ಪುಟ:ಕನಕದಾಸ ಸಾಹಿತ್ಯ ದರ್ಶನ - ಸಂಪುಟ ೨.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹರಿಭಕ್ತಿ ಸಾರ ೨೫ ತೆಗೆಸು ಕಾಲನ ಬಲವ ಬಲು ಮು ತ್ತಿಗೆಯನಿದ ಪರಿಹರಿಸಿ ರಕ್ಷಿಸು ನಮ್ಮನನವರತ (೮೮). ವಾರಣಗಳೆಂಟೆಸೆವ ಮನೆಗೆ ದ್ವಾರವೊಂಬತ್ತದಕೆ ಬಲು ಮೊನೆ ಗಾರರಾದಾಳುಗಳ ಕಾವಲುಗಾರರನು ಮಾಡಿ ಆರರಿಯದಂತದರೊಳಗೆ ಹೃದ ಯಾರವಿಂದದಿ ನೀನಿರಲು ಬರಿ ದೂರು ಜೀವನಿಗುಂಟೆ ರಕ್ಷಿಸು ನಮ್ಮನನವರತ (೮೯) ಪೇಳಲೆನ್ನಳವಲ್ಲವೀ ಯಮ ನಾಳುಗಳು ನೆರೆಯಂಗದೇಶವ ದಾಳಿ ಮಾಡುವರಕಟಕಟ ಸರಸೂರೆಗಳ ಪಿಡಿದು ಕಾಳು ಮಾಡುವರಿನ್ನು ತನುವಿದು ಬಾಳಲರಿಯದು ಕೋಟಿಯವರಿಗೆ ಕೋಳುಹೋಗದ ಮುನ್ನ ರಕ್ಷಿಸು ನಮ್ಮನನವರತ (೯೦) ನಾಲಗೆಯು ನಾಸಿಕವು ನಯನ ಕ ಪಾಲ ಪದ ಪ್ರಾಣಿಗಳು ತನುವಿನ ಮೂಲಕರ್ತೃವಿನಲ್ಲಿ ಪರಿಚಾರಕರು ತಾವಾಗಿ ಲೀಲೆಯಿಂದಿರುತಿರ್ದು ಕಡೆಯಲಿ ಕಾಲ ತೀರಿದ ಬಳಿಕಲದರನು ಕೂಲ ನಿನ್ನೊಳಗಹುದು ರಕ್ಷಿಸು ನಮ್ಮನನವರತ ಸತ್ತವರಿಗಳಲೇಕೆ ತನ್ನನು ಹೆತ್ತವರು ಹೊತ್ತವರುಗಳು ತಾವ್ ಸತ್ತು ಹೋಗುವರಲ್ಲದುಳಿವರೆ ಮರುಗಲೇಕಿನ್ನು ಮೃತ್ಯು ಬೆನ್ನಿನೊಳಿಹುದು ತಾವಿ