x
ಜಕ್ಕಣ, ಹೊನ್ನಮ್ಮ, ನಮ್ಮಮ್ಮನೆಳೆಯರು,
ಚೆಲುವ ಚೆಲುವೆಯರು-ಚಿನ್ನದ ಚಿಣ್ಣರು,
ಕಲಿಗಳು, ಕಿಡಿಗಳು, ಗ೦ಡರು, ಮೊಂಡರು,
ನಲಿದೊಲಿದು ಬೆಚ್ಚೊಂದು ನೆಚ್ಚಿ೦ಗೆ ಮೆಚ್ಚಿಂಗೆ
ಕಿಚ್‌ಚಿನಲಿ ಹೇಯ್‌ದು ನಲ್‌ಲನ ಹಿಡಿದ ಹೆಂಡಿರು,
ಸತಿಗಳು, ಯತಿಗಳು, ವ್ರತಿಗಳು, ಕೃತಿಗಳು-
ಕನ್‌ನಡದ ಬಾವುಟವ ಹಿಡಿದವರಾರು ?
ಕನ್‌ನಡದ ಬಾವುಟಕೆ ಮಡಿಯದವರಾರು ?
ನಮ್‌ಮ ಈ ಬಾವುಟಕೆ ಮಿಡಿಯದವರಾರುರು ?
ಹೇಳಿರೋ ಹೆಸರೊಂದು ನೆನಹಿನಲಿ ಸುಳಿದರೆ !
ಹುಡುಕಿರೋ ಹೇಡಿ ತಾನೊಬ್ಬ ಮನೆಗುಳಿದರೆ !
ಕನ್‌ನಡದ ನಾಡಲಾ,
ಕನ್‌ನಡದ ನುಡಿಯಲಾ,
ಕನ್‌ನಡಿಗನೆದೆ ಕಡೆದ ತೆನೆಯಲಾ ಕೆನೆಯಲಾ !
ಬೆಳಕು ಹರಿಯಿತು, ಏಳಿ,
ಇರುಳು ಸವೆಯಿತು ಏಳಿ,
ತಾಯ ಕರೆ ಕೇಳಿ,
ಏಳಿರೋ, ಏಳಿರೋ, ಬಾ ಳ ಬಲಿ ಬೇಳಿರೋ,
ಎಲ್ಲೊಲುಮೆಯೂ ಕೂಡಿದೊಂದೊಲುಮೆ ತಾಳಿರೋ,
ತಾಯುಳಿಯೆ ನೇನುಳಿದೆ,
ತಾಯಳಿಯೆ ನೇನಳಿದೆ,
ಮನೆ ಕಾಯಿ, ತುರು ಕಾಯಿ, ನಾಡ ಗುಡಿ ಗ ಕಾಯಿ,
ಕಾಯಲಾರೆಯ, ಸಾಯಿ,
ಎಂದೆಲ್‌ಲ ಏಳಿರೋ-
ಆಹ ಕನ್‌ನಡ ನುಡಿ, ಆಹ ಕನ್‌ನಡ ನೇಡು,
ಹಿರಿಯ ಕನ್ನಡ ಪಡೆ, ಮರಿಯ ಕನ್‌ನಡ ಪಡೆ,
ಏಳಿರೋ, ಬೀಳಿರೋ,
ಕನ್‌ನಡದ ಬಾವುಟವ ಹಿಡಿಯಿರೋ, ನಡೆಯಿರೋ !
ಏಳ್ ಕನ್‌ನಡ ತಾಯ್,
ಬಾಳ್ ಕನ್‌ನಡ ತಾಯ್,
ಆಳ್ ಕನ್ನಡ ತಾಯ್,
ಕನ್‌ನಡಿಗರೊಡತಿ, ಓ ರಾಜೇಶ್‌ವರೀ !