ಪುಟ:ಕನ್ನಡದ ಬಾವುಟ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೮ ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ ನಿಂದೆಯಲಿ ನೊಂದೆನೈ ನೀರಜಾಕ್ಷ ತಂದೆತಾಯಿಯು ನೀನೆ ಬಂಧು ಬಳಗವು ನೀನೆ ಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣ ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ ಎಣಿಸಲಾರದ ಭವದಿ ನೊ೦ದೆ ನಾನು ಸನಕಾದಿಮುನಿವಂದ್ಯ ವನಜಸಂಭವನ ಪಿತ ಫಣಿಶಾಯಿ ಪ್ರಹ್ಲಾದವರದ ಶ್ರೀಕೃಷ್ಣ ಭಕ್ತವತ್ಸಲನೆಂಬೊ ಬಿರುದು ಪೊತ್ಯಮೇಲೆ ಭಕ್ತರಾಧೀನನಾಗಿರಬೇಡವೆ ಮುಕ್ತಿದಾಯಕ ದೇವ ಪುರಂದರವಿಠಲನೆ ಶಕ್ತ ನೀನಹುದೆಂದು ನಂಬಿದೆನೋ ಕೃಷ್ಣ (viii) ಅನುಭವದಡಿಗೆಯ ಮಾಡಿ ಅದ ಹೈನುಭವಿಗಳು ಬಂದು ನೀವೆಲ್ಲ ಕೂಡಿ || ಪ | ತನುವೆಂಬ ಭಾಂಡವ ತೊಳೆದು ಕೆಟ್ಟ, ಮನದ ಚಂಚಲವೆಂಬ ಮುಸುರೆಯ ಕಳೆದು ಘನವಾಗಿ ಮನೆಯನ್ನು ಬಳಿದು ಅಲ್ಲಿ ಮಿನುಗುವ ತ್ರಿಗುಣದ ಒಲೆಗುಂಡನೆಡೆದು ವಿರಕ್ತಿಯೆಂಬೋ ಮಡಿಯುಟ್ಟು ಪೂರ್ಣ ಹರಿಭಕ್ತಿಯೆಂಬ ನೀರನ್ನೆ ಸರಿಟ್ಟು ಅರಿವೆಂಬ ಬೆಂಕಿಯ ಕೊಟ್ಟು ಮಾಯಾ ಮರವೆಂಬ ಕಾಷ್ಠವ ಮುದದಿಂದ ಸುಟ್ಟು ಕರುಣೆಯೆಂಬೊ ಸಾಮಗ್ರಿ ಹೂಡಿ ಮೋಕ್ಷ ಪರಿಕರವಾದಂಥ ಪಾಕವ ಮಾಡಿ ಗುರು ಶರಣರು ಸವಿದಾಡಿ ನಮ್ಮ ಪುರಂದರವಿಠಲನ ಬಿಡದೆ ಕೊಂಡಾಡಿ (ix) ಎನಗೂ ಆಣೆ ರಂಗ ನಿನಗೂ ಆಣೆ ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ | ಪ ||