ವಿಷಯಕ್ಕೆ ಹೋಗು

ಪುಟ:ಕನ್ನಡ ರಾಮಾಯಣ ಕಿಷ್ಕಿಂಧಾಕಾಂಡ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಿ ೩ ೦ ಧಾ ಕಾ ೦ ಡ೩೯ ನೆ ಆ ಧೈಾ ಯ . M ದನ್ನು ಬಲ್ಲೆನು ; ನಿನ್ನ ಸಹಾಯದಿಂದ ನಾನು ಸಮಸ್ತ ಶತ)ಗಳನ್ನೂ ಜಯಿಸುವೆನು ; ನೀನು ನನ್ನ ಮಿತ್ರನಾ ದ್ದರಿಂದ ನನಗೆ ಸಹಾಯವಾಗಬೇಕು ; ರಾವಣನು ತನ್ನ ವಿನಾಶ ಕಾಲವು ಓದದ್ದರಿಂದ ಸೀತಾದೇವಿಯನ್ನು ಅಪಹರಿ ಸಿಕೊಂಡು ಹೋದನು ; ಪುರ್ವದಲ್ಲಿ ಶಚೀದೇವಿಯ ತಂದೆಯಾದ ಪುಲಿವನು ಗರ್ವಿನಿ ದೇವೇಂದ್ರನು ಕರೆ ಕಳುಹಿಸಿದರೂ ಆ ದೇವಿಯನ್ನು ಕಳುಹಿಸದಿರಲು ದೇವೇಂದ್ರನು ಆತನನ್ನು ನಿಗ್ರಹಿಸಿ ಯಾವ ಮರಾರೆಯಲ್ಲಿ ಶಚೀ ದೇವಿಯನ್ನು ಕರೆದುಕೊಂಡು ಹೋದನೋ ಆ ಮರಾದೆಯಲ್ಲಿ ನಾನು ಸಮರದಲ್ಲಿ ರಾವಣನನ್ನು ಕೊಂದು ಸೀತಾದೇ ವಿಯನ್ನು ತರುತ್ತೇನೆ” ಎಂದು ನುಡಿದನು. ಆ ಸಮಯದಲ್ಲಿ ಮಹತ್ತಾದ ಕೆಂಧೂಳು ಕವಿದು ಸೂರಪ್ರಭೆಯ ದಿಕ್ಕುಗಳ ಕಾಣದಿರುವಹಾಗೂ ಸಮಸ್ತ ಪರ್ವತ ವನ ಸಹಿತವಾದ ಭೂಮಿಯ ಕಂಪನವಾಗುವಹಾಗೂ ಪರ್ವತಗಳಿಗೆ ಸಮಾನವಾದ ಶರೀರವುಳ್ಳವ ರಾಗಿಯ ಅತಿ ತೀಕ್ಷವಾದ ಕರದಾಡೆಗಳುಳ್ಳವರಾಗಿಯ ಮಹಾ ಬಲವಂತರಾಗಿಯ ಮೇಘದ ಗುಡುಗಿನಂತೆ ಬೊಬ್ಬಿಡುವವರಾಗಿಯೂ ಪ್ರಾತಃಕಾಲದ ಸೂರಪ್ರಭೆಯಂತೆ ಶರೀರಕಾಂತಿಯುಳ್ಳವರಾಗಿಯೂ ಚಂದ್ರನ ಪ್ರಭೆ ಯಂತೆ ಬಿಳುಪಾದ ಶರೀರಕಾಂತಿಯುಳ್ಳವರಾಗಿಯ ತಾವರೇ ಕಮಲಗಳ ಮಧ್ಯ ಕೇಸರಗಳಂತೆ ಸುವರ್ಣಮಯ ವಾದ ಶರೀರಕಾಂತಿಯುಳ್ಳವರಾಗಿಯೂ ಇದ್ದ ನೂರುಕೋಟಿ ಕಪಿಗಳಡನೆ ಕೂಡಿ ಎಂದು ಹರಿಯೆಂಬ ಕಸಿನಾ ಯಕನು ಅವರನ್ನು ಕಾಣಿಸಿಕೊಂಡನು ; ಆಮೇಲೆ ಮಹಾಮೇರು ಪರ್ವತದಂತ ಆಕಾರವುಳವನಾಗಿ ತಾರಾರೇ ವಿಗೆ ತಂದೆಯಾದ ತಾರನೆಂಬ ಕವಿನಾಯಕನು ಅನೇಕವಾದ ಕಪಿಸೇನೆಯೊಡನೆ ಕೂಡಿಕೊಂಡು ಬಂದು ಕಾಣಿಸಿ ಕೊಂಡನು ; ಆಮೇಲೆ ರುಮಾದೇವಿಯ ತಂದೆಯಾಗಿ ಸುಗ್ರೀವನ ಮಾವನು ಅನೇಕಕೂಟ ಕಪಿಸೇನೆಯೊಡನೆ ಕೂಡಿಕೊಂಡು ಬಂದು ಕಾಣಿಸಿಕೊಂಡನು ; ತಾವರೇ ಕಮಲಗಳ ಕೇಸರಗಳಂತೆ ತನುಕಾಂತಿಯುಳ್ಳವನಾಗಿ ಬಾ ಲಸೂರನಂತೆ ತೇಜಸ್ಸುಳ್ಳವನಾಗಿ ಅತ್ಯಂತ ಬುದ್ಧಿವಂತನಾಗಿ ಸಮಸ್ತ ಕಪಿಗಳಗೂ ಒಡೆಯನಾಗಿ ಹನುಮಂತನ ತಂದೆಯಾದ ಕೇಸರಿಯು ಅನೇಕ ಸೇನೆಯನ್ನು ಕೂಡಿಕೊಂಡು ಬಂದು ಕಾಣಿಸಿಕೊಂಡನು ; ಮುಸುವುಗಳಿಗೂ ಡೆಯನಾಗಿ ಮಹಾಬಲಪರಾಕ್ರಮಿಯಾದ ಗವಾಕ್ಷನೆಂಬ ಗೊಲಾಂಗೂಲನಾಯಕನು ಅನೇಕಸಾವಿರ ವೀರಭಟರೋಡ ನೆ ಕೂಡಿಕೊಂಡು ಬಂದು ಕಾಣಿಸಿಕೊಂಡನು ; ಕರಡಿಗಳಿಗೆ ಒಡೆಯನಾಗಿ ಮಹಾ ಬಲವಂತನಾದ ಧವನು ಇಪ್ಪತ್ತು ಸಾವಿರಕೋಟಿ ಕಪಿಗಳೊಡನೆ ಬಂದು ಕಾಣಿಸಿಕೊಂಡನು; ದರೀಮುಖನೆಂಬ ಕವಿನಾಯಕನು ಸಾವಿರ ಕೋಟಿ ಕಪಿಗಳಡನೆ ಕೂಡಿಕೊಂಡು ಬಂದು ಕಾಣಿಸಿಕೊಂಡನು ; ಅಶ್ವಿನೀದೇವತೆಗಳ ಮಕ್ಕಳಾಗಿ ಮಹಾ ಬಲವಂತರಾದ ಮೈಂದ ದೀವಿದರು ಕೋಟಿಸಾವಿರ ಕಪಿಗಳೊಡನೆ ಕೂಡಿಕೊಂಡು ಬಂದು ಕಾಣಿಸಿಕೊಂಡರು ; ಮಹಾ ಬಲವಂತನಾದ ಗಜನು ಮೂರುಕೋಟಿ ಕಪಿಗಳಡನೆ ಬಂದು ಕಾಣಿಸಿಕೊಂಡನು ; ಕರಡಿಗಳಿಗೆ ನಾಯ ಕನಾದ ಜುಂಬವನು ಹತ್ತು ಕೋಟಿ ಕರಡಿಗಳೊಡಗೂಡಿ ಬಂದು ಕಾಣಿಸಿಕೊಂಡನು ; ರುಮನೆಂಬ ಕವಿತಾ ಯಕನು ನೂರುಕೋಟ ಕಪಿಗಳೊಡನೆ ಕೂಡಿ ಬಂದು ಕಾಣಿಸಿಕೊಂಡನು; ಗಂಧಮಾದನನು ಸಾವಿರಕೋಟಿ ಸಾವಿರದ ನೂರು ಕಪಿಗಳೊಡನೆ ಬಂದು ಕಾಣಿಸಿಕೊಂಡನು ; ಆನೆಲೆ ತನ್ನ ತಂದೆಯಾದ ವಾಲಿಗೆ ಸಮಾನನಾದ ಪರಾಕ್ರಮವುಳ್ಳ ಅಂಗದನು ನೂರುಶಂಖ ಒಂದಪದ್ಮ ಒಂದುಸಾವಿರ ಕಪಿಗಳಡನೆ ಬಂದು ಕಾಣಿಸಿಕೊಂಡನು ; ನಕ್ಷತ್ರದಂತೆ ಕಾಂತಿಯುಳ್ಳ ತಾರನು ಐದುಕೋಟಿ ಕಪಿ ನಾಯಕರನ್ನು ಕೂಡಿಕೊಂಡು ಬಂದು ಕಾಣಿಸಿಕೊಂಡನು ಇಂದ್ರಜಾನುವು ಹನ್ನೊಂದುಸಾವಿರ ಕಪಿ ನಾಯಕರೊಡನೆ ಬಂದು ಕಾಣಿಸಿಕೊಂಡನು; ಆಮೇಲೆ ಬಾಲಸೂರ್ಯ ನ ಕಾಂತಿಯಂತೆ ತನುಕಾಂತಿಯುಕ್ತ ರಂಭಸ್ಸನು ಹನ್ನೊಂದುಸಾವಿರ ಬಂದುನೂರು ಕಪಿಗಳಡನೆ ಬಂದು ಕಾಣಿ ಸಿಕೊಂಡನು ; ದುರ್ಮುಖನು ಎರಡುಕೂಟಿ ಕಪಿಗಳೆಡನೆ ಬಂದು ಕಾಣಿಸಿಕೊಂಡನು ; ಕೈಲಾಸಪರ್ವತದ ಕೋಡುಗಳಿಗೆ ಸಮಾನವಾದ ಶರೀರವುಳ್ಳವನಾಗಿ ಭೀಮಪರಾಕ್ರಮವು ಹನುಮಂತನು ಸಾವಿರಕೋಟಿ ಕಪಿಗಳ ಡನೆ ಕೂಡಿಕೊಂಡುಬಂದು ಕಾಣಿಸಿಕೊಂಡನು ; ಮಹಾ ಪರಾಕ್ರಮಿಯಾದ ನಳನು ನೂರುಕೋಟಿ ಕಪಿಗಳ 18