20 ಕಥಾಸಂಗ್ರಹ-೪ ನೆಯ ಭಾಗ ಒಬ್ಬರಿಗೂ ಜಯ ಪರಾಜಯ ಗಳುಂಟಾಗದಿರಲು ; ಆಗ ಪ್ರತ್ಯಕ್ಷನಾಗಿ ಬಂದ ಸರಸ್ಯ ತೀಪತಿಯ ಅಪ್ಪಣೆಯಿಂದ ಉಭಯ ಪಕ್ಷದ ವೀರರೂ ಕೂಡಿ ಅಗ್ನಿಸಾಕ್ಷಿಯಾಗಿ ಸ್ನೇಹವನ್ನು ಮಾಡಿಕೊಂಡರು. ಅನಂತರದಲ್ಲಿ ರಾವಣನು ಅಲ್ಲಿಂದ ಹೊರಟು ಅಶ್ಫುರವೆಂಬ ನಗರಕ್ಕೆ ಬಂದು ಅಲ್ಲಿರುವ ಕಾಲಕೇಯರೆಂಬ ದೈತ್ಯನಾಯಕರೊಡನೆ ಬಡಿದಾಟಕ್ಕೆರಗಿ ಕಡೆಗೆ ಅನೇಕ ದೈತ್ಯರೊಡನೆ ಶೂರ್ಪನಖಿಯ ಗಂಡನಾದ ವಿದ್ಯುಚ್ಛೆಹನನ್ನೂ ಕೊಂದು ಆ ನಗರವ ನೈಲ್ಯಾ ಸೂರೆಗೊಯ್ದು ಅಲ್ಲಿಂದ ಹೊರಟು ವರುಣನ ನಗರಾಭಿಮುಖನಾಗಿ ಬಂದು ಯುದ್ಧರಂಗದಲ್ಲಿ ಅವನ ಮಕ್ಕಳನ್ನು ಮೈಮರೆವಂತೆ ಬಡಿದೊರಗಿಸಿದನು, ಆ ಮೇಲೆ ವರುಣನ ಬೊಕ್ಕಸಕ್ಕೆ ನುಗ್ಗಿ ಅಲ್ಲಿದ್ದ ಅನರ್ಘರತ್ನ ಗಳನ್ನು ಅಪಹರಿಸಿಕೊಂಡು ನಾಗ ದೇವ ದೈತ್ಯಾದಿ ಜಾತೀಯರಾದ ಯೌವನಸ್ತ್ರೀಯರನೇಕರನ್ನು ಬಲಾತ್ಕಾರದಿಂದ ಎಳೆದು ಕೊಂಡು ವಿಮಾನಾರೂಢನಾಗಿ ಜಯಭೇರಿಗಳನ್ನು ಹೊಡಿಸುತ್ತ ತಿರಿಗಿ ಲಂಕಾಪಟ್ಟಣಕ್ಕೆ ಬರಲು ; ಆಗ ನಗರನಾರೀಜನವು ಸಂಭ್ರಮದಿಂದ ನಲಿಯುತ್ತ ಚಿನ್ನದ ಹರಿವಾಣಗಳಲ್ಲಿ ಸೊಡರುಗಳನ್ನು ಹೊತ್ತಿಸಿಟ್ಟು ಕೊಂಡು ನವರತ್ನದ ಆರತಿ ಗಳನ್ನು ತಂದು ರಾವಣನಿಗೆ ನಿವಾಳಿಸಿದರು, ಆಗ ರಾವಣನು ಪರಿವಾರಪರಿವೃತನಾಗಿ ಓಲಗದ ಚಾವಡಿಯಲ್ಲಿ ಕುಳಿತು ಕೊಂಡು ವಿಭೀಷಣ ಮಾಲ್ಯವಂತಾದಿ ರಾಕ್ಷಸ ಪ್ರಮುಖರ ಯೋಗಕ್ಷೇಮಗಳನ್ನು ವಿಚಾರಿಸಿ ತಾನು ಮಾಡಿದ ದಿಗ್ವಿಜಯ ವಿಷಯ ಕವಾದ ವೃತ್ತಾಂತವನ್ನು ಅವರೆಲ್ಲರಿಗೂ ತಿಳಿಸಿ ಅಂತಃಪುರಕ್ಕೆ ಬಂದು ಪಟ್ಟಿ ಮಹಿ ಪಿಯಾದ ಮಂಡೋದರಿಯನ್ನು ಕಂಡು ಸಂತೋಪಿಸಿ ಆಕೆಯೊಡನೆ ಸುಖವಾಗಿದ್ದು ಕೊಂಡು ರಾಜ್ಯಭಾರ ಮಾಡುತ್ತಿದ್ದನು. ಹೀಗಿರಲು ಒಂದಾನೊಂದು ದಿನ ಶೂರ್ಪನಖಿಯು ಅಣ್ಣನಾದ ರಾವಣನ ಬಳಿಗೆ ಬಂದು--ಎಲೈ ಅಣ್ಣನೇ, ನನಗೆ ಓಲೆಗಳೂ ಮಾಂಗಲ್ಯಸೂತ್ರವೂ ಇರಬಾರದು. ಇವಳು ಯಾವಾಗಲೂ ಮುಂಡೆಯಾಗಿ ಅಮಂಗಲೆಯೆನ್ನಿಸಿಕೊಂಡಿರಲೆಂದು ನನ್ನ ಗಂಡನನ್ನು ಕೊಂದೆಯಾ ? ಗಂಡಸಿಲ್ಲದವಳ ಬಾಳು ಬಂಡಬಾಳಲ್ಲವೇ ? ಈಗಲೇ ನನ್ನನ್ನೂ ಕೊಂದು ಸತಿಯಾದ ವಿದ್ಯು ಜೈನ ಬಳಿಗೆ ಕಳುಹಿಸೆಂದು ಆತನ ಕಾಲು ಗಳ ಮೇಲೆ ಬಿದ್ದು ದುಃಖಿಸುತ್ತ ಮೊರೆಯಿಡುತ್ತಿರಲು ; ಆಗ ರಾವಣನು ಮನಸ್ಸಿ ನಲ್ಲಿ ಬಹುವಾಗಿ ವ್ಯಸನಪಡುತ್ತ ತಂಗಿಯನ್ನು ಹಿಡಿದೆತ್ತಿ ರಣರಂಗದಲ್ಲಿ ಕಾಲ ಕೇಯರನ್ನು ಕೊಲ್ಲುವ ಸಮಯದಲ್ಲಿ ಕ್ರೋಧದಿಂದ ಮದಿಸಿ ಮೈಮರೆತಿದ್ದೆ ನಾದು ದರಿಂದ ಕಾಣದೆ ನಿನ್ನ ಗಂಡನನ್ನೂ ಕೊಂದುಬಿಟ್ಟೆನು, ಕೈಮಿಾರಿ ಹೋದ ಕಾರ್ಯ ಕ್ಯಾಗಿ ಚಿಂತಿಸುವುದರಿಂದ ಪ್ರಯೋಜನವಿಲ್ಲವು. “ನನ್ನ ಸಕಲೈಶ್ವರ್ಯವೂ ನಿನ್ನ ವಶ ವಾಗಿರುವುದು, ನೀನು ಯಾವುದಕ್ಕೂ ಚಿಂತಿಸಬೇಡೆಂದು ಸಮಾಧಾನಪಡಿಸಿ ಖರ ದೂಷಣಾದಿ ರಾಕ್ಷಸರನ್ನು ಕರಿಸಿ--ನೀವು ಹದಿನಾಲ್ಕು ಸಾವಿರ ಮಂದಿ ರಕ್ಕಸರನ್ನು ಕರೆದುಕೊಂಡು ಈ ಶೂರ್ಪನಖಿ ಸಮೇತರಾಗಿ ಹೋಗಿ ದಂಡಕವನದಲ್ಲಿರುವ ಜನ ಜ್ಞಾನವೆಂದು ಹೆಸರುಳ್ಳ ಈ ಲಂಕಾನಗರದ ಉಕ್ಕಡದಲ್ಲಿರತಕ್ಕುದೆಂದು ಅಪ್ಪಣೆಯನ್ನು
ಪುಟ:ಕಥಾ ಸಂಗ್ರಹ - ಭಾಗ ೨.djvu/೩೦
ಗೋಚರ