ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

258 ಕಥಾಸಂಗ್ರಹ-೫ ನೆಯ ಭಾಗ ತೆಗೆದುಕೋ ಎಂದು ಹೇಳಲು ; ಆಗ ತಾಯಿಯು ಪುತ್ರಿಯ ಮೇಲಣ ವ್ಯಾಮೋಹ ದಿಂದ ಹಾಗೇ ಆಗಲಿ ಎಂದು ಹೇಳಿ ಆ ಪಾತ್ರೆಯನ್ನು ಅವಳಿಗೆ ಕೊಟ್ಟು ಬಿಟ್ಟಳು. ಆ ಮೇಲೆ ಇಬ್ಬರೂ ಆ ಉದಕವನ್ನು ಕುಡಿದರು. ಅನಂತರದಲ್ಲಿ ಆ ಮುನಿಪತಿಯ ಮಂತ್ರೋದಕಪ್ರಭಾವದಿಂದ ಅವರಿಬ್ಬರೂ ದಿವ್ಯತೇಜಃಪುಂಜರಂಜಿತರಾದ ಗಂಡುಮ ಕಳುಗಳನ್ನು ಹೆತ್ತರು. ಈ ವರ್ತಮಾನವನ್ನು ಕೇಳಿದ ಜಮದಗ್ನಿ ಮುನಿಯು ಪರಮ ಸಂತೋಷಯುಕ್ತನಾಗಿ ಜಾತಕರ್ಮವನ್ನು ನೆರವೇರಿಸಿ ಹನ್ನೆರಡನೆಯ ದಿವಸದಲ್ಲಿ ತನ್ನ ಮೊಮ್ಮಗನೂ ಕ್ಷತ್ರಿಯೋತ್ತಮನೂ ಆದ ಗಾಧಿರಾಜನ ಕುಮಾರನಿಗೆ ವಿಶ್ವಾಮಿತ್ರ ನೆಂದೂ ತನ್ನ ಧರ್ಮಪತ್ನಿ ಯ ಗರ್ಭದಲ್ಲಿ ಭೂಭಾರನಿವಾರಣಾರ್ಥವಾಗಿ ಮಹಾವಿಷ್ಣು ವಿನ ಅಂಶದಿಂದ ಅವತರಿಸಿದ ಮಗನಿಗೆ ರಾಮನೆಂದೂ ನಾಮಕರಣವನ್ನು ಮಾಡಿದನು. ಅನಂತರದಲ್ಲಿ ಗಾಧಿರಾಜನು ಪುತೋತ್ಸವವಾದ ವರ್ತಮಾನವನ್ನು ಕೇಳಿ ಅಮ೦ದಾನಂದಭರಿತಾ೦ತರಂಗನಾಗಿ ಕೂಡಲೆ ಮಾವನ ಮನೆಗೆ ಬಂದು ಅತ್ತೆಮಾ ವಂದಿರಿಗೆ ನಮಸ್ಕರಿಸಿ ಕೆಲವು ದಿನಗಳ ವರೆಗೂ ಸಂತೋಷದಿಂದಿದ್ದು ಆ ಮೇಲೆ ತನ್ನ ಹೆಂಡತಿಯನ್ನೂ ಮಗನನ್ನೂ ತನ್ನ ಪಟ್ಟಣಕ್ಕೆ ಕರೆದು ಕೊಂಡು ಹೋಗಿ ಸಕಲವಿದ್ಯಾ ಪಾರಂಗತನಾಗಿ ಯೌವನವಂತನಾದ ಮಗನಿಗೆ ಪಟ್ಟಾಭಿಷೇಕವನ್ನು ಮಾಡಿ ತಾನು ಧರ್ಮಸಂಪಾದನಾರ್ಥವಾಗಿ ಮುನಿವನವನ್ನು ಕುರಿತು ತಪಸ್ಸಿಗೆ ಹೊರಟುಹೋದನು. ಆ ಮೇಲೆ ವಿಶ್ವಾಮಿತ್ರ ರಾಜನು ಅನೇಕ ಸಹಸ್ರ ಸಂವತ್ಸರಗಳ ವರೆಗೂ ಧರ್ಮದಿಂದ ರಾಜ್ಯಭಾರವನ್ನು ಮಾಡಿ ಮುನಿಮಂತ್ರೋದಕ ಮಹಿಮೆಯಿಂದ ತಾನು ಬ್ರಾಹ್ಮಣ ನಾಗಬೇಕೆಂಬ ಬುದ್ದಿ ಹುಟ್ಟಿದುದರಿಂದ ಪ್ರಬುದ್ಧನಾದ ತನ್ನ ಮಗನಿಗೆ ಪಟ್ಟಾಭಿಷೇ ಕವನ್ನು ಮಾಡಿ ಸಕಾ ರಾಜನೀತಿಗಳನ್ನೂ ಬೋಧಿಸಿ ತಪೋವನಕ್ಕೆ ಹೋಗಿ ಚಿತ್ರೆ ಕಾಗ್ರತೆಯನ್ನು ಹೊಂದಿ ಅನೇಕ ಸಂವತ್ಸರಗಳ ವರೆಗೂ ತಪಸ್ಸನ್ನು ಮಾಡಿ ಬ್ರಹ್ಮದೇವ ನನ್ನು ಮೆಚ್ಚಿಸಿ ಬ್ರಹ್ಮರ್ಷಿತ್ವವನ್ನು ಪಡೆದು ಜಗದ್ವಿಖ್ಯಾತನಾದನು. ಇತ್ತಲಾ ಜಮದಗ್ನಿ ಯ ಮಗನಾದ ರಾಮನು ಬ್ರಹ್ಮ ಕ್ಷೇತ್ರದಲ್ಲಿ ಹುಟ್ಟಿದವ ನಾದಾಗ ಕ್ಷತ್ರಿಯ ಮಂತ್ರೋದಕ ಪ್ರಭಾವದಿಂದ ತಾನು ಜಗದೇಕವೀರನೆನ್ನಿಸಿ ಕೊಳ್ಳಬೇಕೆಂಬ ಬುದ್ದಿ ಹುಟ್ಟಿದುದರಿಂದ ಕೈಲಾಸಪರ್ವತಕ್ಕೆ ಹೋಗಿ ಘೋರವಾದ ತಪಸ್ಸನ್ನು ಮಾಡಿ ಪರಮೇಶ್ವರನನ್ನು ಮೆಚ್ಚಿಸಿ ಆತನಿಂದ ಸಕಲ ಧನುರ್ವೇದಗಳನ್ನೂ ಕಲಿತು ಸಕಲವಿಧ ಮಂತ್ರಾಸ್ತ್ರಗಳ ಪ್ರಯೋಗೋಪಸಂಹಾರಕ್ರಮಗಳನ್ನೂ ತಿಳಿದು ಆತನ ಸೇವೆಯನ್ನು ಮಾಡುತ್ತ ಕೆಲವು ದಿನಗಳ ವರೆಗೂ ಅಲ್ಲೇ ಇದ್ದು ಕೊಂಡಿರಲು; ಪರಮೇಶ್ವರನು ಶಿಷ್ಯನಾದ ರಾಮನ ಸುಗುಣಗಳಿಗೆ ಬಹಳವಾಗಿ ಸಂತೋಷಿಸಿ ಇವನ ಸಾಮರ್ಥ್ಯವನ್ನು ಪ್ರತ್ಯಕ್ಷವಾಗಿ ನೋಡಬೇಕೆಂದು ಯೋಚಿಸಿ ಒಂದು ದಿವಸ ಮಹಾ ಶರಾಗ್ರೇಸರನಾದ ತನ್ನ ಮಗನಾದ ಷಣ್ಮುಖನನ್ನೂ ಮಹಾವೀರಾಗ್ರಗಣ್ಯನಾಗಿ ತನ್ನ ಶಿಷ್ಯನಾದ ರಾಮನನ್ನೂ ಸವಿಾಪಕ್ಕೆ ಕರೆದು--ಎಲೈ ಶೂರರೇ, ನೀವಿಬ್ಬರೂ ಯುದ್ದ ವನ್ನು ಮಾಡಿ ನಿಮ್ಮಿಬ್ಬರ ಶಕ್ತಿಯ ಹೆಚ್ಚು ಕುಂದುಗಳನ್ನು ನನಗೂ ಪಾರ್ವ ತಿಗೂ ತೋರಿಸಬೇಕೆಂದು ಹೇಳಲು ; ಆಗ ಆ ಮಹಾವೀರರಿಬ್ಬರೂ ಸ್ವಾಮಿಯ