292 ಕಥಾಸಂಗ್ರಹ-೬ ನೆಯ ಭಾಗ
ಹಾಳು ತೋಟಕ್ಕೆ ನೀರು ಹಾಕಿ ಬೀಳು ರಟ್ಟಿ ಬಿದ್ದು ಹೋಯಿತು. ಹಿಗ್ಗಿದವ ಮುಗ್ತಾನು, ತಗ್ಗಿ ದವ ಜಯಿಸಾನು. ಹಿಡಿದದ್ದು ತಪ್ಪಿತು; ಮೆಟ್ಟಿದ್ದು ಮುರಿಯಿತು. ಹಿಡಿತುಂಬಾ ಹಣಕೊಟ್ಟರೂ ನುಡಿ ಚೆನ್ನಾಗಿರಬೇಕು. ಹಿಡಿಯುವದಕ್ಕೆ ಪಟ್ಟಿಲ್ಲ, ನಿಲ್ಲುವದಕ್ಕೆ ಕೊನೆಯಿಲ್ಲ. ಹಿರಿಯಕ್ಕನ ಚಾಳಿ ಮನೇ ಮಕ್ಕಳಿಗೆಲ್ಲಾ, ಹುತ್ತಾ ಬಡಿದರೆ ಹಾವು ಸಾಯುವದೇ ? ಹುಬ್ಬೆ ಮಳೇಲಿ ಬಿತ್ತಿದರೆ ಹುಲೂ ಇಲ ಕಾಳೂ ಇಲ , ಹುರುಳಿ ಸಾರಿಗೆ ಹೋಗಿ ಕುದುರೆ ಬೆಲೆ ಕೇಳಿದ ಹಾಗೆ. ಹುಲೀ ಬಣ್ಣಕ್ಕೆ ನರೀ ಮೈಸುಟ್ಟು ಕೊಂಡ ಹಾಗೆ, ಹುಲೀ ಮರೀ ಹುಲ್ಲು ಮೇದೀತೆ ? ಹುಲ್ಲೇ ಹಾರಿದ್ದಕ್ಕೂ ಹುಲಿ ಅಡಗಿದ್ದ ಕ್ಯೂ ಸರಿಬಂದೀತೇ ? ಹೂ ಮಾರಿದ ಊರಲ್ಲಿ ಹುರೀ ಮಾರಬಾರದು. ಹೂವಿನಿಂದ ನಾರು ಮಂಡೇ ಮೇಲೆ. ಹೆಗ್ಗಣ ಪರದೇಶಕ್ಕೆ ಹೋದರೆ ನೆಲಾ ಕೆರೆಯುವದು ಬಿಟ್ಟಿತೇ ? ಹೆಣ್ಣು ಚೆಲ್ವೆ, ಕಣ್ಣು ಮಾತ್ರ ಕಾಣುವದಿಲ್ಲ. ಹೆಯನೆ ಅರಿಯದವ ಮತ್ತೆ ಯನ ಬಲ್ಲನೇ ? ಹೆತ್ತವರಿಗೆ ಹೆಗ್ಗಣ ಮುದ್ದು. ಹೆಸರು ಮಾತ್ರ ಗಂಗಾಭವಾನಿ, ಕುಡಿಯುವದಕ್ಕೆ ನೀರಿಲ್ಲ. ಹೇಳಿಕೊಟ್ಟ ಬುದ್ದಿ ಕಟ್ಟಿ ಕೊಟ್ಟ ಬುತ್ತಿ ಎಲ್ಲಿ ತನಕಾ ಬರುವದು ? ಹೇಳುವವರು ಹೆಡ್ಡರಾದರೆ ಕೇಳುವವರಿಗೆ ಮತಿಯಿಲ್ಲವೇ ? ಹೊಟ್ಟು ಕುಟ್ಟಿ ಕೈಯೆಲ್ಲಾ ಗುಳ್ಳೆ | ಹೊರಗೆ ಹೋಗುವ ಮಾರಿ ನನ್ನ ಮನೆ ಹೊಕ್ಕು ಹೋಗು ಅ೦ದ ಹಾಗೆ. ಹೊಸ ವೈದ್ಯನಿಗಿಂತ ಹಳೇ ರೋಗಿ ವಾಸಿ. ಹೊಸ್ತಿಲ ಸಾರಿಸಿದ ಮಾತ್ರದಲ್ಲಿಯೇ ಹಬ್ಬವಾಯಿತೇ ? ಹೊಳೆ ದಾಟಿದ ಮೇಲೆ ಅಂಬಿಗನ ಮಿಂಡ. ಹೊಳೆಗೆ ನೆನೆಯದ ಕಲ್ಲು ಮಳೆಗೆ ನೆನೆದೀತೇ ? ಹೊಳೆ ನೀರಿಗೆ ದೊಣ್ಣಪ್ಪನಾಯಕನ ಅಪ್ಪಣೆಯೇ ? ಹೊಳೆ ಮಗಾವುದವಿರುವಾಗ ಕೆರಾ ಕಳಚುವರುಂಟೇ ? ಹೋಗದ ಊರಿಗೆ ದಾರಿ ಕೇಳಿದ ಹಾಗೆ. ಹೋದರೆ ಒಂದು ಕಲ್ಲು, ಬಿದ್ದರೆ ಒಂದು ಹಣ್ಣು. ಕ್ಷೌರದ ಕತ್ತಿ ಚಲೋದು ಯಾಕೆ ಅಳುತ್ತೀರಮ್ಮಾ ? ಕ್ಷೌರಕ್ಕೆ ಕೂತಲ್ಲಿ ಸೀನು ಬಂದ ಹಾಗೆ.