ಪುಟ:ಕನ್ನಡದ ಬಾವುಟ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

+ ಸತ್ಯವೇ ನಮ್ಮ ತಾಯಿ ತಂದೆ ಸತ್ಯವೇ ನಮ್ಮ ಸರ್ವ ಬಳಗ ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ಕೊಂದು ತಿನ್ನು ವೆನೆಂಬ ಹುಲಿಗೆ ಚೆಂದದಿಂದ ಭಾಷೆಯಿತ್ತು, ಕಂದ ನಿನ್ನನು ನೋಡಿ ಹೋಗುವೆ ನೆಂದು ಬಂದೆನು ದೊಡ್ಡಿಗೆ - ಅಮ್ಮ ನೀನು ಸಾಯಲೇಕೆ ನನ್ನ ತಬ್ಬಲಿ ಮಾಡಲೇಕೆ ಸುನ್ನ ನಿಲ್ಲಿಯೆ ನಿಲ್ಲೆನುತ ಅಮ್ಮನಿಗೆ ಕರು ಹೇಳಲು ಕೊಟ್ಟ ಭಾಷೆಗೆ ತಪ್ಪಲಾರೆನು ಕೆಟ್ಟ ಯೋಚನೆ ಮಾಡಲಾರೆನು ನಿಷೆ ಯಿಂದಲಿ ಪೋಪೆನಲ್ಲಿಗೆ ಕಟ್ಟಕಡೆಗಿದು ಖಂಡಿತ ಆರ ಮೊಲೆಯನು ಕುಡಿಯಲಮ್ಮ ಆರ ಸೇರಿ ಬದುಕಲಮ್ಮ ಆರ ಬಳಿಯಲಿ ಮಲಗಲಮ್ಮ ಆರು ನನಗೆ ಹಿತವರು ಅಮ್ಮಗಳಿರ ಅಕ್ಕಗಳಿರ ನಮ್ಮ ತಾಯೊಡಹುಟ್ಟುಗಳಿರ ನಿಮ್ಮ ಕಂದನೆಂದು ಕಾಣಿರಿ ತಬ್ಬಲಿಯನೀ ಕರುವನು ಮುಂದೆ ಬಂದರೆ ಹಾಯಬೇಡಿ ಹಿಂದೆ ಬಂದರೆ ಒದೆಯಬೇಡಿ ಕಂದ ನಿಮ್ಮವನೆಂದು ಕಾಣಿರಿ ತಬ್ಬಲಿಯನೀ ಕರುವನು