ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ 53 ನಿನ್ನನ್ನು ಪರಮಾನಂದದಿಂದ ನೋಡುವೆನು. ಈಗ ಸಂತೋಷದಿಂದ ಹೋಗಿ ಬರುವ ವನಾಗು ಎಂದು ಅಪ್ಪಣೆಯನ್ನು ಕೊಟ್ಟಳು. ಆಗ ರಾಮನು ಕಣ್ಣೀರುಗಳನ್ನು ಸುರಿಸುತ್ತ ತಾಯಿಗೆ ಪ್ರದಕ್ಷಿಣ ನಮಸ್ಕಾ ರಗಳನ್ನು ಮಾಡಿ ಹಿಂದೆ ಬರುತ್ತಿರುವ ಲಕ್ಷ್ಮಣನೊಡನೆ ಅಲ್ಲಿಂದ ಹೊರಟು ತನ್ನ ಮನೆಗೆ ಬಂದು ಈ ವರ್ತಮಾನಗಳೊಂದನ್ನೂ ತಿಳಿಯದೆ ನಿಜಪತಿಗೆ ಪಟ್ಟಾಭಿಷೇಕ ವಾಗುವುದೆಂಬ ಸಂತೋಪಾತಿಶಯದಿಂದ ದೇವತಾ ಪೂಜೆಗಳನ್ನು ಮಾಡುತ್ತ ಮುತ್ ದೆಯರಿಗೆ ಬಾಗಿನಗಳನ್ನು ಕೊಡುತ್ತ ವೃದ್ಧ ದಂಪತಿಗಳನ್ನು ಪೂಜಿಸುತ್ತ ಬಡವರಿಗೆ ಬೇಕಾದ ವಸ್ತುಗಳನ್ನು ಉಚಿತವಾಗಿ ಕೊಡುತ್ತ ಕುರುಡ ಕುಂಟ ಗೂನ ಮೊದಲಾದ ಅಂಗಹೀನರಿಗೆ ದಾನಗಳನ್ನು ಮಾಡುತ್ತ ಅತ್ಯುಲ್ಲಾಸದಿಂದ ಕೂಡಿರುವ ಸೀತೆಯ ಮುಂದೆ ಬಹುಲಜ್ಞಾ ವ್ಯಥೆಗಳಿಂದ ತಲೆಯನ್ನು ಬೊಗ್ಗಿಸಿಕೊಂಡು ಶೋಕವನ್ನು ಸಹಿಸಲಾರದೆ ದುಃಖಕ್ಕೆ ವಶನಾಗಿ ಕಣ್ಣೀರುಗಳನ್ನು ಸುರಿಸುತ್ತ ಜಡೀಭೂತನಾಗಿ ನಿಂತಿರಲು ; ಆಗ ಸೀತೆಯು ಅಪಾರ ವ್ಯಸನಾಕ್ರಾಂತನಾಗಿರುವ ನಿಜಕಾಂತನಾದ ರಾಮನನ್ನು ನಿರೀಕ್ಷಿಸಿ ಅವನನ್ನು ಕುರಿತು--ಇದೇನೈ ಜೀವಿತೇಶನೇ, ಇಂಥ ಸಂತೋಷ ದಾಯಕವಾದ ಪಟ್ಟಾಭಿಷೇಕ ಮಹೋತ್ಸವಕಾಲದಲ್ಲೂ ನೀನು ಈ ರೀತಿಯಾಗಿ ದುಃಖಿ ಸುತ್ತಿರುವುದಕ್ಕೆ ಕಾರಣವೇನು ? ಇದರಿಂದ ನನಗೆ ಆಶ್ಚರ್ಯವೂ ಭಯವೂ ಸಂದೇಹವೂ ಉಂಟಾಗಿರುವುವಲ್ಲಾ, ನನ್ನಲ್ಲಿ ಕೃಪೆಮಾಡಿ ಇದಕ್ಕೆ ಕಾರಣವನ್ನು ಬೇಗ ತಿಳಿಸುವ ವನಾಗು ಎಂದು ವಿನಯದಿಂದ ಕೇಳಿಕೊಳ್ಳಲು; ರಾಮನು ಎಲೈ ಪ್ರಾಣವಲ್ಲಭೆಯೇ, ಈಗ ನನಗೆ ಒದಗಿರುವ ವಿಪತ್ತನ್ನು ಏನೆಂದು ಹೇಳಲಿ, ಸತ್ಯಪ್ರತಿಜ್ಞನಾದ ನನ್ನ ತಂದೆಯು ತನ್ನ ಕಿರಿಯ ಹೆಂಡತಿಯಾದ ಕೈಕೇಯಿಯ ಮಾತಿಗೆ ಕಟ್ಟುಬಿದ್ದವನಾಗಿ ಆಕೆಯ ಮಗನಾದ ಭರತನಿಗೆ ಪಟ್ಟಾಭಿಷೇಕವನ್ನು ಮಾಡುತ್ತಾನೆ. ನನಗಾದರೋ ಜಟಾಚೀರಧರನಾಗಿ ಹದಿನಾಲ್ಕು ಸಂವತ್ಸರಗಳ ವರೆಗೂ ಮುನಿಗಳಂತೆ ಗಡ್ಡೆ ಗೆಣಸು ಗಳನ್ನು ತಿಂದುಕೊಂಡು ದಂಡಕಾರಣ್ಯದಲ್ಲಿ ವಾಸಮಾಡುವಂತೆ ಅಪ್ಪಣೆಯನ್ನಿತ್ತನು. ಅದು ಕಾರಣ ಈಗ ನಾನು ತಂದೆಯ ಆಜ್ಞಾನುಸಾರವಾಗಿ ವನಪ್ರಯಾಣಕ್ಕೆ ಸನ್ನದ್ದ ನಾಗಿ ಹೊರಟು ಪ್ರಿಯಳಾದ ನಿನಗೆ ಹೇಳಿಹೋಗಬೇಕೆಂದು ಇಲ್ಲಿಗೆ ಬಂದೆನು, ನೀನು ನನ್ನ ವಿಯೋಗದಿಂದ ದುಃಖಪಡುತ್ತಿರುವ ನನ್ನ ತಂದೆತಾಯಿಗಳಾದ ದಶರಥಮಹಾ ರಾಜನನ್ನೂ ಕೌಸಲ್ಯಾದೇವಿಯನ್ನೂ ಶುಶೂಷಿಸುತ್ತಿರುವವಳಾಗಿ ಶುಚಿವ್ರತವನ್ನ ವ ಲಂಬಿಸಿ ನಾನು ಬರುವ ವರೆಗೂ ಇಲ್ಲಿರು, ನನ್ನ ತಮ್ಮಂದಿರನ್ನು ನಿನ್ನ ಹೊಟ್ಟೆ ಯಲ್ಲಿ ಹುಟ್ಟಿದ ಮಕ್ಕಳಿಗಿಂತಲೂ ಹೆಚ್ಚೆಂದು ಭಾವಿಸಿಕೊಂಡಿರು, ನನಗೆ ತಾಯಿಯ ನಿನಗೆ ಅತ್ತೆಯ ಆಗಿರುವ ಕೈಕೇಯಿಾದೇವಿಯ ವಿಷಯದಲ್ಲಿ ಮರೆತಾದರೂ ಬಿರು ನುಡಿಗಳನ್ನಾಡೀಯೆ ಜೋಕೆ ! ದಶರಥ ಭೂಪಾಲನ ಅಂತಃಪುರಜನರೆಲ್ಲರೊಡನೆಯ ಮೃದುಮಧುರವಾದ ಮಾತುಗಳನ್ನಾಡುತ್ತ ವಿಹಿತದಿಂದಿರುವವಳಾಗು ಎಂದು ಹೇಳಲು; ಆಗ ಸೀತೆಯು ರಾಮನನ್ನು ನೋಡಿ ಪ್ರೀತ್ಯ ತಿಶಯದಿಂದ ಕೋಪಿಷ್ಠಳಾಗಿ- - ಏನೈ ಸಕಲಧರ್ಮಜ್ಞನಾದ ಪ್ರಿಯನೇ, ಇಂಥ ಮರ್ಮಭೇದಕವಾದ ಮಾತುಗಳ
- ೪