ಅರಸುಗಳಲ್ಲಿ ಇಂದಿನ ವರೆಗೂ ಒಬ್ಬರಾದರೂ ಕೊಟ್ಟ ಮಾತಿಗೆ ತಪ್ಪಿದವರಿಲ್ಲ, ನೀನು ಇಂಥ ಪ್ರಸಿದ್ಧ ವಂಶದಲ್ಲಿ ಹುಟ್ಟಿ ಹೀಗೆ ಮಾತಿಗೆ ತಪ್ಪಬಹುದೇ ? ಪೂರ್ವದಲ್ಲಿ ಸಿಬಿಚಕ್ರವರ್ತಿಯು ಪಾರಿವಾಳದ ಹಕ್ಕಿಗೆ ಕೊಟ್ಟ ಮಾತಿಗಾಗಿ ಗಿಡಗನಿಗೆ ತನ್ನ ಮಾಂಸವನ್ನು ಕೊಯ್ದು ಕೊಡುವುದರಿಂದಲೂ ಅಲರ್ಕನು ತನ್ನ ಕಣ್ಣುಗಳನ್ನು ಕಿತ್ತು ಕೊಡುವುದರಿಂದಲೂ ಉತ್ತಮವಾದ ಗತಿಯನ್ನು ಹೊಂದಲಿಲ್ಲವೇ ? ಒಳ್ಳೆಯದಾಯಿತು. ಧರ್ಮವನ್ನು ಪರಿತ್ಯಜಿಸಿ ನಿನ್ನೆ ಮೋಹದ ಮಗನಾದ ರಾಮನನ್ನು ರಾಜ್ಯದಲ್ಲಿ ಅಭಿಷೇಕಿಸಿ ಕೌಸಲ್ಯೆ ಯೊಡನೆ ಸುಖವಾಗಿರು. ನಾನು ಈಗಲೇ ನಿನ್ನ ಮುಂದೆಯೇ ವಿಷ ಪಾನವನ್ನು ಮಾಡಿ ಪ್ರಾಣವನ್ನು ಬಿಡುವೆನು. ಪಟ್ಟಾಭಿಷಿಕ್ತನಾದ ರಾಮನನ್ನೂ ಆತನ ತಾಯಿಯಾದ ಕೌಸಲ್ಯೆಯನ್ನೂ ನೋಡಿ ಒಂದು ಕ್ಷಣಕಾಲವಾದರೂ ಸಹಿಸಲಾರೆನು, ವಿಶೇಷವೇಕೆ ? ರಾಮನ ವನವಾಸ ಹೊರತಾಗಿ ಇನ್ನು ಯಾವುದರಿಂದಲೂ ನನಗೆ ಸಂತೋಷವೂ ಬದುಕುವಿಕೆಯೂ ಇಲ್ಲವೆಂದು ಬಿರುನುಡಿಗಳಿಂದ ಹೇಳಿಬಿಟ್ಟಳು.
ಆಗ ದಶರಥನು ಸಿಡಿಲಿನಂತೆ ಭಯಂಕರವಾದ ಕೈಕೇಯಿಯ ಮಾತುಗಳನ್ನು ಕೇಳಿ ಆಕೆಯ ಅನಿವಾರ್ಯವಾದ ಮನೋನಿಷ್ಕರ್ಷೆಯನ್ನು ನೆನೆನೆನೆದು ಬುಡವನ್ನು ಕಡಿದುರುಳಿಸಲ್ಪಟ್ಟ ಮರದಂತೆ ಭೂಮಿಯಲ್ಲಿ ಬಿದ್ದು ಹುಚ್ಚನಂತೆಯ ಸನ್ನಿಪಾತ ಜ್ವರಪೀಡಿತನಂತೆಯ ಗಾರುಡದಿಂದ ತಡೆಗಟ್ಟಿದ ಈ ರವಿಷಸರ್ಪದಂತೆಯೂ ಇರು ವವನಾಗಿ_ಹಾ ರಾಮಾ ! ಎಂದು ಪುನಃ ಚೇತರಿಸಿಕೊಂಡು ದುಷ್ಟಳಾದ ಕೈಕೇ ಯಿಯನ್ನು ಕುರಿತು-ಎಲೇ ಪಾಪೋತ್ಪಾದಿನಿಯೇ, ಅನಾದಿಸಂಸಿದ್ದ ವಾದ ನಮ್ಮ ಸೂರ್ಯವಂಶದಲ್ಲಿ ಹುಟ್ಟಿದವರಾದ ಹಿಂದಿನವರೆಲ್ಲಾ ಜ್ಯೇಷ್ಠ ಪುತ್ರನಿಗೆ ರಾಜ್ಯಾಭಿಷೇಕವನ್ನು ಮಾಡಿದರೇ ಹೊರತು ಈ ವರೆಗೂ ಯಾರೂ ಕಿರಿಯ ಮಕ್ಕಳಿಗೆ ರಾಜ್ಯಾಭಿಷೇಕವನ್ನು ಮಾಡಲಿಲ್ಲ, ಈಗ ನೀನು ಯೋಚಿಸಿರುವ ಇಂಥ ಕ್ರೂರಕಾರ್ಯವು ನಿನ್ನ ಮಗನಾದ ಭರತನಿಗೆ ಎಷ್ಟು ಮಾತ್ರವೂ ಪ್ರಿಯವಾಗಲಾರದು, ಮತ್ತು ಕಿರಿಯ ಹೆಂಡತಿಯ ಮಾತುಗಳನ್ನು ಕೇಳಿಕೊಂಡು ಗುಣಗೋಷವಿಚಾರಶೂನ್ಯನಾಗಿ ಗುಣ ಶಾಲಿಯ ರಾಜ್ಯಾರ್ಹನೂ ಜ್ಯೇಷ್ಟ ಕುಮಾರನೂ ಆದ ರಾಮನನ್ನು ಅನ್ಯಾಯವಾಗಿ ಆರಣ್ಯಕ್ಕೆ ಅಟ್ಟಿದನೆಂದು ಲೋಕದಲ್ಲಿ ಜನರೆಲ್ಲರೂ ನನ್ನನ್ನು ಹೀಯಾಳಿಸುವರು. ಅಲ್ಲದೆ ಧರ್ಮಮಾರ್ಗವನ್ನು ಅತಿಕ್ರಮಿಸಿ ಪತಿಯ ಪ್ರೇಮಕ್ಕೆ ಪಾತ್ರನಾದ ಮಗನನ್ನು ಕಾಡಿಗಟ್ಟಿ ಪತಿಯನ್ನು ಕೊಂದುಹಾಕಿದ ಮಹಾ ಘಾತುಕಳೆಂಬ ಅಪಕೀರ್ತಿಯು ಸೂರ್ಯಚಂದ್ರರಿರುವವರೆಗೂ ನಿನಗೆ ತಪ್ಪುವುದಿಲ್ಲವು, ಮಹಾನುಭಾವನೂ ಕೇಕಯರಾಜನೂ ಆದ ನಿನ್ನ ತಂದೆಯ ನೀತಿವಂತನೂ ನಿನ್ನ ತಮ್ಮನೂ ಆದ ಯುಧಾಜಿತ್ತೂ ಈ ವಿಧವಾದ ನಿನ್ನ ದುಸ್ಸಂಕಲ್ಪಸ್ಥಿತಿಯನ್ನು ಕೇಳಿದ ಕ್ಷಣದಲ್ಲಿಯೇ ಉತ್ತಮವಾದ ನಮ್ಮ ಕುಲದಲ್ಲಿ ಹುಟ್ಟಿ ಅಪಕೀರ್ತಿಯನ್ನು ತರತಕ್ಕವಳೆಂದು ತಿಳಿದು ನಿನ್ನನ್ನು ಪರಿತ್ಯಜಿಸುವರು. ಅದು ಕಾರಣ ತಂದೆತಮ್ಮಂದಿರಿಗೂ ನಿಜಪತಿಗೂ ಬಂಧು ಮಿತ್ರರಿಗೂ ಅಸಹ್ಯಕರವಾದ ಭರತಪಟ್ಟಾಭಿಷೇಕದಲ್ಲಿಯೂ ರಾಮನ ವನವಾಸದಲ್ಲಿಯೂ ಉಂಟಾಗಿರುವ ನಿನ್ನ ಪಾಪಸಂಕಲ್ಪವನ್ನು ಬಿಟ್ಟು ಬಿಡು: ಬಾಲ್ಯದಲ್ಲಿ ವಿವಿಧ