ವಿಷಯಕ್ಕೆ ಹೋಗು

ಪುಟ:ಕನ್ನಡ ರಾಮಾಯಣ ಕಿಷ್ಕಿಂಧಾಕಾಂಡ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಿ ೩ ೦ ಧಾ ಕ೦ಡ೦೩ ನೇ ಅ ಧ ಯ . ೧೦ ಕೊಂಡು ನಾವು ಯಾವ ಕಾರೈವನ್ನಾದರು ಸಾಧನಮಾಡಬೇಕಲ್ಲದೆ ನಿನ್ನನ್ನು ಕಳುಹಿಸಿ ನಾವು ಸುಮ್ಮನಿರುವದು ಸರ್ವಥಾ ಕಾರವಲ್ಲ ; ಲೋಕದಲ್ಲಿ ಬೇರಿಗೆ ನೀರೆರದು ಜತನಮಾಡಿಕೊಂಡರೆ ಸಮಸ್ತ ಫಲಪುಪ್ಪಗಳ ಉa ಟಾಗುವವು ; ಆ ಮರಾದೆಯಲ್ಲಿ ನೀನು ಈ ಕಾರಕ್ಕೆ ಸಾಧಕನು ; ಅದಲ್ಲದೆ ನೀನು ರಾಜಪುತ್ರನು; ನಮಗೆಲ್ಲರಿ ಗೂ ಒಡೆಯನು ; ನಿನ್ನ ಸಾಮರ್ಥ್ಯದಿಂದ ನಾವು ಕಾಲ್ಬಸಾಧನೆ ಮಾಡಬೇಕಲ್ಲದೆ ಮತ್ತೊಂದಲ್ಲ” ಅಂದನು. ಆ ಮಾತನ್ನು ಕೇಳಿ ಅಂಗದನು ಪ್ರತ್ಯುತ್ತರವನ್ನು ಕೊಡುತ “ ಎಳ್ಳೆ ಜಾಂಬವಂತನೆ, ನಾನೂ ಹೋಗದೇ ಉಳಿದವರೂ ಹೋಗದೇ ಕಾರವಿಳಂಬವಾದಪಕ್ಷದಲ್ಲಿ ನಮಗೆಲ್ಲರಿಗೂ ಮೊದಲಮಾಲೆಯಲ್ಲಿ ಪ್ರಾಯೋಪವೇಶವೇ ಗತಿಯಲ್ಲದೆ ಕಾರಂತರವಿಲ್ಲ; ನಾವು ಈ ಕಾರವನ್ನು ಸಾಧ್ಯವಾಗದೆ ಸುಗ್ರೀವನ ಸಮೀಪಕ್ಕೆ ಹೋದರೆ ನಮ್ಮ ಪ್ರಣಗಳು ಉಳಿಯುವದಕ್ಕಿ; ಈ ಕಾರ್ಯಕ್ಕೆ ಸಮುದ್ರವನ್ನು ದಾಟುವದುಹೊರ್ತಾಗಿ ಮತ್ತೊಂದು ಸಾಧ ನಾಂತರವಿಲ್ಲ; ನೀನು ಸರ್ವಜ್ಞನ ; ನೀನೇ ಈ ಕಾರ್ಯಕ್ಕೆ ತಕ್ಕ ಯೋಚನೆಯನ್ನು ಕಾಣಬೇಕು ” ಎಂದು ನುಡಿದನು. ಆ ಮಾತನ್ನು ಕೇಳಿ ಜಾಂಬವಂತನು ಅಂಗದನನ್ನು ಕುರಿತು “ ಎಲೈ ಅಂಗದಕುಮಾರನೆ, ನಿನ್ನ ಕಾರೈಕ್ಕೆ "ಹ್ಯಾಗಾದರೂ ಹಾನಿಯಿಲ್ಲ; ಈ ಕಾರ್ಯವನ್ನು ಸಾಧ್ಯವಾಡಿಕೊಡುವ ಸಾಮರ್ಥ್ಯವುಳ್ಳವನನ್ನು ಹೇಳುತ್ತೇನೆ ಕೇಳು ; ಕಪಿನಾಯಕನಾದ ಹನುಮಂತನು ಮನದಲ್ಲಿ ನಿಶ್ಚಿಂತನಾಗಿ ಕುಳಿತುಕೊಂಡಿದ್ದಾನೆ; ಈತನು ಈ ಕಾರ್ ವನ ಸಾಧ್ಯ ಮಾಡುವದಕ್ಕೆ ಸಮರ್ಥನು” ಎಂದು ನುಡಿದನು. ನೇ ಅಧ್ಯಾಯ - ಜಾ೦ಬ ನ೦ ತ ನ ಹ ನು ಮ೦ ತ ನ ನ್ನು ಸ ಮ ದ ನ ನ್ನು ದಾಟಿ ಬೆ ಕ ೦ ದು ಪ ಥಿ ೯ ಸಿ ದ್ದು , ಆ ಬಳಕ ಜಾಂಬವಂತನು ಅಂತ ಕಂಗೆಟ್ಟಿದ್ದ ಕಪಿಸೇನೆಯನ್ನು ನೋಡಿ ಹನುಮಂತನನ್ನು ಕುರಿತು ' ಎಲೆ ಹನುಮಂತನೆ, ನೀನು ಮಹಾ ಪರಾಕ್ರಮಿಯಾದವನು ; ಸಕಲ ಶಸ್ತಾರ್ಥರಹಸ್ಯವನ್ನು ಬಲ್ಲವನು; ನೀನು ನಿನ್ನ ಪರಾಕ್ರಮವನ್ನು ಹೇಳಿಕೊಳ್ಳದೆ ಯಾವಕಾರಣ ಸುಮ್ಮನಿದ್ದೀ! ನೀನು ಬಲದಲ್ಲಿ ಸುಗ್ರೀವನಿಗೆ ಸರಿಯಾದವನು ; ತೇಜಸ್ಸಿನಿಂದಲು ಕರೀರಬಲದಿಂದಲು ರಾಮಲಕ್ಷ್ಮಣರಿಗೆ ಸಮಾನನಾದವನು ; ಲೋಕದಲ್ಲಿ ವಿನತೆಯ ಮಗನಾದ ಗರುತ್ಮಂತನು ಮಹಾ ಬಲವಂತನು ; ಮಹಾ ಪ್ರಸಿದ್ದನು ; ಮಹಾ ಉತ್ತಮನು; ಸಮಸ್ತ ಪಕ್ಷಿಗಳಿಗೂ ಒಡೆಯ ನು; ಆತನು ಸಮುದ್ರವನ್ನು ದಾಟಿ ಹೋಗುವಾಗ ಆತನ ಗರಿಗಳ ಬಲವನ್ನು ಅನೇಕಬಾರಿ ನೋಡಿದ್ದೇನೆ ; ನಿನ್ನ ಬಲವು ಗರುತ್ಮಂತನ ಬಲಕ್ಕೆ ಸಮಾನವಾದಂಥಾದ್ದು ; ನಿನ್ನ ಪರಾಕ್ರಮವು ನಿನ್ನ ತೇಜಸ್ವ ಗರುತ್ಮಂತನ ತೇಜೋ ಬಲಗಳಿಗೆ ಕಡಿಮೆಯಾದವಲ್ಲ! ಎಳ್ಳೆ ಹನುಮಂತನೆ, ಸಮಸ್ತ ಪಾಣಿಗಳಲ್ಲಿಯೂ ನಿನ್ನ ತೇಜೋಬಲ ಶಕ್ತಿಗಳ ವೆಗ್ಗಳವಾದಂಥಾವು ; ಅಂಥಾ ನೀನು ನಿನ್ನ ಸಾಮರ್ಥ್ಯವನ್ನು ಹೇಳಿಕೊಳ್ಳದೆ ಯಾವಕಾರಣ ಸುಮ್ಮನಿದ್ದಿ ! ಪುಂ ಜಕಸ್ಥಳವೆಂಬ ಸ್ಥಳವಿಶೇಷದಲ್ಲಿದ್ದ ಅಂಜನಾದೇವಿಯು ಮಹಾ ಉತ್ತಮಳು ; ಮಹಾ ಪ್ರಸಿದ್ದಳು ; ಕೇಸರಿಯೆಂಬ ಕನಾಯಕನ ಪಟ್ಟದರಾಣಿಯು ; ರೂಪಲಾವಣ್ಯ ಸಾಂದರ್ಯಗಳಿಂದ ಲೋಕದಲ್ಲಿ ಯಾರೂ ಆಕೆಗೆ ಸರಿಯಾದವ ರಿಲ್ಲ ! ಆಕೆಯು ಮೊದಲು ಅದ್ಭರಯಾಗಿದ್ದು ಒಂದು ಕಾರಣದಿಂದ ಕಾಪವನ್ನು ಪಡೆದು ಕಪಿಸ್ಟರೂಪಿಯಾಗಿ ಕಾಮರೂಪಿಯಾಗಿ ಕುಂಜರನೆಂಬ ಕವಿನಾಯಕನ ಮಗಳಾಗಿ ಹುಟ್ಟಿ ಅಂಜನಾದೇವಿಯೆಂಬ ಹೆಸರಿನಿಂದ ಮನುಷ್ಯ ರೂಪವನ್ನು ತಾಳಿಕೊಂಡು ರೂಪಯಪ್ಪನಗಳಿಂದ ರಮಣೀಯವಾಗಿ ಬಿಳೀ ಪಟೇಶೀರೆಯನ್ನುಟ್ಟು ನಾನಾವಿಚಿ ತ್ರಗಳಾದ ಆಭರಣಗಳಿಂದ ಅನೇಕ ಪುಪಮಾಲಿಕೆಗಳಿಂದಲೂ ಅಲಂಕರಿಸಿಕೊಂಡು ನೀರುಂಡ ಕಾರ್ಮುಗಿಲಿಗೆ ಸಮಾನವಾದ ಪರ್ವತಾಗ್ರದಲ್ಲಿ ಸಂಚರಿಸುತ್ತಿದ್ದಳು ; ಒಂದು ಸಮಯದಲ್ಲಿ ವಾಯುದೇವನು ಆ ಸ್ತ್ರೀಯ ಕ್ರಮ ವರ್ತುಳವಾಗಿ ನುಣುಪಾಗಿ ಸೊಂಪಾಗಿ ನಿಬಿಡವಾಗಿದ್ದ ತೊಡೆಗಳನ್ನೂ ಕಠಿಣವಾಗಿ ಉನ್ನತವಾಗಿ ಬಟುವಾಗಿ ಇಟ್ಟ