ಗಿದ್ದಿತು. ಅವರ ಈ ಕಾವ್ಯವು ಪೂರಿ ಯಾಗುವ ಪೂರದಲ್ಲಿಯೇ ಭಗವಂತನು ತನ್ನ ಪ್ರೇಷಿತನನ್ನು ತನ್ನೆಡೆ ಮರಳಿ ಕರೆದೊಯ್ದನು. ಶ್ರೀ ಗುರುದೇವರು ಅಕಸ್ಮಾತ್ತಾಗಿ ಕ್ರಿ.ಶ. ೧೯೫೭ ಜೂನ್ ೬ನೆಯ ದಿನ ಸಮಾಧಿಸ್ಥರಾದರು. ಅದರ ಮೂಲಕ ಅವರು ಉಪನ್ಯಾಸಗಳನ್ನು ಕೊಡುವದು ಸಾಧ್ಯವಾಗಲಿಲ್ಲ. ಕೊನೆಯ ೬ ಉಪನ್ಯಾಸಗಳು ಬಹಳ ಬೆಲೆಯುಳ್ಳ ವಿಷಯಗಳನ್ನು ಒಳಗೊಂಡಿದ್ದು ವು. ಅವರ ನಿಧನದಿಂದ ಕರ್ನಾಟಕವು ಇಂಥ ವಿಷಯವನ್ನು ಕುರಿತ ಅವರ ವಿಶದೀ ಕರಣವನ್ನು ಅರಿಯುವ ಸುಸಂಧಿಗೆ ಎರವಾಯಿತು. ಕನ್ನಡ ಸಂತರ ಹಿರಿಮೆಯು ಜಗತ್ತಿನಲ್ಲೆಲ್ಲ ಹರಡಬೇಕೆಂದು ಉಪನ್ಯಾಸಗಳು ಆಂಗ್ಲ ಭಾಷೆಯಲ್ಲಿ ಕೊಡಲಾ ದವು. ಗ್ರಂಥವೂ ಅದೇ ಭಾಷೆಯಲ್ಲಿ ರಚಿಸಲ್ಪಟ್ಟಿತು. ಇದು ಈ ಗ್ರಂಥದ ಸಿದ್ಧತೆಯ ಕಿರುಪರಿಚಯ. ಶ್ರೀ ಪ್ರಸ್ತುತ ಗ್ರಂಥವಾದ 'ಪರಮಾರ್ಥ ಸೋಪಾನ'ವು ಮೇಲ್ಕಾಣಿಸಿದ ಗುರುದೇವರ 'ಪರಮಾರ್ಥಪಥ'ದ ಆಧಾರಗ್ರಂಥವು. ಇದರಲ್ಲಿ ಶ್ರೀ ಗುರುದೇವರು ೫೨ ಸಂತ ಕವಿಗಳಿಂದ ಆಯ್ದ ೧೩೯ ಪದ-ವಚನಗಳನ್ನು ೧೯ ಪ್ರಕರಣಗಳಲ್ಲಿ ವಿಂಗಡಿಸಿ ಸಂಗ್ರಹಿಸಲಾಗಿದೆ. ಮೊದಲನೆಯದು ಪೀಠಿಕಾ ಪ್ರಕರಣವು, ಅದರಲ್ಲಿ 'ಪರಮಾರ್ಥಿಕ ಪಥ'ದ 'ದಾರ್ಶನಿಕ' ಪೀಠಿಕೆಯ ಸಾರ- ವನ್ನು ಕೊಡಲಾಗಿದೆ. ಈ ೨೦ ಪ್ರಕರಣಗಳ ಕ್ರಮವು ಮೇಲ್ಕಾಣಿಸಿದ ಆಂಗ್ಲ ಗ್ರಂಥದ ಕ್ರಮವನ್ನು ಅನುಸರಿಸುವದು ಪ್ರತಿಯೊಂದು ಪ್ರಕರಣದಲ್ಲಿ ಸುಮಾರು ೭ ರಿಂದ ೯ ಪದಗಳು ಬಂದಿರುವವು. ಪ್ರತಿಯೊಂದು ಪದಕ್ಕೂ ವಚನಕ್ಕೂ-ಶ್ರೀ ಗುರುದೇವರು ಒಂದು ಆಂಗ್ಲ ಶೀರ್ಷಿಕೆಯನ್ನು ಕೊಟ್ಟರು ವರು. ಅವುಗಳ ಭಾವಾನುವಾದವನ್ನು ಅವುಗಳ ಮೇಲ್ಬಾಗದಲ್ಲಿ ಮುದ್ರಿಸಲಾ ಗಿದೆ. ಮೂಲ ಆಂಗ್ಲ ಶೀರ್ಷಿಕೆಗಳನ್ನು ಗ್ರಂಥದ ಅನುಬಂಧವೊಂದಕ್ಕೆ ಕೊಡ ಲಾಗಿದೆ. ಈ ಪದ ವಚನಗಳಿಗೆ ಶ್ರೀ ಗುರುದೇವರು ಕೆಲ ಟಿಪ್ಪಣಿಗಳನ್ನು ಆಂಗ್ಲ ಭಾಷೆಯಲ್ಲಿ ಬರೆದಿರುವರು. ಅವನ್ನು ಅನುಬಂಧದ ಮೊದಲು ಸೇರಿಸಲಾಗಿದೆ. ಈ ರೀತಿ ಈ ಪರಮಾರ್ಥ ಸೋಪಾನವು ಆಂಗ್ಲ ಹಾಗೂ ಕನ್ನಡ ಗ್ರಂಥದ ಓದುಗರಿಗೆ ಉಪಯುಕ್ತವಾಗುವಂತೆ ರಚಿಸಲಾಗಿದೆ. - ಇದು ಆಧಾರಗ್ರಂಥವಾದುದರಿಂದ ಇದರ ರಚನಾಕ್ರಮವು ಮೂಲಗ್ರಂಥದ ರಚನಾಕ್ರಮವನ್ನು ಅನುಸರಿಸಿರುವದು ತೀರ ಸಹಜ. ಆದುದರಿಂದ ಆ ಕ್ರಮ ವನ್ನೂ ಅದರ ತಿರುಳನ್ನೂ ಸಾಧ್ಯವಿದ್ದ ಮೇರೆಗೆ ಶ್ರೀ ಗುರುದೇವರ ಮಾತಿ ನಲ್ಲಿಯೇ ಅರುಹಿ ವಿವರಿಸುವೆ. “ಮೊದಲನೆಯ ದಾರ್ಶನಿಕ ಪೀಠಿಕೆಯಲ್ಲಿ ಜ್ಞಾನಶಾಸ್ತ್ರ, ಮನಃಶಾಸ್ತ್ರ ಹಾಗೂ ಪರತತ್ತ್ವಶಾಸ್ತ್ರಗಳ ದೃಷ್ಟಿಯಿಂದ ಅನುಭಾವದ ಲಕ್ಷಣಗಳನ್ನು ಕೊಡ ಲಾಗಿದೆ ಮತ್ತು ಅವುಗಳ ನೆರವಿನಿಂದ ಪೂರ್ವ ಪಶ್ಚಿಮಗಳ ಹಿರಿಯ ದಾರ್ಶ
ಪುಟ:ಕನ್ನಡ ಪರಮಾರ್ಥ ಸೋಪಾನ.pdf/೧೭
ಗೋಚರ