ಪುಟ:ಕನಕದಾಸ ಸಾಹಿತ್ಯ ದರ್ಶನ - ಸಂಪುಟ ೨.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಕನಕ ಸಾಹಿತ್ಯ ದರ್ಶನ-೨ ನತ್ತು ಮಾಡುವುದೇನು ಪೂರ್ವದ ತೆತ್ತಿಗನು ನೀನೀಗ ರಕ್ಷಿಸು ನಮ್ಮನನವರತ (೯೨) ಮಣ್ಣು ಮಣ್ಣಿನೊಳುದಿಸಲದರಲಿ ಮಣ್ಣು ಬೊಂಬೆಗಳಾಗಿ ರಂಜಿಸಿ ಮಣ್ಣಿನಾಹಾರದಲಿ ಜೀವವ ಹೊರೆದು ಉಪಚರಿಸಿ ಮಣ್ಣಿನಲಿ ಬಂಧಿಸಿದ ದೇಹವ ಮಣ್ಣುಗೂಡಿಸಬೇಡ ಜ್ಞಾನದ ಕಣ್ಣ ದೃಷ್ಟಿಯನಿಟ್ಟು ರಕ್ಷಿಸು ನಮ್ಮನನವರತ (೯೩) ಬೀಯವಾಗುವ ತನುವಿನಲಿ ನಿ ರ್ದಾಯಕನು ನೀನಿರ್ದು ಅತಿ ಹಿರಿ ದಾಯಸಂಬಡಿಸುವರ ನೀನನುಕೂಲವಾಗಿರ್ದು ತಾಯನಗಲಿದ ಶಿಶುವಿನಂದದಿ ಬಾಯಿಬಿಡುವಂತಾಯ್ತಿ ಚಿಂತಾ ದಾಯಕನೆ ಬಿಡಬೇಡ ರಕ್ಷಿಸು ನಮ್ಮನನವರತ (೯೪) ಮೊದಲು ಜನನವನರಿಯ ಮರಣದ ಹದನ ಕಡೆಯಲ್ಲಿ ತಿಳಿಯ ನಾ ಮ ಧ್ಯದಲಿ ನೆರೆ ನಾ ನಿಪುಣನೆಂಬುದು ಬಳಿಕ ನಗೆಗೇಡು ಮೊದಲು ಕಡೆ ಮಧ್ಯಗಳ ಬಲ್ಲವ ಮದನ ಜನಕನು ನೀನು ನಿನ್ನಯ ಪದಯುಗವ ಬಯಸುವೆನು ರಕ್ಷಿಸು ನಮ್ಮನನವರತ (೯೫ ಸಾರವಿಲ್ಲದ ದೇಹವಿದು ನಿ ಸ್ಥಾರವಾಗಿಹ ತನುವಿನಲಿ ಸಂ ಚಾರಿಯಹ ನೀನಿರ್ದು ಕಡೆಯಲಿ ತೊಲಗಿ ಹೋಗುತಲಿ ದೂರ ತಪ್ಪಿಸಿಕೊಂಡು ಬರಿಯಪ