ವಿಷಯಕ್ಕೆ ಹೋಗು

ಪುಟ:ಕನ್ನಡ ರಾಮಾಯಣ ಕಿಷ್ಕಿಂಧಾಕಾಂಡ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಿ ೩ ೦ ಧಾ ಕಾ ೦ ಡ V ನೇ ಅ ಧ್ಯಾ ಯ , L ಅಸ್ತಮಯಪರ್ವತದಿಂದ ಬಂದ ಸುವರ್ಣಕಾಂತಿಯ ಮರಾದೆಯಲ್ಲಿ ತಸುಕಾಂತಿಯುಳ್ಳ ಕಪಿಗಳು ಹತ್ತು ಕೋಟಿ ; ಕೈಲಾಸ ಪರ್ವತದಿಂದ ಬಂದ ಸಿಂಹದಮರಾದೆಯಲ್ಲಿ ಅತಿ ಬಲಪರಾಕ್ರಮವುಳ ಕಪಿಗಳು ಸಾವಿರಕೋಟಿ ; ಹಿಮವತ್ಪರ್ವತವನ್ನಾಶ್ರಯಿಸಿಕೊಂಡು ಕಂದಮೂಲ ಫಲಾಹಾರಿಮಾಡಿಕೊಂಡಿದ್ದ ಕಪಿಗಳು ಸಾವಿರಕೋಟಿ ; ವಿಂಧ್ಯಪರ್ವತದಿಂದ ಬಂದ ಯಜ್ಞಪುರುಷನ ಸಮಾನವಾದ ಕಪಿಗಳು ಒಂದು ಸಾವಿರ ಕೋಟಿ ; ಹೀರಸಮುದ್ರದ ತಡಿಯಲ್ಲಿರುವ ತಮಾಲವೆಂಬ ವನದಲ್ಲಿ ತೆಂಗಿನಕಾಯಿಗಳ ನೀರನ್ನೇ ಆಹಾರಮಾಡಿಕೊಂಡಿದ್ದ ಕಪಿಗಳು ಲೆಕ್ಕವಿಲ್ಲ ದವು ; ವನಗಳಿಂದಲೂ ಗುಹೆಗಳಿಂದಲೂ ನದೀತೀರಗಳಿಂದಲೂ ಬಂದ ಕಪಿಗಳ ಲೆಕ್ಕವಿಲ್ಲದವಾಗಿದ್ದವು ! ಈ ಮರಾ ದೆಯಲ್ಲಿ ಸೂರದಯದಲ್ಲಿ ಸೂರ್ಯಮಂಡಲವನ್ನೆ ಕಚಿದವೋ ಎಂಬಂತ ಕಪಿಸೇನೆಯು ಬರುತ್ತಿದ್ದವು ! ಆ ಕಪಿಗಳನ್ನು ಕರೆತರುವದಕ್ಕೆ ಕಿ೩ ೦ಧಾಪಟ್ಟಣದಿಂದ ಹೋದ ಕೆಪಿನಾಯಕರು ಮಹತ್ತಾದ ವನಗಳ ಹಿಮವ ಪ್ರರ್ವತವನ್ನು ಕಂಡರು ; ಅಲ್ಲಿ ಯಜ್ಞನೆಂಬ ಒಬ್ಬ ವುನೀಶ್ವರನಿರುತಿದ್ದನು ; ಆತನು ಸಮಸ್ತ ದೇವತೆಗಳಿಗೂ ಸಮ್ಮತನಾಗಿ ದಿವೃಭೋಗಿಯಾಗಿದ್ದನು ; ಆ ಪರ್ವತದಲ್ಲಿದ್ದ ಅಮೃತದಂತೆ ಸವಿದುವುಳ ಕಂದಮಲ ಫಲಗಳನ್ನು ತನ್ನ ಮನಸ್ಸು ಬಂದಂತೆ ಒಂದೊತ್ತು ಆಹಾರಮಾಡಿಕೊಳ್ಳುತ ಒಂದು ತಿಂಗಳು ಹಸಿವು ತೃಪೆಗಳಲ್ಲದೆ ತೃಪ್ತಿಯಾ ಗಿರುತಿದ್ದನು; ಆ ಕಪಿನಾಯಕರು ಅಂಥಾ ಆಶ್ರಮದಲ್ಲಿದ್ದ ಅಮೃತ ಕಂದಮಲಫಲಗಳನ್ನೂ ದಿವ್ಯವಾದ ಸಂಜೀ ವನೀ ಔಷಧಿಗಳನ್ನೂ ಪರಿಮಳಕುಂದಿ ಕಂದದಂಥಾ ಪುಷ್ಪಗಳನ್ನೂ ತೆಗೆದುಕೊಂಡು ನಾನಾಧಿಕ್ಕುಗಳಲ್ಲಿದ್ದ ಕಪಿಗೆ ಳನ್ನು ಕರೆದುಕೊಂಡು ಬಂದು ಸುಗ್ರೀವನನ್ನು ಕಾಣಿಸಿಕೊಂಡು ತಾವು ತಂದ ದಿವೃಫಲಗಳನ್ನು ಕಾಣಿಕೆಯಾಗಿ ಕೆಟ್ಟು ಆತನು ಆ ಫಲಗಳನ್ನು ತೆಗೆದುಕೊಂಡು ಅತಿ ಹರ್ಷಪಡಲು ಆತನನ್ನು ಕುರಿತು “ ಎಲೈ ಸ್ವಾಮಿ ಸುಗ್ರೀ ವನೆ, ಸಮುದ್ರ ಪರ್ಯಂತರವಾದ ಭೂಮಂಡಲದೊಳಗಿದ್ದ ಕಪಿಗಳೆಲ್ಲವನ್ನೂ ಕರೆದುಕೊಂಡು ಬಂದೆವು ; ಎಲ್ಲರೂ ಬರುತ್ತಿದ್ದಾರೆ” ಎಂದು ಹೇಳಿದರು. ಆ ಮಾತನ್ನು ಕೇಳಿ ಸುಗ್ರೀವನು ಅತಿ ಹರ್ಷಬಟ್ಟು ಅವರಿಗೆ ಉಚಿತವಾದ ಉಡುಗರೆಗಳನ್ನು ಕೊಟ್ಟು ಸನ್ಮಾನಿಸಿ ಅವರವರ ಮನೆಗಳಿಗೆ ಕಳುಹಿಸಿದನು, u - s, ೩V ನ ಅ ಧ್ಯಾ ಯ . ಸು ಗಿ) ವ ನು ಶ್ರೀ ರಾ ನ ನ ನ್ನು ಕಾ ಣಿ ನಿ ಕೈ ೦ ಡ ದ್ದು . ಎಳೆ ಕುಶಲವರುಗಳರಾ, ಆ ಬಳಿಕ ಅಕ್ಷಣನು ಅತಿ ವಿನಯದಿಂದ ಸುಗ್ರೀವನಿಗೆ ಸಂತೋಷವಾಗುವ ಮರದೆಯಲ್ಲಿ ಆತನನ್ನು ಕುರಿತು ' ಎಲೈ ಸುಗ್ರೀವನೆ, ಇನ್ನು ನಾವು ನಿನ್ನ ಚಿತ್ರಕ್ಕೆ ಹರ್ಷವಾದನಕ್ಷದಲ್ಲಿ ಶ್ರೀ ರಾಮನಿರುವ ಎಡೆಗೆ ಹೋಗುವದೇ ಕಾರ್ಯವು ” ಎಂದು ಹೇಳಿದನು. ಆ ಮಾತನ್ನು ಕೇಳಿ ಸುಗ್ರೀವನು ಅತಿ ಪ್ರೀತಿಯಿಂದ “ ಎಲೈ ಲಕ್ಷಣ, ನಾನು ನೀನು ಹೇಳಿದ ಮಾತಿದೆ ಯಲ್ಲಿ ಕೇಳಿಕೊಂಡಿರುವೆನಲ್ಲದೆ ಮತ್ತೊಂದಲ್ಲ ; ನನಗೆ ಮಹಾ ಸಂತೋಷವಾಯಿತು ; ಶ್ರೀರಾಮನ ಸವಿಾಪಕ್ಕೆ ಹೋಗೋಣ ಬಾ ” ಎಂದು ಹೇಳಿ ತಾರಾದೇವಿ ಮೊದಲಾದ ಸ್ತ್ರೀಯರನ್ನು ಅಂತಃಪುರಕ್ಕೆ ಕಳುಹಿಸಿ ತನ್ನ ಪ್ರಧಾನ ರನ್ನು ಕರೆದು ಶೀಘ್ರವಾಗಿ ಪಾಲಕಿಯನ್ನು ಸಣೇಗಮಾಡಿಸಲು ಕಟ್ಟು ಮಾಡಿದನು. ಆ ಪ್ರಧಾನರು ಮಹಾಪ್ರಸಾದವೆಂದು ಆತನ ವಾಕ್ಯವನ್ನು ಶಿರಸಾವಹಿಸಿ ಅತಿ ಶೀಘ್ರದಲ್ಲಿ ಪಾಲಕಿಯನ್ನು ಸಜ್ಞ ಮಾಡಿ ತರಲು ಸುಗ್ರೀವನು ಆ ಪಾಲಕಿಯನ್ನು ನೋಡಿ ಸಂತೋಷದಿಂದ ಲಕ್ಷಣನನ್ನು ಸಂತವಿಟ್ಟು ಆತನ ಸಮೇತನಾಗಿ ಪಾಲಕಿಯನ್ನೇರಿಕೊಂಡು ಕ್ಷೇತಛತ್ರ ಕ್ಷೇತಚಾಮರ ಶಂಬ ಭೇರಿ ಮೊದಲಾದ ರಾಜಚಿನ್ನಗಳಿಂದ ದೇದೀಪ್ಯಮಾನವಾಗಿ ಒಪ್ಪುತ ಆಯುಧಪಾಣಿಗಳಾದ ಅನೇಕ ಕವಿನಾಯಕರನ್ನು ಕೂಡಿಕೊಂಡು ಶ್ರೀರಾಮನ