ಪುಟ:ಕಥಾ ಸಂಗ್ರಹ - ಭಾಗ ೨.djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಮನಾವತಾರದ ಕಥೆ 251 ನನ್ನ ಮೊಮ್ಮಗನಾದ ಜಯಂತನನ್ನೂ ಕೈಹಿಡಿದು ಕರೆದುಕೊಂಡು ಮಹಾದುಃಖ ವ್ಯಥೆಗಳಿಂದ ಕೂಡಿದವನಾಗಿ ಅಪಾರವಾದ ಕಷ್ಟವನ್ನನುಭವಿಸುತ್ತ ಅನಾಥನ ಹಾಗೆ ಸ್ವರ್ಗವನ್ನು ಬಿಟ್ಟು ಹೊರಟು ಎಲ್ಲೋ ಹೋದನು. ಮಹಾವಿಷ್ಣುವಿನಿಂದ ನಿಯ ಮಿತವಾದ ನಿನ್ನ ಮಗನ ಇಂದ್ರ ಪದವಿಯು ಅನ್ಯಾಕ್ರಾಂತವಾದ ಮೇಲೆ ಈ ಜಗ ತಿನಲ್ಲಿ ಇನ್ನಾವುದು ತಾನೆ ನೆಲೆಯಾಗಿ ನಿಲ್ಲುವುದೆಂದು ನಂಬಬಹುದು ? ನೀನು ಸರ್ವ ಜನು, ನೀನು ತಿಳಿಯದೆ ಇರುವದು ಮೂರು ಲೋಕಗಳಲ್ಲಿ ಯಾವುದುಂಟು ? ಎಂದು ಹೇಳಿ ತಿರಿಗಿ ಗಂಡನ ಕಾಲುಗಳ ಮೇಲೆ ಬಿದ್ದು ದುಃಖಿಸುತ್ತ ಹೊರಳುತ್ತಿ ರಲು ; ಆಗ ಕಶ್ಯಪನು--ಎಲೈ ಪ್ರಾಣಪ್ರಿಯೆಯಾದ ಅದಿತಿಯೇ, ನೀನು ಇದಕ್ಕಾಗಿ ಭಯಪಡಬೇಡ, ನಿನ್ನ ಮಗನಿಗೆ ಇಂದ್ರ ಪದವಿಯು ಯಥಾಪ್ರಕಾರವಾಗಿ ಉಂಟಾ ಗುವಂತೆ ಮಾಡುವೆನು ಎಂದು ಹೇಳಿ ಆಕೆಗೆ ಅಭಯವನ್ನು ಕೊಟ್ಟು ಆಕೆಯನ್ನೂ ಜೊತೆಯಲ್ಲಿ ಕರೆದು ಕೊಂಡು ಅಲ್ಲಿಂದ ಹೊರಟು ಸಿದ್ಧಾಶ್ರಮವೆಂಬ ಒಂದು ಪುಣ್ಯಾ ಶ್ರಮಕ್ಕೆ ಬಂದು ಅಲ್ಲಿ ತಾನು ಶುಚಿರ್ಭೂತನಾಗಿ ಮಹಾವಿಷ್ಟು ವನ್ನು ಕುರಿತು ಅನೇಕ ಸಹಸ್ರ ಸಂವತ್ಸರಗಳ ವರೆಗೂ ಏಕಾಗ್ರಚಿತ್ತದಿಂದ ಕೂಡಿ ತಪಸ್ಸನ್ನು ಮಾಡುತ್ತ ಇದ್ದನು. ಆ ಕಾಲದಲ್ಲಿ ಅದಿತಿದೇವಿಯು ಶುಚಿರ್ಭೂತಳಾಗಿ ನಿರಂತರದಲ್ಲೂ ಪ್ರತಿಶು ಕ್ರೂಷೆಯನ್ನು ಮಾಡಿಕೊಂಡಿರುತ್ತಿದ್ದಳು. ಹೀಗಿರುತ್ತಿರಲು ಕ್ಷೀರಸಮುದ್ರದಲ್ಲಿ ಶೇಷಶಾಯಿಯಾದ ಮಹಾವಿಷ್ಣುವು ತನ್ನ ಪ್ರಾಣಪ್ರಿಯೆಯಾದ ಲಕ್ಷ್ಮಿ ದೇವಿಯನ್ನು ಕುರಿತು-ಎಲೈ ದೇವಿಯೇ, ನನಗೆ ಪರಮಭಕ್ತನಾದ ಬಲೀಂದ್ರನು ನನ್ನಿಂದ ಶಚೀಪತಿಗೆ ನಿಯಮಿತವಾದ ಸ್ವರ್ಗಾಧಿಪತ್ಯವ ನ್ನು ಕಿತ್ತು ಕೊಂಡು ಆತನನ್ನು ಸ್ವರ್ಗಲೋಕದಿಂದ ಓಡಿಸಿದ್ದಾನೆ. ಅದು ಕಾರಣ ಆ ಇಂದ್ರನ ತಂದೆಯಾದ ಕಶ್ಯಪನು ತಿರಿಗಿ ಬಲಿಯಿಂದ ಸ್ವರ್ಗಾಧಿಪತ್ಯವನ್ನು ಕಿತ್ತು ಕೊಂಡು ತನ್ನ ಮಗನಿಗೆ ಕೊಡಿಸುವದಕ್ಕೋಸ್ಕರ ನನ್ನನ್ನು ಕುರಿತು ಮಹಾ ನಿಯಮದಿಂದ ಉಗ್ರ ತಪಸ್ಸನ್ನು ಮಾಡುತ್ತಿದ್ದಾನೆ. ಈಗ ಇಂಥ ಅನಿವಾರ್ಯ ಕಾರ್ಯವು ಸಂಘಟಿಸಿದೆ. ಇದಕ್ಕೆ ಏನುಪಾಯವನ್ನು ಮಾಡಬೇಕು ಎಂದು ಕೇಳಲು ; ಆಗ ಮಹಾಲಕ್ಷ್ಮಿಯು ಸ್ವಲ್ಪ ಯೋಚಿಸಿ-ಎಲೈ ಪ್ರಾಣವಲ್ಲಭನೇ, ನೀನು ಮಹಾ ಮಾಯಾವಂತನು ! ಏನೂ ಅರಿಯದವನ ಹಾಗೆ ಈ ರೀತಿಯಾಗಿ ನನ್ನನ್ನು ಕೇಳುತ್ತಿರುವಿ ! ಸರ್ವಜ್ಞನಾದ ನೀನರಿ ಯದಿರುವ ತಂತ್ರೋಪಾಯಗಳನ್ನು ಯಾರಾದರೂ ಬಲ್ಲರೇ ? ಸರ್ವಶಕ್ತನಾದ ನೀನು ನೆಂಟು ರತ್ನ ಇವೆರಡೂ ಉಳಿಯುವ ಹಾಗೆ ಮಾಡಿ ನಿನ್ನ ಅಪ್ರತಿಹತವಾದ ಆಜ್ಞೆಗೆ ಭಂಗ ವುಂಟಾಗದಂತೆ ನಡೆ ಎಂದು ಹೇಳಿದಳು. ಮಹಾವಿಷ್ಣುವು ಆ ಮಾತುಗಳನ್ನು ಕೇಳಿ ಮಂದಸ್ಮಿತ ಮನೋಹರವದನನಾಗಿ ಕೂಡಲೆ ಗರುಡಾರೂಢನಾಗಿ ಹೊರಟು ಕಶ್ಯಪ ಮುನಿಯ ಬಳಿಗೆ ಬಂದು--ಎಲೈ ಮಹಾತ್ಮನಾದ ಮುನಿಯೇ, ಏಕೆ ನನ್ನನ್ನು ಕುರಿತು ತಪಸ್ಸು ಮಾಡುತ್ತಿರುವಿ ? ನನ್ನಿಂದ ನಿನಗೆ ಆಗಬೇಕಾದ ಕಾರ್ಯವಾವುದು ? ಅದನ್ನು ಬೇಗ ಹೇಳು. ಸಂತೋಷದಿಂದ ನಡಿಸಿಕೊಡುವೆನು ಎಂದು ಹೇಳಿದನು. “ಆ ಮಾತುಗಳನ್ನು ಕೇಳಿ ಕಶ್ಯಪಮುನಿಯು ಸಂತೋಷಯುಕ್ತನಾಗಿ ಮಹಾ ವಿಷ್ಣುವಿಗೆ ದೀರ್ಘದಂಡನಮಸ್ಕಾರವನ್ನು ಮಾಡಿ ಎದ್ದು ನಿಂತು-ಮಹಾತ್ಮನಾದ