ಪುಟ:ಕಥಾ ಸಂಗ್ರಹ - ಭಾಗ ೨.djvu/೫೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಥಾಸಂಗ್ರಹ-೪ ನೆಯ ಭಾಗ ವಿದ್ಯಾಭ್ಯಾಸವನ್ನು ಮಾಡಿ ಯೌವನದಲ್ಲಿ ಧರ್ಮದಿಂದ ರಾಜ್ಯವನ್ನು ಪರಿಪಾಲಿಸಿ ಮುದಿತನದಲ್ಲಿ ಶೂರರಾದ ಮಕ್ಕಳಿಗೆ ರಾಜ್ಯಾಭಿಷೇಕವನ್ನು ಮಾಡಿ ಆ ಮೇಲೆ ನಮ್ಮ ಹಿರಿಯರೆಲ್ಲರೂ ಮಾಡಿದ ವನವಾಸಕ್ಕಾಗಿ ತರುಣನಾದ ರಾಮನನ್ನು ಮುದುಕನಾದ ನಾನು ಹೇಗೆ ಕಳುಹಿಸಬಹುದು ? ನನಗೆ ಹೊರಗಣ ಪ್ರಾಣವೇ ರಾಮನು, ಆತನು ವನವಾಸಕ್ಕೆ ಹೋದ ಕ್ಷಣದಲ್ಲೇ ನಾನು ಸತ್ತು ಹೋಗುವೆನು ಹೀಗೆ ರಾಮನನ್ನು ಕಾಡಿಗಟ್ಟಿ ನನ್ನನ್ನು ಕೊಂದು ನೀನು ವಿಧವೆಯಾಗಿ ಭರತನೊಡನೆ ಸುಖವಾಗಿ ಬಾಳುವೆನೆಂದು ಯೋಚಿಸಿರುತ್ತೀಯೆ. ಇದೋ, ಈಗ ನಿಜವಾಗಿ ಹೇಳುವೆನು, ಕೇಳು. ನೀನು ನನಗೆ ಹೆಂಡತಿಯೂ ಅಲ್ಲ, ನಾನು ನಿನಗೆ ಗಂಡನೂ ಅಲ್ಲ. ಈ ನಿನ್ನ ದಾರುಣವಾದ ನಿಷ್ಕರ್ಷೆಯು ಭರತನಿಗೆ ಸಮ್ಮತವಾಗಿದ್ದರೆ ಅವನು ನನಗೆ ಪುತ್ರನೂ ಅಲ್ಲ, ನಾನು ಅವನಿಗೆ ಪಿತೃವೂ ಅಲ್ಲ, ನೀನು ನನ್ನನ್ನು ಕೊಲ್ಲುವ ಮೃತ್ಯುವೆಂದರಿಯದೆ ಅಜ್ಞಾನ ದಿಂದ ಹೆಂಡತಿಯೆಂದು ತಿಳಿದು ಈ ವರೆಗೂ ನಿನ್ನೊಡನೆ ಕೂಡಿದ್ದೆನು. ಯೌವನ ವಂತನೂ ಪಿವತ್ಸಲನೂ ಗುಣಶಾಲಿಯ ನಿರಪರಾಧಿಯ ಆದ ಮಗನನ್ನು ನಿಪ್ಪಾ ರಣವಾಗಿ ಅಡವಿಗಟ್ಟುವ ನನ್ನಂಥ ಪಾಪಿಯಾದ ತಂದೆಯು ಯಾವ ಮಕ್ಕಳಿಗೂ ಉಂಟಾಗಬಾರದು, ಶ್ರೇಷ್ಠವಾದ ಕರಿತುರಗರಥಾದಿ ವಾಹನಗಳ ಮೇಲೇರಿ ಸಂಚರಿ ಸುತ್ತಿದ್ದ ಸುಕುಮಾರಾಂಗನಾದ ನನ್ನ ಕುಮಾರಸ ಸಿಂಹ ಶಾರ್ದೂಲ ಭಲ್ಲೂಕ ಸೂಕರಾದಿ ಕೂರಜಂತುಗಳಿಂದ ಕೂಡಿದ ಮಹಾರಣ ಮಧ್ಯದಲ್ಲಿ ಕಲ್ಲು ಮುಳು ಹಳ್ಳ ತಿಟ್ಟುಗಳಿಂದ ಅಪಾಯಕರವಾದ ಕದಧ್ಯದಲ್ಲಿ ಬರಿಗಾಗಳಿಂದ ಹೇಗೆ ಸಂಚ ರಿಸುವನು ? ದಿವ್ಯವಾದ ಭಕ್ಷ್ಯಭೋಜ್ಯಾದಿಗಳನ್ನು ಉಂಡು ಸುಖಿಸುತ್ತಿದ್ದ ನನ್ನ ಕಂದನು ಕಂದಮೂಲಾದಿಗಳನ್ನು ತಿಂದು ಹೇಗೆ ಜೀವಿಸುವನು ? ಅಮೂಲ್ಯವಾದ ಪೀತಾಂಬರವನ್ನು ಡುತ್ತಿದ್ದ ನನ್ನ ಕುಮಾರನು ಹೇಗೆ ನಾರಸೀರೆಯನ್ನು ಡುವನೋ ! ಅನರ್ಥ್ಯವಾದ ನವರತ್ನಾಭರಣಗಳನ್ನು ಧರಿಸಿಕೊಳ್ಳುತ್ತಿದ್ದ ಕೋಮಲಾಂಗನಾದ ಬಾಲನು ಆಲದಂಟಿನಿಂದ ಒರಟಾಗಿ ಮಲಿನವಾದ ಜಡೆಗಳನ್ನು ಧರಿಸುವುದು ಹೇಗೆ ? ರತ್ನ ಮಯವಾದ ಮಂಚದ ಮೇಲೆ ಮೃದುವಾದ ಹಂಸತೂಲಿಕಾತಲ್ಪದಲ್ಲಿ ಸುಖವಾಗಿ ನಿದ್ರಿಸುತ್ತಿದ್ದ ನನ್ನ ಮುದ್ದು ಮಗನು ಕಾಡಿನಲ್ಲಿ ಕಲ್ಲು ಗಳ ಮೇಲೂ ವ್ಯತ್ಯಸ್ತವಾದ ಭೂಮಿಯ ಮೇಲೂ ತರಗೆಲೆಗಳ ಹಾಸಿಗೆಯ ಮೇಲೂ ಹೇಗೆ ಮಲಗುವನು ? ಇಂಥ ಭಯಂಕರವಾದ ಮಾತುಗಳನ್ನಾಡುತ್ತಿರುವ ನಿನ್ನ ನಾಲಿಗೆಯ ಕೇಳುತ್ತಿರುವ ನನ್ನ ಕಿವಿಗಳೂ ಸೀಳಿಹೋಗುವುದಿಲ್ಲವಲ್ಲಾ ! ಎಂದು ಅನಾಥನಂತೆ ರೋದಿಸುತ್ತ ಹಾ ರಾಮ ! ಎಂದು ಹಂಬಲಿಸಿ ಕೈಕೇಯಿಯ ಕಾಲುಗಳ ಮೇಲೆ ಬಿದ್ದು ತಿರಿಗಿ ಮೂರ್ಛ ಹೊಂದಿದನು. ಅಷ್ಟರಲ್ಲಿಯೇ ಬೆಳಗಾಗಲು ಪುರೋಹಿತನಾದ ವಶಿಷ್ಠ ಮು ನಿಯು ವಾಮದೇವಾದಿಮಹಾಮುನಿಜನಗಳೊಡನೆಯ ಶಿಷ್ಯಸಮಹದೊಡನೆಯ ಕೂಡಿದವನಾಗಿ ಪಟ್ಟಾಭಿಷೇಕದ ಸಾಮಗ್ರಿಗಳನ್ನು ತೆಗೆಯಿಸಿಕೊಂಡು ರಾಜನ ಅಂತಃಪುರದ ಬಾಗಿಲೆಡೆಗೈತಂದು ನಿಂತು ಅಲ್ಲಿ ರಾಜಪ್ರೀತಿಪಾತ್ರನಾದ ಸುಮತ್ರ ನೆಂಬ ಮಂತ್ರಿವರ್ಯನನ್ನು ನೋಡಿ-ಎಲೈ ಮಂತ್ರಿ ಶ್ರೇಷ್ಠನಾದ ಸುಮಂತ್ರನೇ,