಸಿಡಿಲು ಆರ್ಭಟಿಸಿ ದಂತೆ ಎರಡು ಭಾಗವಾಗಿ ಸೀಳಿ ಹೊರಗೆ ಬಂದು ನಿಲ್ಲಲು ; ಆ ರಭಸಕ್ಕೆ ಹಿರಣ್ಯಕಶಿ ಪವು ಹೆದರಿ ಕೆಳಕ್ಕೆ ಬಿದ್ದು ಮೂರ್ಛಿತನಾದನು, ಅಲ್ಲಿದ್ದ ಅಸಂಖ್ಯಾತವಾದ ರಾಕ್ಷ ಸಬಲದೊಳಗೆ ಒಬ್ಬನಾದರೂ ಉಳಿಯದೆ ನರಸಿಂಹನ ಉಗ್ರತೇಜಸ್ಸಿನಿಂದ ಸುಟ್ಟು ಭಕ್ಕೀಭೂತರಾಗಿ ಹೋದರು. ಆಗ ಪ್ರಹ್ಲಾದನು ಮುಂದೆ ಬಂದು ಭಯಭರಿತಭಕ್ತಿ ಯಿಂದ ನರಸಿಂಹನಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿ ಎದ್ದು ಕೈಮುಗಿದು ನಿಂತು ಕೊಂಡು ಅನೇಕ ವಿಧವಾಗಿ ಸ್ತೋತ್ರಮಾಡುತ್ತಿದ್ದನು. ಅನಂತರದಲ್ಲಿ ನರಸಿಂ ಹನು ಹಗಲಿರುಳಲ್ಲದ ಮುಚ್ಚಂದೆಯ ವೇಳೆಯಲ್ಲಿ ಆ ಹಿರಣ್ಯಕಶಿಪುವನ್ನು ಎತ್ತಿ ಕೊಂಡು ಒಳಗೂ ಹೊರಗೂ ಅಲ್ಲದ ಹೊಸ್ತಿಲ ಮೇಲೆ ಕೂತುಕೊಂಡು ಆಕಾಶವೂ ಭೂಮಿ ಯ ಅಲ್ಲದ ತನ್ನ ತೊಡೆಯ ಮೇಲೆ ಕೆಡಹಿಕೊಂಡು ಯಾವ ಆಯುಧಗಳೂ ಅಲ್ಲದೆ ತನ್ನ ಉಗುರುಗಳಿಂದ ಅವನ ಹೊಟ್ಟೆಯನ್ನು ಬಗೆದು ಕರುಳುಗಳನ್ನು ತೆಗೆ ದುಕೊಂಡು ತುಲಸೀ ಮಾಲೆಗಳಂತೆ ತನ್ನ ಕೊರಳುಗಳಿಗೆ ಹಾಕಿಕೊಂಡು ಅತ್ಯುಗ್ರ ವಾದ ತನ್ನ ನರಸಿಂಹರೂಪದಿಂದ ಒಪ್ಪಿದನು. ಆ ಸಮಯದಲ್ಲಿ ನರಸಿಂಹನು ಅತ್ಯಂತ ಕೋಪಾವೇಶದಿಂದ ರೌದ್ರಾಕಾರವು ಇವನಾಗಿ ಕೋಪಾಗ್ನಿ ಯಿಂದ ಮರು ಲೋಕಗಳನ್ನೂ ಸುಡುತ್ತ ಇದ್ದಾಗ ಶಾಂತನಾಗದೆ ಇರಲು ; ಆಗ ಬ್ರಹ್ಮಾದಿ ದೇವತೆಗಳೆಲ್ಲಾ ವ್ಯಸನಾಕ್ರಾಂತರಾಗಿ ಒಂದು ಗೂಡಿ ಮಹಾಲಕ್ಷ್ಮಿಯನ್ನು ಪ್ರಾರ್ಥಿಸಿ ನರಸಿಂಹನ ಬಳಿಗೆ ಕಳುಹಿಸಲು ; ಆ ಕೂಡಲೆ ಲಕ್ಷ್ಮಿ ದೇವಿಯು ಬಂದು ತಾನೂ ಕೂಡ ಭಯಂಕರಾಕಾರಧರನಾದ ನರಸಿಂಹನ ಬಳಿಗೆ ಹೋಗುವುದಕ್ಕೆ ಭಯಪಟ್ಟು ಪರಮಭಕ್ತನಾದ ಪ್ರಹ್ಲಾದನನ್ನು ಮುಂದುಮಾಡಿಕೊಂಡು ಮೆಲ್ಲ ಮೆಲ್ಲನೆ ಹೋಗಿ ನರಸಿಂಹನ ಮುಂದೆ ನಿಲ್ಲಲು ; ಆಗ ಆತನು ಅವರಿಬ್ಬರನ್ನೂ ನೋಡಿ ಶಾಂತನಾಗಿ ಅವರನ್ನು ಬರಸೆಳೆದು ತನ್ನೆರಡು ತೊಡೆ