ಪುಟ:ಕಥಾ ಸಂಗ್ರಹ - ಭಾಗ ೨.djvu/೭೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸೀಣಪಹಾರದ ಕಥ 63 ಇರುವನು, ನೀನು ಹೋಗಿ ಅವನನ್ನು ವರಿಸಿ ಮದುವೆಯಾದರೆ ನಿನಗೆ ಬಹಳ ಸುಖ ವಂಟಾಗುವುದು ಎನ್ನಲು ; ಆಗ ಶೂರ್ಪನಖಿಯು ಲಕ್ಷ್ಮಣನ ಬಳಿಗೆ ಹೋಗಿ ಆತನ ಸೌಂದರ್ಯವನ್ನು ನೋಡಿ ಈತನು ಆತನಿಗಿಂತಲೂ ಚೆಲುವನಾಗಿರುವನಲ್ಲಾ, ಆತನು ಹೇಳಿದ ಮಾತು ನಿಜವೇ ಸರಿ. ನಾನು ಇವನನ್ನು ಗಂಡನನ್ನಾಗಿ ಮಾಡಿಕೊಳ್ಳ ಬಹುದು ಎಂದು ಯೋಚಿಸಿ ಲಕ್ಷ್ಮಣನ ಬಳಿಗೆ ಹೋಗಿ ಅವನನ್ನು ಕುರಿತು.ಎಲೈ ಮೋಹನಾಂಗನೇ, ನಿಮ್ಮಣ್ಣನಾದ ರಾಮನು ನನ್ನನ್ನು ನಿನ್ನ ಬಳಿಗೆ ಕಳುಹಿಸಿದನು. ನೀನು ಬೇಗ ನನ್ನನ್ನು ಮದುವೆಯಾಗು ಅಂದಳು ಆಗ ಲಕ್ಷಣನು ಅವಳ ಇಂಗಿತ ದಿಂದಲೂ ಚೇಷ್ಟೆಗಳಿಂದಲೂ ಇವಳು ರಾಕ್ಷಸಿಯಂದು ತಿಳಿದು ಅವಳನ್ನು ಕುರಿತು... ಎಲೈ ಸ್ತ್ರೀಯೇ, ನಾನು ರಾಮನ ದಾಸನು, ನಿರಂತರದಲ್ಲೂ ಆತನ ಸೇವೆ ಯನ್ನೇ ಮಾಡಿಕೊಂಡು ಜೀವಿಸುತ್ತಿರುವೆನು. ಇಂಥ ಸ್ಪುರದ್ರೂಪಿಣಿಯಾದ ನೀನು ದಾಸನಾದ ನನ್ನನ್ನು ಮದುವೆಯಾದರೆ ದಾಸಿಯಾಗಿ ಅವರ ಸೇವೆಯನ್ನು ಮಾಡಿ ಕೊಂಡಿರಬೇಕಾಗುತ್ತದೆ. ನೀನು ಒಡೆಯನಾದ ರಾಮನನ್ನು ಮದುವೆಯಾದರೆ ನನಗೆ ಒಡತಿಯಾಗಿರುವೆಯಲ್ಲಾ, ನಿನ್ನಂಥ ಕುಲಸ್ತ್ರೀಯು ದಾಸನನ್ನು ಮದುವೆಯಾಗು ವುದು ಧರ್ಮವೇ ? ಅಂದನು. ಆ ಮಾತುಗಳನ್ನು ಕೇಳಿ ಶೂರ್ಪನಖಿಯು-ಇವರು ನನ್ನನ್ನು ಅಪಹಾಸ್ಯಕ್ಕೆ ಈಡುಮಾಡಿ ಹೀಗೆ ತಿರುಗಿಸುತ್ತಿರುವರು. ಇದರಿಂದ ನನ್ನ ಕೋರಿಕೆಯು ನೆರೆ ವೇರುವಂತೆ ಕಾಣುವುದಿಲ್ಲ, ಅದು ಕಾರಣ ರಾಮನ ಹೆಂಡತಿಯಾದ ಈ ಮನುಜ ಸ್ತ್ರೀಯನ್ನು ನಾನು ಕೊಂದು ತಿಂದುಬಿಟ್ಟರೆ ಆ ಮೇಲೆ ಇವನಿಗೆ ಪತ್ನಭಾವವುಂಟಾಗಿ ನನ್ನನ್ನೇ ಮದುವೆಯಾಗುವನು ಎಂದು ಯೋಚಿಸಿಕೊಂಡು ಹೊರಟು ಸೀತೆಯನ್ನು ನುಂಗುವುದಕ್ಕೆ ಮಹಾ ಮೃತ್ಯುದೇವತೆಯಂತೆ ಬರುತ್ತಿರಲು ; ಆಗ ರಾಮನ ಅಪ್ಪ ಣೆಯ ಪ್ರಕಾರ ಲಕ್ಷ್ಮಣನು ಅವಳನ್ನು ಹಿಡಿದು ತನ್ನ ಕತ್ತಿಯಿಂದ ಅವಳ ಕಿವಿ ಮಗುಗಳನ್ನು ಕೊಯ್ದನು, ಆಗ ಅವಳು ಹರಕು ಮಗುಳ್ಳವಳೂ ಮಳಿಯ ಆಗಿ ಧಾರಾರೂಪವಾಗಿ ಸುರಿಯುತ್ತಿರುವ ರಕ್ತವುಳ್ಳವಳಾಗಿ ತನ್ನಣ್ಣನಾದ ಖರನ ಬಳಿಗೆ ಬಂದು ಅವನೊಡನೆ ರಾಮಲಕ್ಷ್ಮಣರ ಮೇಲೆ ದೂರು ಹೇಳಿಕೊಳ್ಳಲು; ತತ್ ಕ್ಷಣದಲ್ಲೇ ಖರನು ರಾಕ್ಷಸ ಸೇನಾಯುಕ್ತನಾಗಿ ಹೊರಟು ರಾಮನೊಡನೆ ಯುದ್ಧಕ್ಕೆ ಬಂದನು. ರಾಮನೂ ಲಕ್ಷ್ಮಣ ಸಮೇತನಾಗಿ ಯುದ್ಧಕ್ಕೆ ತೊಡಗಿ ಕಡೆಗೆ ಜನಸ್ತಾನದಲ್ಲಿ ಒಬ್ಬ ರಾಕ್ಷಸನಾದರೂ ಉಳಿಯದಂತೆ ಎಲ್ಲರನ್ನೂ ಕೊಂದು ಆ ಪ್ರದೇ ಶದಲ್ಲಿ* ರಾಕ್ಷಸರಿಂದುಂಟಾಗುತ್ತಿದ್ದ ತೊಂದರೆಯನ್ನು ನಿರ್ನಾಮ ಮಾಡಿದನು. ಆ ಮೇಲೆ ಶೂರ್ಪನಖಿಯು ಹತಾಶಳಾಗಿ ಲಂಕಾಪಟ್ಟಣಕ್ಕೆ ಬಂದು ತನ್ನಣ್ಣನಾದ ರಾವಣನ ಬಳಿಯಲ್ಲಿ ದುಃಖಿಸುತ್ತ ನಿಂತು ನಿದರ್ಶನಪೂರ್ವಕವಾಗಿ ವಿದ್ಯಮಾನವನ್ನೆಲ್ಲಾ ತಿಳಿಸಲು ; ಅವನು ಕೋಪ ಸಂತಾಪ ಪ್ರೇರಿತನಾಗಿ ರಾಮಲಕ್ಷ್ಮಣರೊಡನೆ ಯುದ್ದ ಕೆ. ಹೊರಡುವ ಸಮಯದಲ್ಲಿ ಶೂರ್ಪನಖಿಯು ಅವನನ್ನು ಕುರಿತು.-ಎಲೈ ಅಣ್ಣನೇ, ರಾಮಲಕ್ಷ್ಮಣರನ್ನು ಜಗಳದಲ್ಲಿ ಜಯಿಸುವುದು ಪಿನಾಕಹಸ್ತ್ರನಾದ ಶಿವನಿಗೂ ಸಾಧ್ಯ