ವಿಷಯಕ್ಕೆ ಹೋಗು

ಪುಟ:ಕನಕಲತಾಪರಿಣಯ ನಾಟಕಂ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(ii) ಹೋಗಬೇಕೆಂದು ಬಂದಿದ್ದ ಮಮಿತಿಷ್ಯರು ಕನಕಲತೆಯನ್ನು ತೀರಕ್ಕೆ ಕರೆ ತಂದು ತಮ್ಮ ಆಶ್ರಮಕ್ಕೆ ಕರೆದುಕೊಂಡು ಹೋದರು. ೫ ನೆಯ ಅಂಕಂ-ಚಂಡವಿಕ್ರಮನ ಕಡೆಯವನಾದ ಒಬ್ಬ ಕಂಚು ಕಿಯು ಸ್ವಯಂಪ್ರಭೆಯನ್ನೂ ಅವಳ ಪರಿವಾರವನ್ನೂ ಸೆರೆಯಿಂದ ಬಿಡಿಸಲು ಸ್ವಯಂಪ್ರಭೆಯ ಮಂತ್ರಿಯು ಮಾಲಿನಿಗೆ ಮರಣದಂಡನೆಯನ್ನು ವಿಧಿಸಿ ದಸು. ಸ್ವಯಂಪ್ರಭೆಯು ಕಂಚುಕಿಯೊಡನೆ ಕನಕಲತೆಯನ್ನು ನೋಡ ಬೇಕೆಂದು ಹೊರಟು ಬರುತ್ತಾ ದಾರಿಯಲ್ಲಿದ್ದ ಮುಷ್ಯಾಶ್ರಮವನ್ನು ಪ್ರ ವೇತಿಸಿದಳು. ವಿಕ ಮಸಿಂಹನೂ ಕನಕಲತೆಯನ್ನು ಹುಡುಕಿಕೊಂಡು ಅಲ್ಲಿಗೆ ಬರಲು ಆ ಋಷಿಯು ತನ್ನ ಬಳಿಯಲ್ಲಿದ್ದ ಕನಕಲತೆಯ ಸಂಗತಿ ಯನ್ನು ಅವರಿಗೆ ತಿಳಿಸಿ ಕನಕಲತಾ ವಿಕ್ರಮಸಿಂಹರಿಗೆ ಮದುವೆ ಮಾಡಿಸಿ ದನು. ಮಧೂಲಕನ ಮಿತ್ರರಿಬ್ಬರೂ ಮಧೂಲಕನನ್ನು ಹುಡುಕುತ್ತಿರು ವಾಗ ಅವನು ಒಂದು ಕಾಡಿನಲ್ಲಿ ಅಲೆಯುತ್ತಿದ್ದುದನ್ನು ಕಂಡು ಅವನನ್ನು ವಿಕ್ರಮನಿಂಹನ ಕೈಯಿಂದಲೇ ಕೊಲ್ಲಿಸಬೇಕೆಂದು ಹಿಡಿದು ತರುತ್ತಿರು ವಾಗ ವಿಕ್ರಮನಿಂಹನ ಮದುವೆಗಾಗಿ ಹೋಗಿದ್ದ ಬ್ರಾಹ್ಮಣರನ್ನು ಕಂಡು ಅವರಿಂದ ವಿಕ್ರಮನಿಂಹನ ವಿಷಯವನ್ನು ತಿಳಿದುಕೊಂಡು ಮಧೂಲಕ ನನ್ನು ಪ್ರಾಶನಕ್ಕೆ ಎಳೆದುಕೊಂಡು ಹೋದರು. ಋಷಿಯು ಮಧ ಲಕನು ಪಶ್ಚಾತಾಪಪಡುತ್ತಿರುವುದನ್ನು ಕಂಡು ಅವನ ಅಪರಾಧವನ್ನು ಕ್ಷಮಿಸುವಂತೆ ವಿಕ್ರಮನಿಂಹನಿಗೆ ಹೇಳಿ ಮಧಲಕನಿಗೆ ಸನ್ಯಾಸವನ್ನು ಕೊಡಿಸಿದುದಲ್ಲದೆ ಮಧೂಲಕನ ಮಿತ್ರರಿಗೆ ಕನಕಲತೆಯ ಸಖಿಯರನ್ನು ಕೊಡಿಸಿ ಮದುವೆ ಮಾಡಿಸಿದನು. .