ಪುಟ:ಕನ್ನಡದ ಬಾವುಟ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫೨ ಚೆಲುವೆಯರ, ಚೆನ್ನಿ ಗರ, ಹಿರಿಯ ತಾಯಮ್ಮಕ್ಕಳಿರ, ಒಡಹುಟ್ಟಿದವರಾ, ಒಸಗೆನುಡಿ ಕೇಳಿದಿರ, ತಾಳಿದಿರ ಎದೆಯಲ್ಲಿ, ತಾಳಿ ಬಾಳುವಿರಾ, ನಾಡು ನುಡಿ ನಡೆಗಳನು ಮನ್ನಡಗೆ ನಡಸುತ್ತ, ಮುಂದೆ ಸಾಗುವಿರಾ? ಭಾರತದ, ಲೋಕದಾ ಮಕ್ಕಳಲ್ಲಿ ಹಿರಿದಾಗಿ ತೂಕ ತೂಗುವಿರಾ? ಬನ್ನಿ, ಓ ಮಕ್ಕಳಿರ, ಒಕ್ಕೊರಲಿಲ್ಲರೂ ಕೂಗಿ ಈ ಒಕ್ಕೂಗ- ಈ ಹಿರಿಯ ಕೂಗ* ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಗೆಲ್ಗೆ, ಬಾಳೆ - ಕನ್ನಡದ ತಾಯ್ ಗೆಲ್ಗೆ, ಬಾಳೆ,?