ಪುಟ:ಕನ್ನಡದ ಬಾವುಟ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೦ ಏಳು, ವಾಣಿ, ವೀಣೆದಾಳು, ಅಮೃತವಾಣಿಯಿಂದ ಹೇಳು ಪುಣ್ಯದರಸು, ಧರದಾಳು, ದೊರೆಯ ಕೃಷ್ಣನ. ಹೊನ್ನು ನಡೆಯ, ಹೊನ್ನು ನುಡಿಯ, ಕನ್ನಡಿಗರ ವಯಿರಮುಡಿಯ, ಒಡೆಯ ಕೃಷ್ಣನ. ಏನು ಲಲಿತಾದ್ರಿಯಲ್ಲಿ ಬೆಳಕುಗಳುಷೆಗೆ ಕಾಂತಿಯನೀವುವು ? ಮೇಲಕೇರುವ ಬೆಳಕದಾವುದು ? ಇಳಿವ ಬೆಳಕುಗಳಾವುವು ? ಆವ ದೇವಿಯರಿವರು ಮೂವರು ? - ಕನ್ನಡದ ಸಿರಿಯೊಬ್ಬಳು. ಅಕ್ಕತಂಗಿಯರಂತೆ ತಬ್ಬುತ, ಕಡಲ ರಾಣಿಯದೊಬ್ಬಳು, ಶ್ರೀ ಭರತಮಾತೆಯರೊಬ್ಬಳು : ತನ್ನ ಮಕ್ಕಳ ಬೀರಗನಸುಗಳುಬ್ಬುತಿರೆ ನಸುನಗುವಳು ; ಭರತಮಾತೆ ! ಪ್ರೇಮಮಾತೆ ! ಮಹಿಮೆಯಲಿ ಕಳೆ ಮಿಗುವಳು. ಗೌರಿಯೋಲಗದಿಂದ ಬಂದಳು, ಪೂರ್ಣಕುಂಭವ ತಂದಳು ; ದೂರ ವಿನಯದಿ ನಿಂದ ಕನ್ನಡ ಹೆಣ್ಣ ಬಳಿಯಲಿ ನಿಂದಳು ; ಕಳಶವಿತಿ,ಂತೆಂದಳು44 ಬಾಳು, ಕನ್ನ ಡದರಸಿ, `ಗೌರಿಯ ಕೃಪೆಯ ಸುಧೆಯನು ಚೆಲ್ಲಿಸು. ಕೃಷ್ಣರಾಜನ ಕೀರ್ತಿ ಹಬ್ಬಿದ ಚೆಲುವು ನಾಡನು ಗೆಲ್ಲಿಸು. ಕೃಷ್ಣರಾಜನ ಸಿರಿಯ ಮುಡಿಯಲಿ ಸಕಲ ಭಾಗ್ಯವ ಸಲ್ಲಿಸು. ತನ್ನ ಬಾಳನು ನಾಡ ಮೇಲೆಗೆ ಮುಡಿಪು ಕಟ್ಟಿದ ಧೀರನು. ತನ್ನ ಗುರಿಯನು ಬಿಡದೆ ಕೊಳುವನು, ಆತ್ಮಗುಣದಲಿ ವೀರನು. ಹೋಗು, ಸೊಬಗಿಯೆ, ಬಾಳು ?' - ಎಂದಳು. ಬಳಿಯ ಕೆಳದಿಯ ಕೈಯ ಕೊಂಡಳು ; ಮುಗಿಲ ಮರೆಯಲಿ ಸಂದಳು. ಮಂಗಳ ಮಸಗಿತು ಮೈಸೂರರಮನೆ; ಸಿ೦ಗರವಾಯಿತು ಮೈಸೂರು. ಕೃಷ್ಣನ ವೈಭವವೆಲ್ಲವ ತೋರುವ, ಸಾರುವ ಮಾರುವ ಮೈಸೂರು, ನಾಲ್ಮಡಿ ಕೃಷ್ಣನ ಮೈಸೂರು.