ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

250 ಕಥಾಸಂಗ್ರಹ-೫ ನೆಯ ಭಾಗ ಅನುಭವಿಸುತ್ತಿರುವೆ. ಆದುದರಿಂದ ಮೊದಲೇ ವಿಷ್ಣು ವಿನಿಂದ ಈ ಪದವಿಯಲ್ಲಿ ನಿಯ ಮಿತನಾಗಿ ಇದನ್ನು ಅನುಭವಿಸುತ್ತಿದ್ದ ಇಂದ್ರನು ತಪಸ್ಸಿಗೆ ಹೋದ ಮೇಲೆ ಆತ ನಿಗೆ ಗುರುವಾದ ನಾನೂ ತಪಸ್ಸಿಗೆ ಹೋಗತಕ್ಕುದು ಯುಕ್ತವಾಗಿಯ ನಿರ್ವಿವಾದ ವಾಗಿಯೂ ಇದೆ. ಅದು ಕಾರಣ ಪರಮ ವಿವೇಕಿಯಾದ ನೀನು ಈ ಭಾಗದಲ್ಲಿ ಸ್ವಲ್ಪವಾ ದರೂ ಚಿಂತಿಸದೆ ನನಗೆ ಅನುಜ್ಞೆ ಮಾಡಬೇಕೆಂದು ಹೇಳಿ ವಿವಿಧವಾದ ನೀತಿಗಳಿಂದ ಒಡಂಬಡಿಸಿ ಆತನಿಂದ ಅಪ್ಪಣೆಯನ್ನು ಹೊಂದಿ ಅಲ್ಲಿಂದ ಹೊರಟು ಶೀಘ್ರವಾಗಿ ಕಶ್ಯಪ ರ ಆಶ್ರಮಕ್ಕೆ ಬಂದು ಮೊದಲು ಅವರ ಸಹಧರ್ಮಿಣಿಯಾದ ಅದಿತಿದೇವಿಯನ್ನು ಕಂಡು ಆಕೆಯೊಡನೆ ಈ ಸಂಗತಿಗಳನ್ನೆಲ್ಲಾ ಆದ್ಯಂತವಾಗಿ ತಿಳಿಸಲು ; ಆಗ ಆಕೆಯು ಮಹಾ ದುಃಖಾಕ್ರಾಂತೆಯಾಗಿ ಬೃಹಸ್ಪತ್ವಾಚಾರ್ಯರನ್ನು ಕುರಿತು-ಎಲೈ ಬೃಹಸ್ಪತಿಯೇ, ನೀನು ನನ್ನ ಮಗನಾದ ಇಂದ್ರನಿಗೆ ಅಹೋರಾತ್ರಿಗಳಲ್ಲೂ ಹಿತಾಪೇಕ್ಷಿಯಾದ ಗುರು ವಾಗಿದ್ದು ಅವನು ತ್ರಿಲೋಕಾಧಿಪತ್ಯವನ್ನು ಕಳೆದು ಕೊಂಡು ಹೀಗೆ ಮಹಾಕಪ್ಪ ವ್ಯಥೆ ಗಳನ್ನನುಭವಿಸುತ್ತ ಇರುವುದು ನಿನಗೆ ಸಮ್ಮತವೇ ? ಮತ್ತು ಮಾನವೇ ? ಮುಂದೆ ಈ ವಿಷಯದಲ್ಲಿ ಯಾವ ಯೋಚನೆಯನ್ನು ಮಾಡಬೇಕು ? ನೀನು ಯೋಚಿಸಿ ನನಗೆ ಹೇಳಿದರೆ ನಾನು ಅದೇ ಮೇರೆಗೆ ನಡೆಯುವೆನು, ಪುತ್ರಶ್ರೇಯಶ್ಚಿ೦ತನೆಗಿಂತಲೂ ನನಗೆ ಬೇರೆ ಕಾರ್ಯವಾವುದಿರುವುದು ? ಎಂದು ಹೇಳಲು ; ಆಗ ಬೃಹಸ್ಪತಾಚಾರ್ಯರು ಯೋಚಿಸಿ ಮುಂದೆ ಮಾಡಬೇಕಾದ ಕಾರ್ಯದ ವಿಷಯವಾಗಿ ಆಕೆಯ ಕಿವಿಯಲ್ಲಿ ಹೇಳಿ--ಇಂದ್ರ ಶಚಿ ಜಯಂತ ಇವರೊಡನೆ ಕೂಡಿ ನಾನು ನಿಮ್ಮ ಆಶ್ರಮದಲ್ಲಿ ಇಂಥ ಕಡೆ ಇರುವೆನೆಂದು ಸೂಚಿಸಿ ಆಕೆಯ ಅಪ್ಪಣೆಯನ್ನು ತೆಗೆದು ಕೊಂಡು ಆ ಸ್ಥಳದಿಂದ ಹೊರಟು ಇಂದ್ರನ ಬಳಿಗೆ ಬಂದು ಆತನಿಗೆ ವೈಷ್ಣವಮಂತ್ರವನ್ನು ಉಪದೇ ಶಿಸಿ ಸರ್ವಕಾಲದಲ್ಲೂ ಸದ್ಭಕ್ತಿಯಿಂದ ಕೂಡಿ ವಿಷ್ಣು ವನ್ನು ಭಜಿಸುತ್ತಿರುವಂತೆ ನೇಮಿಸಿ ತಾನೂ ವಿಷ್ಣು ಧ್ಯಾನಪರಾಯಣನಾಗಿರುತ್ತಿದ್ದನು. ಇತ್ತಲಾ ಅದಿತಿದೇವಿಯು ಮಹಾವ್ಯಥಾದುಃಖಾಕ್ರಾಂತಳಾಗಿ ಆ ಸ್ಥಳದಿಂದ ಹೊರಟು ಪ್ರಾತರಾನ್ತಿಕಗಳನ್ನು ನೆರವೇರಿಸಿಕೊಂಡು ಸುಖಾಸೀನನಾಗಿರುವ ನಿಜಪತಿ ಯಾದ ಕಶ್ಯಪ ಪ್ರಜಾಪತಿಯ ಬಳಿಗೆ ಶೀಘ್ರದಿಂದ ಬಂದು ರೋದಿಸುತ್ತ ಅವನ ಪಾದಗಳ ಮೇಲೆ ಬಿದ್ದು ಧಾರಾಕಾರವಾಗಿ ಹರಿಯುತ್ತಿರುವ ತನ್ನ ಕಣ್ಣೀರುಗಳಿಂದ ಅವನ ಅಡಿದಾವರೆಗಳನ್ನು ತೊಳೆದು ಹಾಗೇ ದುಃಖಿಸುತ್ತಿರಲು ; ಅದನ್ನು ನೋಡಿ ಕಶ್ಯಪರು ದಯಾದ್ರ್ರಹೃದಯರಾಗಿ-ಎಲೈ ಪ್ರಾಣವಲ್ಲಭೆಯೇ, ನಿನಗೆ ಈ ಪ್ರಕಾ ರವಾದ ಅಪಾರದುಃಖವು ಸಂಭವಿಸುವುದಕ್ಕೆ ಕಾರಣವೇನು ? ಹೇಳು, ನಾನು ಅದನ್ನು ಹೇಗಾದರೂ ಪರಿಹರಿಸಿಕೊಡುವೆನು ಎಂದು ಹೇಳಲು ; ಆಗ ಅದಿತಿದೇವಿ ಯು ಎದ್ದು ಕೈಮುಗಿದು ನಿಂತುಕೊಂಡು--ಎಲೈ ಮಹಾತ್ಮ ನಾದ ಪ್ರಾಣಪ್ರಿಯನೇ, ಆಪದ್ರಕ್ಷಕನೇ, ಶರಣಾಗತಳಾದ ನನಗೆ ನಿನ್ನ ಚರಣಕಮಲಗಳೇ ಗತಿಯಲ್ಲದೆ ಅನ್ಯಥಾ ಗತಿಯಿಲ್ಲವು. ಈಗ ನನ್ನ ಮಗನ ಇಂದ್ರ ಪದವಿಯನ್ನು ಬಲಿಯೆಂಬ ದೈತ್ಯ ನು ಬಲಾತ್ಕಾರದಿಂದ ಕಿತ್ತು ಕೊಂಡುದರಿಂದ ಅವನು ನನ್ನ ಸೊಸೆಯಾದ ಶಚಿಯನ್ನೂ