ಪುಟ:ಕನ್ನಡದ ಬಾವುಟ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೭ ದೇಗುಲವು ಭಕ್ತರಿಗೆ, ಉಪವನವು ರಸಿಕರಿಗೆ, ಲೌಕಿಕರಿಗಿದು ಸಗ್ಗ ವೈದಿಕರಿಗಿದು ಮುಕ್ತಿ ಲಲಿತಗಿರಿಯು ! ಕೆ. ವಿ. ಪುಟ್ಟಪ್ಪ ೨೭. ಲಾಲ್‌ಬಾಗ್ ಕೆಂಪುವೂ ಸಾಲ್ಮರನ ದಾರಿಯಲಿ ನಡೆ ನಡೆದು ಕೆಂಪು ತೋಟಕೆ ಬನ್ನಿ ವಿಶ್ರಾಂತಿಗೆ ; ಒಮ್ಮೆಗೇ ಕಾಣುವುವು ಬಿಳಿ ಹಸುರು ಕೆಂಪುಗಳು ಕಣ್ಣ ರಂಜಿಸಿ ಕೊಳುವ ಎಲ್ಲ ರಂಗುಗಳು. ಎಲ್ಲೆಲ್ಲು ತಳಿರು ಹೂ ಎಲ್ಲೆಲ್ಲು ಹಸುರುಗಳು ಹಸುರು ಹೊಂಗೆಂಪುಗಳ ಮೇಲಾಟವು ಮರದ ಇಂಬಿಗೆ ಬಾಗಿ ಬಳುಕುತಿರುವೆಳಲತೆಯು ತಳಿರ ತೂಗುಯ್ಯಾಲೆ ಹೂ ತೊಂಗಲು. ನಾ ಮುಂದೆ ತಾ ಮುಂದೆ ಎಂಬ ಆತುರದಿಂದ ಹೋದ ತಿಂಗಳೆ ತೋಟ ಚಿಗುರಿಟ್ಟಿತು;ನಾವು ಹೊಂಗೆಯು ಬೇವು ಮಾಧವೀಲತೆ ಬೇಲ - ದೂರದೇಶದ ಸುಳಿಯ ನೂರು ಜಾತಿಗಳು, ಒಂದೊಂದೆ ಸೊಗವೆತ್ತಿ ತಂಪೆ ಚಿಗುರಿದುವು ಬರಲು ಕೊಂಬೆಗಳೆಲ್ಲ ಹಸುರುಟ್ಟವು ತಳಿರ ಮೈ ಯನು ತೆರೆದು ನಿನ್ನೆ ಕಾಣಿಸುತಿದ್ದ ಈ ಮರನು ಮೈ ತುಂಬ ಅರಳಿರುವುದುಅಡಿಯಿಂದ ತುದಿವರೆಗು ಎಲೆಯೆ ಕಾಣಿಸದಂತೆ ಕಿಕ್ಕಿರಿವ ಹೂವಿನಲಿ ನಗುತಲಿಹುದು ; ಒಂದು ರಾತ್ರಿಯ ಸುಖದ ಸದನದಲಿ ಲಲ್ಲೆ ಯಲಿ ಬಂದ ಪುಳಕಗಳಿದನು ಬಿರಿಯಿಸಿಹವು. ನೆಲದ ಆಳದಲೆಲ್ಲೊ ಒಡಲಿನಾಳದಲೆಲ್ಲೊ ಕಾಣದೆಡೆಯಲಿ ಹುದುಗಿ ಕಾಪಾಡಿದ ತಂಪನ್ನು ಕಂಪನ್ನು ಜೀವವನು ರಸವನ್ನು ಕೊಂಬೆ ಕೊಂಬೆಗು ಇಡಿದು ಅರಳಿಸಿಹುದು.