ಪುಟ:ಕಥಾ ಸಂಗ್ರಹ - ಭಾಗ ೨.djvu/೪೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


38 ಕಥಾಸಂಗ್ರಹ-೪ ನೆಯ ಭಾಗ ನೋಡುವುದರಿಂದ ನನ್ನ ಸಂತೋಷವು ಚಂದ್ರನನ್ನು ನೋಡಿದ ಸಮುದ್ರದಂತೆ ಹೆಚ್ಚು ತಿರುವದು, ರಾಮನನ್ನು ನೋಡದೆ ಒಂದು ನಿಮೇಷಮಾತ್ರವಿದ್ದರೆ ನನ್ನ ಚೇತನವು ಹಾರಿಹೋಗುವುದು. ಸೂರ್ಯನಿಲ್ಲದೆ ಲೋಕವೂ ನೀರಿಲ್ಲದೆ ಸಸ್ಯವೂ ನಿಂತರೂ ನಿಲ್ಲಬಹುದು, ರಾಮನಿಲ್ಲದಿದ್ದರೆ ನನ್ನ ಜೀವವು ನಿಲ್ಲಲಾರದು, ಎಲೇ ಪಾಪಕಾರಿಣಿಯೇ, ಸಾಕು ; ಈ ಮೌರ್ಖ್ಯವನ್ನು ಬಿಡು, ನಿನ್ನ ಕಾಲೆಡೆಗೆ ನನ್ನ ತಲೆಯನ್ನು ಚಾಚುವೆನು. ನನಗೆ ಪ್ರಸನ್ನಳಾಗು, ಅಯ್ಯೋ ! ಮಹಾದಾರುಣವಾದ ಇಂಥ ದುಷ್ಕಾರ್ಯವನ್ನು ಏಕೆ ಚಿಂತಿಸಿದೆ ? ಕೇಕಯವಂಶದಲ್ಲಿ ಹುಟ್ಟಿ ಇಕ್ಷಾ ಕುಕುಲವನ್ನು ಹೊಕ್ಕಂಥ ನಿನಗೆ ಇಂಥ ದುರ್ಬುದ್ದಿ ಯು ಹುಟ್ಟಬಹುದೇ ? ನೀತಿಸಂ ಪನ್ನೆ ಯಾದ ನೀನು ನನಗೆ ಇಂಥ ಅಪ್ರಿಯವಾದ ಮಾತುಗಳನ್ನು ಒಂದು ದಿವಸವಾ ದರೂ ಹೇಳಿದವಳಲ್ಲವಲ್ಲಾ ! ಈಗ ನಿನಗೆ ಪಿಶಾಚಿಯೇನಾದರೂ ಹಿಡಿದಿದೆಯೋ ? ಅದರಿಂದ ನಿನಗೆ ಇಂಥ ಬುದ್ದಿ ಏಕೃತಿಯುಂಟಾಗಿರಬಹುದೇ ? ನೀನು ನನ್ನೊಡನೆ ಏಕಾಂತದಲ್ಲಿರುವಾಗ್ಗೆ ಅನೇಕಾವೃತಿ ಲೋಕಾಭಿರಾಮನಾದ ರಾಮನು ನನಗೆ ಭರತ ನಗಿಂತಲೂ ಹೆಚ್ಚೆಂದು ಹೇಳುತ್ತಿದ್ದೆಯಲ್ಲಾ ! ಇಂಥ ನೀನು ಧರ್ಮಿಷ್ಟನಾಗಿಯ ಕೀರ್ತಿವಂತನಾಗಿಯ ಇರುವ ರಾಮನಿಗೆ ಚತುರ್ದಶ ಸಂವತ್ಸರಗಳ ವರೆಗೂ ವನವಾ ಸವನ್ನು ಕೋರಿದೆಯಲ್ಲಾ ! ಹೆತ್ತ ತಾಯಿಗಿಂತಲೂ ನೀನೇ ಹೆಜ್ಜೆ೦ದು ತಿಳಿದು ಯಾವಾಗಲೂ ನಿನ್ನ ಶುಶೂಷೆಯನ್ನು ಮಾಡುತ್ತಿರುವ ರಾಮನ ವಿಷಯದಲ್ಲಿ ಸ್ವಪ್ನ ದಲ್ಲಿಯಾದರೂ ಇಂಥ ಕೂರಕಾರ್ಯವನ್ನು ಎಣಿಸಬಹುದೇ ? ನನಗೆ ಬಹು ಪತ್ನಿಯ ರಿರುವರು. ಅವರಲ್ಲಿ ಒಬ್ಬಳಾದರೂ ಒಂದು ದಿವಸವಾದರೂ ರಾಮನ ವಿಷಯದಲ್ಲಿ ಸ್ವಲ್ಪಾಪವಾದವನ್ನೂ ಹೇಳಲಿಲ್ಲ, ಸತ್ಯದಿಂದ ಲೋಕಗಳನ್ನೂ ದಾನದಿಂದ ದೀನರನ್ನೂ ಶುಕ್ರೂಷೆಯಿಂದ ವೃದ್ದರನ್ನೂ ತೃಪ್ತಿ ಪಡಿಸುತ್ತ ಬಿಲ್ಲಿನಿಂದ ಹಗೆಗಳನ್ನು ಜಯಿಸುವ ಸಕಲ ಗುಣಸಂಪನ್ನನಾದ ರಾಮನನ್ನು ನಿನ್ನ ನಿಮಿತ್ತವಾಗಿ ಹೇಗೆ ಕಾಡಿಗಟ್ಟಲಿ ? ಯಾವ ರಾಮನಲ್ಲಿ ಸಹನಗುಣವೂ ಇಂದ್ರಿಯನಿಗ್ರಹವೂ ಸತ್ಯವೂ 'ಧರ್ಮವೂ ಕೃತ ಜ್ಞತೆಯ ಅಹಿಂಸಾಗುಣವೂ ಇರುವವೋ ಅಂಥ ರಾಮನನ್ನು ಬಿಟ್ಟರೆ ನನಗೆ ಗತಿ ಯಾರು ? ದೀನನಾಗಿ ಬೇಡಿಕೊಳ್ಳುವ ಮುದುಕನೂ ಪತಿಯ ಆದ ನನ್ನಲ್ಲಿ ನೀನು ಕಸಿಕರವನ್ನು ಮಾಡು, ನಿನಗೆ ಕೋಪವೂ ಬೇಡ, ಸಮುದ್ರಗಳಿಂದ ಸುತ್ತಲ್ಪಟ್ಟಿರುವ ಈ ಭೂಮಂಡಲದಲ್ಲಿ ನೀನು ಅಪೇಕ್ಷಿಸಿದ ಪದಾರ್ಥವನ್ನು ಆ ಕ್ಷಣದಲ್ಲಿಯೇ ತಂದು ಕೊಡುವೆನು. ಎಲೈ ಪ್ರಿಯೆಯೇ, ನಿನಗೆ ಕೈ ಮುಗಿಯುವೆನು, ನಿನ್ನ ಕಾಲುಗಳಿಗೆ ನಮಸ್ಕರಿಸುವೆನು. ನನಗೂ ರಾಮನಿಗೂ ರಕ್ಷಕಳಾಗೆಂದು ಬಹುವಿಧವಾಗಿ ಪ್ರಲಾಪಿ ಸುತ್ತ ದುಃಖಿಸುತ್ತ ಬಿಸುಸುಯ್ಯುತ್ತ ಕಣ್ಣೀರುಗಳನ್ನು ಸುರಿಸುತ್ತ ಬಾರಿಬಾರಿಗೂ ಬೇಡಿಕೊಳ್ಳುತ್ತಿರುವ ದಶರಥನನ್ನು ನೋಡಿ ಕೂರಳಾದ ಕೈಕೇಯಿಯು ಎಲೈ ಅರಸೇ, ಮೊದಲು ಪ್ರತಿಜ್ಞೆಯನ್ನು ಮಾಡಿ ಎರಡು ವರಗಳನ್ನು ಕೊಟ್ಟು ಈಗ ಮಗನ ಮೇಲಣ ಮೋಹದಿಂದ ಹೀಗೆ ಸಂಕಟಪಟ್ಟರೆ ಈ ಲೋಕದಲ್ಲಿ ನಿನ್ನನ್ನು ಭಾಷಾಪ್ರತಿಪಾಲಕನೆಂದು ಹೇಳುವರೇ ? ಈ ನಮ್ಮ ಇಕ್ಷಾಕುವಂಶದಲ್ಲಿ ಹುಟ್ಟಿದ