ಪುಟ:ಕನಕದಾಸ ಸಾಹಿತ್ಯ ದರ್ಶನ - ಸಂಪುಟ ೨.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಕನಕ ಸಾಹಿತ್ಯ ದರ್ಶನ-೨ ವಿಗಳದೆಲ್ಲವು ನಿನ್ನ ನಾಮದಿ ಜಗದಿ ತೋರುತ್ತಿಹುದು ರಕ್ಷಿಸು ನಮ್ಮನನವರತ ೮೪। ಹೂಡಿದೆಲು ಮರಮುಟ್ಟು ಮಾಂಸದ ಗೋಡೆ ಚರ್ಮದ ಹೊದಿಕೆ ನರವಿನ ಕೂಡೆ ಹಿಂಡಿಗೆ ಬಿಗಿದ ಮನೆಯೊಳಗಾತ್ಮ ನೀನಿರಲು ಬೀಡು ತೊಲಗಿದ ಬಳಿಕಲಾ ಸುಡು ಗಾಡಿನಲಿ ಬೆಂದುರಿವ ಕೊಂಪೆಯ ನೋಡಿ ನಂಬಿರಬಹುದೆ ರಕ್ಷಿಸು ನಮ್ಮನನವರತ (೮೫) ಬೀಗ ಮುದ್ರೆಗಳಿಲ್ಲದೂರಿಗೆ ಬಾಗಿಲುಗಳೊಂಬತ್ತು ಹಗಲಿರು ಳಾಗಿ ಮುಚ್ಚದೆ ತೆರೆದಿಹುದು ಜೀವಾತ್ಮ ತಾನಿರುತ ನೀಗಿಯೆಲ್ಲವ ಬಿಸುಟು ಬೇಗದಿ ಹೋಗುತಿಹ ಸಮಯದಲಿ ಇವರವ ರಾಗಬಲ್ಲರೆ ನೀನೆ ರಕ್ಷಿಸು ನಮ್ಮನನವರತ (೮೬) ಕೀಲು ಬಲಿದಿಹುದೈದು ತಿರುಗುವ ಗಾಲಿಯೆರಡರ ರಥದಿ ಗುಣ ಶೀಲನೊರ್ವನು ಸಂಚರಿಸುತಿಹನಾ ರಥಾಗ್ರದಲಿ ಕೀಲು ಕಡೆಗೊಂದುಡಿದು ಬೀಳಲು ಕಾಲಗತಿ ತಪ್ಪುವುದು ಅದರನು ಕೂಲ ನಿನ್ನೊಳಗಿಹುದು ರಕ್ಷಿಸು ನಮ್ಮನನವರತ ೮೭ ಉಗುವ ರಕುತದ ರೋಮಕೂಪದ ತೊಗಲ ಕೋಟೆಯ ನಂಬಿ ರೋಗಾ ದಿಗಳ ಮುತ್ತಿಗೆ ಬಲಿದು ಜೀವನ ಪಿಡಿಯಲನುವಾಯ್ತು ವಿಗಡ ಯಮನಾಳುಗಳು ಬರುತಿರೆ