26 ಕಥಾಸಂಗ್ರಹ-೪ ನೆಯ ಭಾಗ ಸುತ್ತ ದೇವಬಲವನ್ನು ಪಲಾಯನಗೊಳಿಸುತ್ತಿರಲು ; ಅದನ್ನು ಕಂಡು ದೇವೇಂದ್ರನು ಐರಾವತವನ್ನು ಏರಿ ವಜ್ರಾಯುಧವನ್ನು ಧರಿಸಿ ಯುದ್ಧಕ್ಕೆ ಸಿದ್ಧನಾಗುತ್ತಿರಲು ; ಅಷ್ಟರಲ್ಲಿಯೇ ಅವನ ಕುಮಾರನಾದ ಜಯಂತನು ತಂದೆಯನ್ನು ಕುರಿತು ಅಲ್ಪ ನಾದ ಈ ರಾವಣಿಯ ಯುದ್ಧಕ್ಕೆ ನೀನೂ ಹೋಗಬೇಕೇ ? ನಾನು ಹೋಗಿ ಇವನನ್ನು ಕೊಲ್ಲುವೆನೆಂದು ಹೇಳಿ ತಂದೆಯನ್ನು ನಿಲ್ಲಿಸಿ ತಾನು ರಥಾರೂಢನಾಗಿ ಮೇಘನಾದನ ಸಮ್ಮುಖಕ್ಕೆ ತಂದು ನಿಂತು--ಎಲೈ ನೀಚನಿಶಾಚರನೇ, ನೀನೀವರೆಗೂ ದುರ್ಬಲರಾದ ದೇವತೆಗಳನ್ನು ಜಯಿಸಿದ ಮಾತ್ರಕ್ಕೆ ಮಹಾಶೂರನಾಗುವಿಯಾ? ಇದೋ ! ನಾನು ಬಂದಿದ್ದೇನೆ. ಹಿಂದೆಗೆಯದೆ ನಿಂತು ನನ್ನೊಡನೆ ಒಂದು ಗಳಿಗೆಯ ವರೆಗೂ ಯುದ್ಧ ಮಾಡಿದರೆ ನಿನ್ನನ್ನು ಕೊಂದು ನಿನ್ನ ಮಾಂಸಖಂಡಗಳನ್ನು ಹಂಚಿ ನಾಯಿ ನರಿ ಹದ್ದು ಕಾಗೆಗಳಿಗೆ ಕೊಡುವೆನು ಎಂದು ಹೇಳಲು ; ಮೇಘನಾದನು ಆ ಮಾತುಗಳನ್ನು ಕೇಳಿ ನಸುನಕ್ಕು-- ಎಲೈ ಜಯಂತನೇ, ಲೋಕದಲ್ಲಿ ಶೂರರಾದವರು ಯಾವ ಕಾರ್ಯ ವನ್ನಾದರೂ ಮಾಡಿ ತೋರಿಸುವರಲ್ಲದೆ ನಿನ್ನಂತೆ ಬಾಯಿಗೆ ಬಂದ ಹಾಗೆ ಹರಟುವುದಿ ಲ್ಲವೆಂದು ಹೇಳಿ ಕಾಳಸರ್ಪ ಸದೃಶಗಳಾದ ಹತ್ತು ಬಾಣಗಳಿಂದ ಆತನ ಎದೆಯು ಸೀಳಿಹೋಗುವಂತೆ ಹೊಡೆಯಲು ; ಪಾಕಶಾಸನಿಯು ಆ ಬಾಣಗಳನ್ನು ಮಧ್ಯಮಾ ರ್ಗದಲ್ಲಿಯೇ ಕಡಿದು ಕೆಡಹಿ ನೂರು ಬಾಣಗಳನ್ನು ಪ್ರಯೋಗಿಸಿ ರಾವಣಿಯ ರಥ ವನ್ನು ಕಡಿದುರುಳಿಸಿ ವಿರಥನನ್ನು ಮಾಡಿದನು. ಆಗ ಮೇಘನಾದನು ಕಾಲಾಗ್ನಿ ಯೋಪಾದಿಯಲ್ಲಿ ಜ್ವಲಿಸುತ್ತಿರುವ ನೇತ್ರಗಳುಳ್ಳವನಾಗಿ ಈಶ್ವರದತ್ತವಾದ ಶಕ್ತಾ ಯುಧವನ್ನು ತೆಗೆದು ಆತನ ಮೇಲೆ ಪ್ರಯೋಗಿಸಲು ; ಜಯಂತನು ಅದರ ಹೊಡೆತ ವನ್ನು ತಡೆಯಲಾರದೆ ಕೆಳಗೆ ಬಿದ್ದು ಒದೆದು ಕೊಳ್ಳುತ್ತ ಮರ್ಥೆಯನ್ನು ಹೊಂದಲು ; ಅವನ ಮಾತಾಮಹನಾದ ಪುಲೋಮನು ಶೀಘ್ರವಾಗಿ ಬಂದು ಆತನನ್ನೆತ್ತಿ ಕೊಂಡು ಹೋದನು. ಆಗ ಬಿಡುಗಣ್ಣರೊಡೆಯನು ರಣರಂಗದಲ್ಲಿ ತನ್ನ ಮಗನನ್ನು ಕಾಣದೆ ತಾನೇ ಯುದ್ಧಕ್ಕೆ ಬರಲು ; ರಾವಣನು ಅದನ್ನು ಕಂಡು ತನ್ನ ಮಗನನ್ನು ಹಿಂದೆ ನಿಲ್ಲಿಸಿ ಹತ್ತು ಕೈಗಳಿಂದಲೂ ಹತ್ತು ಬಿಲ್ಲುಗಳನ್ನು ತೆಗೆದುಕೊಂಡು ಉಳಿದ ಹತ್ತು ಕೈಗ ಳಿಂದ ಅವುಗಳಲ್ಲಿ ಬಾಣಸಂಧಾನವನ್ನು ಮಾಡಿ ಆಕರ್ಣಾ೦ತವಾಗಿ ಸೆಳೆದು ಬಿಡುತ್ತಿ ರಲು ; ದೆಸೆಗಳೇನಾದುವೋ ? ಬಾನೆಲ್ಲಡಿಗಿತೋ ? ಜಗಜ್ಜನಜಾಲವೇನಾಯಿತೋ ? ಗಿರಿ ತರು ಸಮುದ್ರಗಳೇನಾದುವೋ ? ಎಂದು ಜನರು ಭಯಕಂಪಿತರಾಗಿ ಹೇಳಿಕೊ ಳ್ಳುತ್ತಿರಲು ; ದೇವೇಂದ್ರನು ಆ ಬಾಣಗಳನ್ನೆಲ್ಲಾ ನುಚ್ಚುನೂರಾಗಿ ಇಕ್ಕಡಿಗೆಯೊಟ್ಟಿ ಪರಂಪರಾ ಯುಕ್ತವಾದ ಬಾಣಜಾಲದಲ್ಲಿ ತಲೆಯೆತ್ತದಂತೆ ರಾವಣನನ್ನು ಹೂಳಲು; ಆಗ ದಶಕಂಠನು ಇ೦ದ್ರನ ಬಾಣಗಳನ್ನೆಲ್ಲಾ ತುಂಡು ತುಂಡಾಗುವಂತೆ ಕಡಿದು ಭೂಮಿಗೆ ಬೀಳಿಸುತ್ತಿದ್ದನು. ಪುನಃ ದೇವೇಂದ್ರನು ಬಾಣಪ್ರಯೋಗವನ್ನು ಮಾಡಿ ರಾವಣನ ಸಾರಥಿಯನ್ನು ಕೊಂದು ರಥವನ್ನು ಕೊಚ್ಚಿ ಹತ್ತು ಕೈಗಳಲ್ಲಿದ್ದ ಬಿಲ್ಲು ಗಳನ್ನೂ ಖಂಡಿಸಿ ಕವಚವನ್ನು ಕತ್ತರಿಸಿ ಮೂದಲಿಸಿ ಸಿಂಹನಾದವನ್ನು ಮಾಡಲು ;
ಪುಟ:ಕಥಾ ಸಂಗ್ರಹ - ಭಾಗ ೨.djvu/೩೬
ಗೋಚರ