ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥ 37 ಕೇಳಿದುದಕ್ಕೆ ನೀನು ಮೊದಲು ನನಗೆ ಕೊಟ್ಟ ಎರಡು ವರಗಳನ್ನು ಈಗ ನಡಿಸಿಕೊಡ ಬೇಕು, ಈ ಭಾಗದಲ್ಲಿ ತಪ್ಪುವುದಿಲ್ಲ ವೆಂದು ಪ್ರಮಾಣಮಾಡಿದರೆ ನನ್ನ ಇಷ್ಟಾರ್ಥ ವನ್ನು ಕೇಳಿಕೊಳ್ಳುವೆನು ಎನಲು; ದಶರಥನು ಹೆಂಡತಿಯ ಮೇಲಣ ಮೋಹದಿಂದ ಸತ್ಯವಾಗಿಯ ನಡಿಸಿಕೊಡುವೆನೆಂದು ರಾಮನ ಮೇಲೆ ಆಣೆಯಿಟ್ಟು ಹೇಳಿದನು.
- ಆ ಮೇಲೆ ಕೈಕೇಯಿಾದೇವಿಯು ದಶರಥನನ್ನು ಕುರಿತು-ನೀನು ಮೊದಲು ಕೊಟ್ಟಿದ್ದ ಎರಡು ವರಗಳಲ್ಲಿ ಒಂದು ವರಕ್ಕೆ ರಾಮನು ಜಟಾಚೀರಧಾರಿಯಾಗಿ ಹದಿನಾಲ್ಕು ಸಂವತ್ಸರಗಳ ವರೆಗೂ ಕಾಡಿನಲ್ಲಿರುವ ಹಾಗೆ ಕಟ್ಟು ಮಾಡಿ ಕಳುಹಿಸ ಬೇಕು. ಎರಡನೆಯ ವಶಕ್ಕೆ ಭರತನಿಗೆ ಈ ರಾಜ್ಯದ ಪಟ್ಟಾಭಿಷೇಕವನ್ನು ಮಾಡಿಸ ಬೇಕು ಎಂದು ಹೇಳಲು ; ಆಗ ದಶರಥರಾಜನು ಪ್ರಚಂಡವಾದ ವಾಯುವಿನಿಂದ ನಡುಗುವ ವೃಕ್ಷದಂತೆ ಗಡಗಡನೆ ನಡುಗುತ್ತ ಕೂರವಾದ ಆಕೆಯ ಮಾತುಗಳು ಶ್ರುತಿಪಥವನ್ನೆ ದಿದ ಕೂಡಲೆ ಕೆಂಪಗೆ ಕಾದ ಉಕ್ಕಿನ ಶಲಾಕೆಯಿಂದ ಕಿವಿಯಲ್ಲಿ ಇರಿಯಲ್ಪಟ್ಟ ವನಂತೆ ನೆಲದಲ್ಲಿ ಬಿದ್ದು ಮೂರ್ಛಹೊಂದಿದನು. ಅನಂತರದಲ್ಲಿ ಬಲು ಹೊತ್ತಿನ ಮೇಲೆ ಸ್ವಲ್ಪ ಚೇತರಿಸಿಕೊಂಡು--ಇದೇನು ? ಕನಸೋ ? ಮನೋವಿಶ್ರ ಮಣೆಯೋ ? ಅಥವಾ ಎದೆಯ ಉಪದ್ರವವೋ ? ನನ್ನ ಶರೀರದಲ್ಲಿ ಇಂಥ ಭಯಂ ಕರವಾದ ತೀವ್ರವೇದನೆಯು ಏತಕುಂಟಾಯಿತು ? ಎಂದು ಆಲೋಚಿಸುತ್ತ ಸ್ವಲ್ಪ ವಿಶ್ರಾಂತಿಯನ್ನು ಹೊಂದಿದವನಾಗಿ ನೆಲದ ಮೇಲೆ ಬಿದ್ದು ಕೊಂಡು ಬಹು ದೀರ್ಘ ವಾದ ನಿಟ್ಟುಸಿರುಗಳನ್ನು ಬಿಡುತ್ತ ಅಹಿತುಂಡಿಕನ ಮಂತ್ರದಿಂದ ತಡೆಯಲ್ಪಟ್ಟ ಮಹಾ ವಿಷವುಳ್ಳ ನಾಗರಹಾವಿನೋಪಾದಿಯಲ್ಲಿ ಭೋರ್ಗರೆಯುತ್ತ-ಹಾ ರಾಮ ! ರಾಮಚಂದ್ರನೇ! ನನ್ನ ಮೋಹದ ಕಂದನೇ ! ಎಂದು ಹಂಬಲಿಸುತ್ತ ದುಃಖಾಗ್ನಿ ಯಿಂದ ಸುಟ್ಟು ಕರಿಮುರಿಯಾದ ಮೈಯುಳ್ಳವನಾಗಿ ಪುನಃ ಮರ್ಧೆಯನ್ನು ಹೊಂದಿ ಬಲುಹೊತ್ತಿಗೆ ಎಚ್ಚೆತ್ತು ಬಹು ದುಃಖಿತನಾಗಿ ಕೋಪದಿಂದ ಕೂಡಿ ಕೆಂಪಾದ ಕಣ್ಣಳಿಂದ ಸುಡುವವನೋಪಾದಿಯಲ್ಲಿ ಕೈಕೇಯಿಯನ್ನು ದುರದುರನೆ ನೋಡಿ-ಎಲೇ ಘಾತುಕಳೇ, ದುಸ್ಸ ಭಾವವುಳ್ಳವಳೇ, ಕುಲವಿನಾಶಿನಿಯೇ, ಪಾಪಿ ಸ್ಥಳೇ, ರಾಮನು ನಿನಗೇನು ಅಪರಾಧವನ್ನು ಮಾಡಿದನು ? ರಾಮನು ನಿನ್ನಲ್ಲಿ ನಿಜಮಾತೃವಿಗಿಂತಲೂ ಅಧಿಕವಾದ ಗೌರವವನ್ನಿಟ್ಟಿರುವನಲ್ಲಾ! ಅಂಥ ರಾಮನ ಅನರ್ಥಕ್ರೋಸ್ಕರ ನೀನು ಈ ರೀತಿಯಾಗಿ ಉದ್ಯುಕಳಾಗಬಹುದೇ ? ಅತಿಕರವಾದ ವಿಷವುಳ್ಳ ಮಹೋರಗಿಯೆಂದರಿಯದೆ ರಾಜಕುಮಾರಿ ಎಂದು ನಾನು ನಿನ್ನನ್ನು ಮದುವೆಯಾಗಿ ನನ್ನ ಮನೆಗೆ ಕರೆದುತಂದು ನನಗೆ ಅಂತ್ಯ ಕಾಲವನ್ನು ತಂದುಕೊಂಡೆ ನಲ್ಲಾ! ದೇವಲೋಕವೆಲ್ಲವೂ ಏಕಪ್ರಕಾರವಾಗಿ ರಾಮನ ಗುಣಸ್ತೋತ್ರವನ್ನು ಮಾಡುತ್ತಿರುವುದು, ಪ್ರಿಯ ಕುಮಾರನಾದ ರಾಮನಲ್ಲಿ ಯಾವ ತಪ್ಪನ್ನು ಕಂಡು ಕಾಡಿಗಟ್ಟುವೆನು ? ಕೌಸಲ್ಯ ಯನ್ನಾದರೂ ಸುಮಿತ್ರೆಯನ್ನಾದರೂ ಮತ್ತು ಐಶ್ವರ್ಯ ಲಕ್ಷ್ಮಿಯನ್ನಾದರೂ ಕಡೆಗೆ ಪ್ರಾಣಗಳನ್ನಾದರೂ ಬಿಡಬಲ್ಲೆನು, ಸುಗುಣಾರಾಮ ನಾಗಿ ಪಿತೃವತ್ಸಲನಾದ ರಾಮನನ್ನು ಬಿಡಲಾರೆನು, ಹಿರಿಯ ಮಗನಾದ ರಾಮನನ್ನು