290 ಕಥಾಸಂಗ್ರಹ-೬ ನೆಯ ಭಾಗ ಸಾವಿಗಂಜದವನು ನೋವಿಗೆ ಹೆದರಾನೇ ? ಸಾವಿರ ಕುದುರೇ ಸರದಾರನಾದರೂ ಮನೇ ಹೆಂಡತೀ ಕಾಸ್ಕಾರ. ಸಾವಿರ ತನಕಾ ಸಾಲ, ಆ ಮೇಲೆ ಲೋಲ. ಸಾವಿರ ವರಹಾ ತೂಕ ಚಿನ್ನಕ್ಕೆ ಹಾಗ ತೂಕ ಮಚ್ಚು. ಸಾವಿರ ಬೆಕ್ಕು ಕಡಿದರೆ ಒಂದು ಹುಲಿಯಾದೀತೇ ? ಸಾವಿರ ಬಾರಿ ಗೋವಿಂದಾ ಎನ್ನ ಬಹುದು; ಒಬ್ಬ ದಾಸ್ಯೆಯಗೆ ಇತ್ತೋದು ಕಷ್ಟ. ಸೀತರೆ ಬೀಳುವ ಮಗು ಕೊಯಿದರೆ ನಿಂತೀತೇ ? ಸಿಟ್ಟಿಗೆ ಕೊಯಿದ ಮಗು ಶಾಂತತ್ವದಿಂದ ಹತ್ತೀತೇ ? ಸೀಸದ ಉಳಿಯಲ್ಲಿ ಶೈಲಾ ಒಡೆಯ ಬಹುದೇ ? ಸುಂಕದವನ ಸಂಗಡ ಸುಖದುಃಖ ಹೇಳಿದರೆ ಕಂಕುಳಲ್ಲಿ ಏನು ಅ೦ದ ? ಸುಂಕದವನು ಸುಳ್ಯ ಬಣಜಿಗ ಕಳ್ಳ. ಸುಡಗಾಡಿಗೆ ಹೋದ ಹೆಣ ತಿರಿಗಿ ಬಂದೀತೇ ? ಸುನ್ನೀ ಅ೦ದರೆ ತಿಳಿಯದೇ ? ಒನಿಕೇ ರಾಗ. ಸುಳ್ಳು ದೇವರಿಗೆ ಕಳ್ಳ ಪೂಜಾರಿ. ಸೂಜೆಗೆ ಸೂಜೆ ಮುತ್ತು ಕೊಟ್ಟ ಹಾಗೆ. ಸೂಜೆಯಷ್ಟು ಬಾಯಿ, ಗುಡಾಣದಷ್ಟು ಹೊಟ್ಟೆ. ಸೂಲು ತಪ್ಪಿದರೆ ಗೊತ್ತೇ. ಸೆಕೆ ಹೆಚ್ಚಾಯಿತೆಂದು ಕಂಬಳಿ ಹೊದ್ದು ಕೊಂಡ. ಸೆಟ್ಟಿ ಬಿಟ್ಟಲ್ಲೇ ಪಟ್ಟಣ. ಸೆಟ್ಟಿಯ ಬಾಳು ಸತ್ತಲ್ಲದೆ ತಿಳಿಯದು. ಸೆಟ್ಟಿ ಶೃಂಗಾರವಾಗುವಾಗ್ಗೆ ಪಟ್ಟಣವೆಲ್ಲಾ ಸೂರೆ ಹೋಯಿತು. ಸೆಟ್ಟಿ ಸವಾಸೇರು, ಲಿಂಗ ಅಡೀ ಸೇರು. ಸೇದಿದ ನೀರು ಹಾದೀಲಿ ಹಾಕ್ಯಾರೇ ? ಸೇರದ ಗಂಡನಿಗೆ ಮೊಸರಲ್ಲಿ ಕಲ್ಲು ಸಿಕ್ಕಿತು. ಸೇರು ರಾಜ, ಮಣವು ಭಂಟ. ಸ್ಥಿತಿಯಿಲ್ಲ ದಿದ್ದರೂ, ಗತಿ ಕೆಡಬಾರದು. ಸ್ಕರಣೆ ತಪ್ಪಿದರೂ ಸೈರಣೆ ಇರಬೇಕು ಸ್ವಪ್ನದಲ್ಲಿ ದಂಡಿಗೇ ಏರಿ ಗೊಂಡೇ ಹಿಡಿದ ಹಾಗೆ. ಮನೆಗೆ ಪಂಚಮಹಾಪಾತಕದ ಬಾಗಳು. ಹಂಗಳಾದ ಮೇಲೆ ಮಂಗನ ಹಾಗೆ ಮಾಡಬೇಕು. ಹಂಗು ಹರಿದ ಮೇಲೆ ತೊಂಗೇನು ? ತೊಡರೇನು ? ಹಂಚಿನಲ್ಲುಣ್ಣುವವರಿಗೆ ಹರಿವಾಣವೇಕೆ ? ಹಂದಿ ತೊಳೆದರೂ ಕೆಸರಿನಲ್ಲಿ ಹೊರಳೊದು ಬಿಡದು.
ಪುಟ:ಕಥಾ ಸಂಗ್ರಹ - ಭಾಗ ೨.djvu/೩೦೦
ಗೋಚರ