ಪುಟ:ಕಥಾ ಸಂಗ್ರಹ - ಭಾಗ ೨.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

42 ಕಥಾಸಂಗ್ರಹ-೪ ನೆಯ ಭಾಗ ರಾಷ್ಟ್ರ ವು ಪರಿಶೋಭಿಸುವುದು ಎಂದು ಹೇಳುತ್ತಿರಲು; ಆಗೆ ಸ್ವಲ್ಪ ಚೇತರಿಸಿಕೊಂ ಡಿದ್ದ ದಶರಥನಿಗೆ ಈ ಮಾತುಗಳೆಲ್ಲಾ ಕೇಳಿಸಿದ ಕೂಡಲೆ ಕರ್ಣಕಠೋರವಾಗಿ ದೊಡ್ಡ ಗಾಯಗಳಲ್ಲಿ ಹೊಸ ಸುಣ್ಣವನ್ನು ಹಾಕಿ ನೀರನ್ನು ಹೊಯ್ದಂತಾಗಿ ಸಂಕಟಪಡಿ ಸಲು ; ಆಗ ರಾಜನು ನಿದ್ರಾಭಾವದಿಂದ ಕೆಂಪಾಗಿರುವ ಕಣ್ಣುಗಳಿ೦ದ ಸುಮಂತ್ರ ನನ್ನು ನೋಡಿ-ಎಲೈ ಸುಮಂತ್ರನೇ, ನೀನು ಈ ವಿಧವಾದ ದುಸ್ಸಹವಾಕ್ಯಗಳೆಂಬ ಕತ್ತಿಗಳಿಂದ ಬಾರಿಬಾರಿಗೂ ನನ್ನ ಮರ್ಮಸ್ಥಳಗಳನ್ನು ಏಕೆ ಕತ್ತರಿಸುತ್ತಿರುವೆ ? ಎಂದು ಇಷ್ಟು ಮಾತ್ರ ಹೇಳಿ ಮತ್ತೆ ಮರ್ಛಾಗತನಾದನು. ಆಗ ಕೈಕೇಯಿಯು-ಎಲೆ ಸುಮಂತ್ರನೇ, ಅರಸನು ರಾಮನ ಪಟ್ಟಾಭಿಷೇ ಕೋತ್ಸವದ ಸಂಭ್ರಮದಿಂದ ರಾತ್ರಿಯೆಲ್ಲಾ ಎಚ್ಚತ್ತಿದ್ದನು. ಅದು ಕಾರಣ ಈಗತಾನೆ ಸ್ವಲ್ಪ ನಿದ್ರಿಸುತ್ತಿರುವನು. ನೀನು ಈಗಲೇ ಶೀಘ್ರವಾಗಿ ಹೋಗಿ ಸರ್ವರ ಸಂತೋ ಷಕ್ಕೂ ಪಾತ್ರನಾದ ರಾಮನನ್ನು ಕರೆದುಕೊಂಡು ಬಾ, ನೀನು ಈ ಭಾಗದಲ್ಲಿ ಸ್ವಲ್ಪವೂ ಯೋಚಿಸಬೇಡ, ಹೋಗು ಎಂದು ಹೇಳಲು ; ಆಗ ಸುಮಂತ್ರನು ರಾಮನ ಪಟ್ಟಾಭಿಷೇಕಕ್ರೋಸ್ಕರ ಕೈಕೇಯಿಾದೇವಿಯು ನಿಶ್ಚಯವಾಗಿ ತ್ವರೆಪಡಿಸು ತಿರುವಳೆಂದು ಭಾವಿಸಿ ಸಂತೋಷಪಟ್ಟು ಕೊಂಡು ಅಲ್ಲಿಂದ ಹೊರಟು ಶೀಘ್ರವಾಗಿ ರಾಮನ ಬಳಿಗೆ ಬಂದು ಅವನಿಗೆ ಈ ಮಾತುಗಳನ್ನು ತಿಳಿಸಲು ; ರಾಮನು ಶೀಘ್ರ ವಾಗಿ ಅಲ್ಲಿಂದ ಹೊರಟುಬರುತ್ತ ತನ್ನ ಹಿಂದೈತರುತ್ತಿರುವ ಸೀತೆಯನ್ನು ನೋಡಿ ನನ್ನ ತಂದೆಯ ನನ್ನ ಕಿರಿಯ ತಾಯಿಯಾದ ಕೈಕೇಯಿಾದೇವಿಯ ನನಗೆ ಪಟ್ಟಾ ಭಿಷೇಕವನ್ನು ಮಾಡುವುದಕ್ಕೋಸ್ಕರ ನನ್ನನ್ನು ಕರಿಸಿರುವರು. ಅದು ಕಾರಣ ನಾನು ಹೋಗುವೆನು, ನೀನು ನಿನ್ನ ಪರಿವಾರದೊಡನೆ ಕೂಡಿ ಇಲ್ಲಿ ಸುಖವಾಗಿರೆಂದು ಹೇಳಿ ದಿವ್ಯವಾದ ರಥವನ್ನೇರಿ ಹೊರಡಲು; ಕೂಡಲೆ ಲಕ್ಷ್ಮಣನು ಧನುರ್ಬಾಣಗಳನ್ನು ತೆಗೆದು ಕೊಂಡು ಅಣ್ಣನ ಮೈಗಾವಲಿಗಾಗಿ ಹಿಂದೆಯೇ ಬಂದನು, ಮತ್ತು ಖಡ್ಡ ಖೇಡ್ಯ ಕು೦ತಾದ್ಯಾಯುಧಗಳನ್ನು ಧರಿಸಿದವರಾಗಿ ಅಶ್ವಾರೂಢರಾದ ಅಸಂಖ್ಯಾತ ವೀರರು ಹಿಂದೆ ಬಂದರು. ಆಗ ಕೆಲರು ದಿವ್ಯವಾದ ಶ್ವೇತಛತ್ರವನ್ನು ಹಿಡಿದರು. ಕೆಲರು ಬಿಳಿಯ ಚೌರಿಗಳನ್ನು ಬೀಸಿದರು, ಸ್ತುತಿಪಾಠಕರು ಮುಂಗಡೆಯಲ್ಲಿ ಹೊರ ಇುತ್ತ ಬಂದರು, ಅಪರಿಮಿತರಾದ ಕಟ್ಟಿಗೆಯವರು ಮುಂದೆ ನೆರೆದಿರುವ ಜನಗಳ ಗುಂಪುಗಳನ್ನು ಚದರಿಸಿ ರಾಮನ ರಥವು ಬರುವುದಕ್ಕೆ ಅನುಕೂಲವಾಗಿ ಮಾರ್ಗ ವನ್ನು ಇಂಬುಗೊಳಿಸುತ್ತ ಬಂದರು. ಇಷ್ಟು ಸಂಭ್ರಮದಿಂದ ರಾಮನು ರಾಜವೀಧಿ ಯಲ್ಲಿ ಬರುತ್ತ-ಚಂದ್ರನು ರೋಹಿಣೀದೇವಿಯೊಡನೆ ಕೂಡುವಂತೆ ರಾಮನು ರಾಜ್ಯಲಕ್ಷ್ಮಿಯೊಡನೆ ಕೂಡಿ ಇನ್ನು ಮೇಲೆ ತನ್ನ ಮಕ್ಕಳನ್ನೋಪಾದಿಯಲ್ಲಿ ನಮ್ಮೆ ಲ್ಲರನ್ನೂ ಸುಖದಿಂದ ಸಲಹುವನೆಂದು ಗುಂಪುಗುಂಪಾಗಿ ಕೂಡಿ ಮಾತಾಡಿಕೊಳ್ಳು ತಿರುವ ಜನರ ಮಾತುಗಳನ್ನು ಕೇಳುವವನಾಗಿ ದಶರಥರಾಜನ ಅರಮನೆಯ ಬಾಗಿಲಿ ಬಳಿಗೈತಂದು' ರಥದಿಂದಿಳಿದು ಸಕಲವಿಧಪರಿವಾರದವರನ್ನೂ ಅಲ್ಲೇ ನಿಲ್ಲಿಸಿ ತಾನೂ 1ನೇ ಒಳಹೊಕ್ಕು ರಕ್ತಿಮೆಯುಳ್ಳ ಕಣ್ಣುಗಳೂ ವಿವರ್ಣವಾದ ಮುಖವೂ ಒಣಗಿದ